ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12,000 ರುಪಾಯಿಗಿಂತ ಕಡಿಮೆ ಮೌಲ್ಯದ ಚೀನಾ ಮೊಬೈಲ್‌ ಬ್ಯಾನ್ ಮಾಡಲು ನಿರ್ಧಾರ?

|
Google Oneindia Kannada News

12,000 ರೂಪಾಯಿಗಳಿಗಿಂತ (150 ಡಾಲರ್) ಕಡಿಮೆ ದರ ಚೀನಾದ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಕುಗ್ಗುತ್ತಿರುವ ದೇಶೀಯ ಮೊಬೈಲ್ ಉದ್ಯಮವನ್ನು ಉಳಿಸುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಮುಂದಾಗಿದೆ. ಇದು ಶಿಯೋಮಿ (Xiaomi) ಸೇರಿದಂತೆ ಹಲವು ಚೀನಾ ಮೊಬೈಲ್ ಕಂಪನಿಗಳಿಗೆ ಹೊಡೆತ ನೀಡಲಿದೆ.

ಈ ಕ್ರಮವು ಚೀನಾದ ದೈತ್ಯರನ್ನು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯ ಕಡಿಮೆ ದರದ ಮೊಬೈಲ್ ವಲಯದಿಂದ ಹೊರಹಾಕುವ ಗುರಿಯನ್ನು ಹೊಂದಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ರಿಯಲ್‌ಮಿ ಮತ್ತು ಟ್ರಾನ್ಸ್‌ಷನ್‌ನಂತಹ ಹೆಚ್ಚಿನ ಪ್ರಮಾಣದ ಬ್ರಾಂಡ್‌ಗಳು ಸ್ಥಳೀಯ ಮೊಬೈಲ್ ತಯಾರಿಕಾ ಉದ್ಯಮದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಈ ಕ್ರಮಕ್ಕೆ ಮುಂದಾಗಿದೆ.

ಶ್ರೀಲಂಕಾ ಕಡೆ ಹೊರಟ ಚೀನಾ ಹಡಗು: ಭದ್ರತೆಯ ಬಗ್ಗೆ ಭಾರತದ ಆತಂಕಶ್ರೀಲಂಕಾ ಕಡೆ ಹೊರಟ ಚೀನಾ ಹಡಗು: ಭದ್ರತೆಯ ಬಗ್ಗೆ ಭಾರತದ ಆತಂಕ

ಭಾರತದ ಪ್ರವೇಶ ಮಟ್ಟದ ಮಾರುಕಟ್ಟೆಯಿಂದ ಚೀನಾದ ಶಿಯೋಮಿ ಮತ್ತು ಹಲವು ಮೊಬೈಲ್ ತಯಾರಿಕಾ ಕಂಪನಿಗಳನ್ನು ಹೊರಗಿಡುವುದರಿಂದ ಚೀನಾ ಕಂಪನಿಗಳ ಮೇಲೆ ಭಾರೀ ಹೊಡೆತ ಬೀಳಲಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾದ ಮೊಬೈಲ್ ಕಂಪನಿಗಳು ತಮ್ಮ ಬೆಳವಣಿಗೆಗಾಗಿ ಭಾರತದ ಮೇಲೆ ಹೆಚ್ಚು ಅವಲಂಬಿತವಾಗಿದೆ.

 ಚೀನಾ ಮೊಬೈಲ್‌ಗಳ ಪಾರುಪತ್ಯ

ಚೀನಾ ಮೊಬೈಲ್‌ಗಳ ಪಾರುಪತ್ಯ

ಅದರಲ್ಲೂ ಕೋವಿಡ್‌ ಹೊಡೆತದಿಂದ ಚೀನಾದ ದೈತ್ಯ ಮೊಬೈಲ್ ತಯಾರಿಕಾ ಕಂಪನಿಗಳನ್ನು ಪಾರು ಮಾಡಿದ್ದೇ ಭಾರತದ ಮೊಬೈಲ್ ಮಾರುಕಟ್ಟೆ. 12,000 ಕ್ಕಿಂತ ಕಡಿಮೆ ಮೌಲ್ಯದ ಸ್ಮಾರ್ಟ್‌ಫೋನ್‌ಗಳು 2022 ರವರೆಗಿನ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಮೊಬೈಲ್ ಮಾರಾಟದ ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡಿವೆ. ಮಾರಟವಾದ ಈ ಮೊಬೈಲ್‌ಗಳಲ್ಲಿ ಚೀನಾ ಮೊಬೈಲ್‌ಗಳ ಪಾಲು ಶೇಕಡ 80ರಷ್ಟಿದೆ.

ಸೋಮವಾರ ಹಾಂಗ್ ಕಾಂಗ್‌ನಲ್ಲಿ ವಹಿವಾಟಿನ ಅಂತಿಮ ನಿಮಿಷಗಳಲ್ಲಿ ಶಿಯೋಮಿ ಷೇರುಗಳು ನಷ್ಟ ಅನುಭವಿಸಿದವು. ಇದು ಶೇಕಡ 3.6 ರಷ್ಟು ಕುಸಿದಿದೆ, ಈ ವರ್ಷ ಶಿಯೋಮಿ ಷೇರುಗಳ ಮೌಲ್ಯವು ಶೇಕಡ 35 ಕ್ಕಿಂತ ಹೆಚ್ಚು ಕುಸಿದಿದೆ.

ಚೀನಾ-ತೈವಾನ್ ಬಿಕ್ಕಟ್ಟಿನಲ್ಲಿ ಭಾರತದ ನಿಲುವೇನು?ಚೀನಾ-ತೈವಾನ್ ಬಿಕ್ಕಟ್ಟಿನಲ್ಲಿ ಭಾರತದ ನಿಲುವೇನು?

 ಚೀನಾ ಕಂಪನಿಗಳ ಮೇಲೆ ಮನಿ ಲಾಂಡರಿಂಗ್ ಆರೋಪ

ಚೀನಾ ಕಂಪನಿಗಳ ಮೇಲೆ ಮನಿ ಲಾಂಡರಿಂಗ್ ಆರೋಪ

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಯಾವುದೇ ನೀತಿಗಳನ್ನು ಬಹಿರಂಗವಾಗಿ ಪ್ರಕಟಿಸುತ್ತದೆಯೋ ಅಥವಾ ಚೀನಾದ ಕಂಪನಿಗಳಿಗೆ ತನ್ನ ಆದ್ಯತೆಯನ್ನು ತಿಳಿಸಲು ಅನೌಪಚಾರಿಕ ಮಾರ್ಗಗಳನ್ನು ಬಳಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ ಎನ್ನಲಾಗಿದೆ.

ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಸಂಸ್ಥೆಗಳಾದ ಶಿಯೋಮಿ ಮತ್ತು ಪ್ರತಿಸ್ಪರ್ಧಿ ಒಪ್ಪೊ ಮತ್ತು ವಿವೊ ಕಂಪನಿಗಳನ್ನು ತಮ್ಮ ಹಣಕಾಸಿನ ಪರಿಶೀಲನೆಗೆ ಒಳಪಡಿಸಿದೆ. ತೆರಿಗೆ ಬೇಡಿಕೆಗಳು ಮತ್ತು ಮನಿ ಲಾಂಡರಿಂಗ್ ಆರೋಪಗಳನ್ನು ಎದುರಿಸುತ್ತಿದೆ. ಹುವೈ ಟೆಕ್ನಾಲಜಿಸ್ (Huawei Technologies Co.) ಮತ್ತು ಝಡ್‌ಟಿಇ ಕಾರ್ಪ್ (ZTE Corp.) ಟೆಲಿಕಾಂ ಉಪಕರಣಗಳನ್ನು ನಿಷೇಧಿಸಲು ಸರ್ಕಾರವು ಈ ಹಿಂದೆ ಅನಧಿಕೃತ ವಿಧಾನಗಳನ್ನು ಬಳಸಿದೆ. ಚೀನೀ ನೆಟ್‌ವರ್ಕಿಂಗ್ ಗೇರ್ ಅನ್ನು ನಿಷೇಧಿಸುವ ಯಾವುದೇ ಅಧಿಕೃತ ನೀತಿ ಇಲ್ಲದಿದ್ದರೂ, ಪರ್ಯಾಯ ಮೊಬೈಲ್‌ಗಳನ್ನು ಖರೀದಿಸಲು ಪ್ರೋತ್ಸಾಹಿಸಲಾಗುತ್ತದೆ.

 ಪ್ರತಿಕ್ರಿಯೆ ನೀಡಲು ನಕಾರ

ಪ್ರತಿಕ್ರಿಯೆ ನೀಡಲು ನಕಾರ

ಈ ಕ್ರಮವು ಆಪಲ್ ಇಂಕ್ (Apple Inc.) ಅಥವಾ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ (Samsung Electronics Co.) ಮೇಲೆ ಪರಿಣಾಮ ಬೀರುವುದಿಲ್ಲ. ಈ ಮೊಬೈಲ್‌ಗಳ ಬೆಲೆಗಳು 12,000 ರುಪಾಯಿಗಳಿಗಿಂದ ಅಧಿಕವಾಗಿದೆ. ಈ ವಿಚಾರದ ಬಗ್ಗೆ ಶಿಯೋಮಿ, ರಿಯಲ್‌ಮಿ, ಟ್ರಾನ್ಸಿನ್‌ ಮೊಬೈಲ್ ಕಂಪನಿಯ ಪ್ರತಿನಿಧಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಭಾರತದ ತಂತ್ರಜ್ಞಾನ ಸಚಿವಾಲಯ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಘರ್ಷಣೆಯಲ್ಲಿ ಹನ್ನೆರಡು ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ 2020 ರ ಮಾರ್ಚ್-ಏಪ್ರಿಲ್ ವೇಳೆಯಲ್ಲಿ ಭಾರತವು ಚೀನಾದ ಸಂಸ್ಥೆಗಳ ಮೇಲೆ ಒತ್ತಡವನ್ನು ಹೆಚ್ಚಿಸಿತು. ಉಭಯ ದೇಶಗಳ ನಡುವಿನ ಸಂಬಂಧಗಳು ಕ್ಷೀಣಿಸುತ್ತಿರುವ ಕಾರಣ, ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ವೀಚಾಟ್ ಮತ್ತು ಬೈಟ್‌ಡ್ಯಾನ್ಸ್ ಲಿಮಿಟೆಡ್‌ನ ಟಿಕ್‌ಟಾಕ್ ಸೇರಿದಂತೆ 300 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಿದೆ.

 ದೇಶೀಯ ಮೊಬೈಲ್‌ ಕಂಪನಿ ಬೆಳವಣಿಗೆಗೆ ಚೀನಾ ಅಡ್ಡಿ

ದೇಶೀಯ ಮೊಬೈಲ್‌ ಕಂಪನಿ ಬೆಳವಣಿಗೆಗೆ ಚೀನಾ ಅಡ್ಡಿ

ದೇಶೀಯ ಮೊಬೈಲ್ ತಯಾರಿಕಾ ಕಂಪನಿಗಳಾದ ಲಾವಾ ಮತ್ತು ಮೈಕ್ರೋಮ್ಯಾಕ್ಸ್‌ ಸೇರಿದಂತೆ ಹಲವು ಕಂಪನಿಗಳು ಭಾರತದ ಸ್ಮಾರ್ಟ್‌ಫೋನ್ ಮಾರಾಟದ ಅರ್ಧಕ್ಕಿಂತ ಕಡಿಮೆ ಭಾಗವನ್ನು ಒಳಗೊಂಡಿವೆ, ಚೀನಾದ ಅಗ್ಗದ ಮತ್ತು ಹೆಚ್ಚಿನ ಆಯ್ಕೆ ಹೊಂದಿರುವ ಮೊಬೈಲ್‌ಗಳು ದೇಶೀಯ ಮೊಬೈಲ್ ತಯಾರಿಕಾ ಕಂಪನಿಗಳ ಬೆಳವಣಿಗೆಗೆ ಅಡ್ಡಿಪಡಿಸಿವೆ.

ಚೀನೀ ಸ್ಮಾರ್ಟ್‌ಫೋನ್ ಪ್ಲೇಯರ್‌ಗಳು ಈಗ ಭಾರತದಲ್ಲಿ ಬಹುಪಾಲು ಸಾಧನಗಳನ್ನು ಮಾರಾಟ ಮಾಡುತ್ತಾರೆ, ಆದರೆ ಅವರ ಮಾರುಕಟ್ಟೆ ಪ್ರಾಬಲ್ಯವು "ಮುಕ್ತ ಮತ್ತು ನ್ಯಾಯಯುತ ಸ್ಪರ್ಧೆಯ ಆಧಾರದ ಮೇಲೆ" ಇರಲಿಲ್ಲ ಎಂದು ಭಾರತದ ಜೂನಿಯರ್ ಟೆಕ್ ಸಚಿವರು ಕಳೆದ ವಾರ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಗೆ ತಿಳಿಸಿದರು.

English summary
India seeks to restrict Chinese smartphone makers from selling devices cheaper than Rs.12,000 to kickstart its faltering domestic industry. Exclusion from India's entry-level market would hurt Xiaomi and its peers, which in recent years have increasingly relied on India to drive growth while their home market endures a series of Covid-19 lockdowns that crippled consumption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X