UPS Updates: ಸರ್ಕಾರಿ ನೌಕರರಿಗಾಗಿ ಏಕೀಕೃತ ಪಿಂಚಣಿ ಯೋಜನೆ ಪ್ರಕಟಿಸಿದ ಸರ್ಕಾರ

ನವದೆಹಲಿ, ಜನವರಿ 26: ಕೇಂದ್ರ ಸರ್ಕಾರ ತನ್ನ ನೌಕರರಿಗಾಗಿ ಮುಂದಿನ ಆರ್ಥಿಕ ವರ್ಷದಿಂದ 'ಏಕೀಕೃತ ಪಿಂಚಣಿ ವ್ಯವಸ್ಥೆ' (UPS) ಜಾರಿ ಮಾಡುವುದಾಗಿ ತಿಳಿಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಬರುವ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಈ ಆಯ್ಕೆ ಪಡೆಯುವ ಕೇಂದ್ರ ನೌಕರರಿಗೆ ಈ ಏಕೀಕೃತ ಪಿಂಚಣಿ ಯೋಜನೆ ಅನ್ವಯವಾಗುತ್ತದೆ ಎಂದು ಕೇಂದ್ರ ಸಚಿವಾಲಯವು ಇತ್ತೀಚೆಗೆ ಘೋಷಿಸಿದೆ.

ಹೊಸ ಪಿಂಚಣಿಗೆ ಯೋಜನೆಗೆ ವ್ಯಾಪಕ ಆಕ್ರೋಶ ಕೇಳಿ ಬಂದ ಬೆನ್ನಲ್ಲೆ ಏಕೀಕೃತ ಪಿಂಚಣಿ ಯೋಜನೆಗೆ ಜಾರಿಗೆ ಸರ್ಕಾರ ಮುಂದಾಗಿದೆ. ಅಲ್ಲದೇ ಇತ್ತೀಚೆಗೆ ಏಕೀಕೃತ ಪಿಂಚಣಿ ಯೋಜನೆ ಕಾರ್ಯಗತಗೊಳಿಸಲು ನಿಯಮಗಳನ್ನು 'ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)' ಹೊರಡಿಸಬಹುದೆಂದು ಅಧಿಕೃತವಾಗಿ ಕೇಂದ್ರ ಸರ್ಕಾರ ತಿಳಿಸಿದೆ.

Central Give Unified Pension Scheme Benefits for Government Employees From April 1st 2025

ಏಕೀಕೃತ ಪಿಂಚಣಿ ಯೋಜನೆಯನ್ನು 2025ರ ಏಪ್ರಿಲ್ 1ರಂದು ಅನುಷ್ಠಾನ ತರಲು ಕೇಂದ್ರ ಸರ್ಕಾರ ಎಲ್ಲ ತಯಾರಿ ನಡೆಸಿದೆ. ಈ ಸಂಬಂಧ ಸರ್ಕಾರ ಶನಿವಾರ ಅಧಿಕೃತ ಮಾಹಿತಿ ನೀಡಿದೆ. ಏಕೀಕೃತ ಪಿಂಚಣಿ ಯೋಜನೆಗೆ ಯಾರೆಲ್ಲ ಬರಲಿದ್ದಾರೆ ಎಂಬುದನ್ನು ತಿಳಿಸಿದೆ.

ಕೇಂದ್ರ ಸರ್ಕಾರಿ ನೌಕರರು ಹಾಲಿ ಪಿಂಚಣಿ ಯೋಜನೆ ಮತ್ತು ಏಕೀಕೃತ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡ ಬಳಿಕ ಪುನಃ ಹಳೇಯ ಪಿಂಚಣಿ ಆಯ್ಕೆ ಅವಕಾಶ ಸಿಗುವುದಿಲ್ಲ. ಕಳೆದ ವರ್ಷ (2024) ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಸುಮಾರು 2.3 ಮಿಲಿಯನ್ ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ನೀತಿ ಜಾರಿಗೆ ಅನುಮೋದನೆ ನೀಡಿತ್ತು. ಆದರೆ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Central Give Unified Pension Scheme Benefits for Government Employees From April 1st 2025

ಏಕೀಕೃತ ಪಿಂಚಣಿ ವ್ಯವಸ್ಥೆಯು 25 ವರ್ಷ ಸೇವೆ ಸಲ್ಲಿಸಿದ ನೌಕರನಿಗೆ ಆತ ನಿವೃತ್ತಿಗೂ 12 ತಿಂಗಳ ಮೊದಲು ನೌಕರರ ಮೂಲ ವೇತನದ ಶೆಕಡಾ 50ರಷ್ಟು ಹಣ ಒದಗಿಸುವಿಕೆಯನ್ನು ಖಾತರಿಪಡಿಸುತ್ತದೆ. ಸರ್ಕಾರದ ಈ ನಿಯಮಗಳು ನಿವೃತ್ತಿ ಪ್ರಯೋಜನಗಳ ಬಯಸಿದ್ದ ಫೆಡರಲ್ ಸಿಬ್ಬಂದಿ ಒಕ್ಕೂಟಕ್ಕೆ ಸರ್ಕಾರದ ಈ ನಿರ್ಧಾರ ಕೊಂಚ ಸಮಾಧಾನ ತಂದಿದೆ.

ಹೊಸ ಪಿಂಚಣಿ ಯೋಜನೆ (NPS) ರಚನೆಗೆ ಎರಡು ವರ್ಷಗಳ ಹಿಂದೆ (2023)ಹಣಕಾಸು ಕಾರ್ಯದರ್ಶಿ ಕ್ಯಾಬಿನೆಟ್ ಕಾರ್ಯದರ್ಶಿ-ನಿಯೋಜಿತ ಟಿವಿ ಸೋಮನಾಥನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಯೋಜನೆಗೆ ವಿಪಕ್ಷಗಳು, ಕೆಲವು ನೌಕರರ ಸಂಘಗಳು, ಹಳೆಯ ಪಿಂಚಣಿಗೆ ಬದಲಾಗಿ, ಹೊಸ ಪಿಂಚಣಿ ವ್ಯವಸ್ಥೆ ತರುವುದನ್ನು ವಿರೋಧಿಸಿದವು. ಈ ಸಂಬಂಧ ಅನೇಕ ದೂರುಗಳು ಬಂದು, ಕೊನೆಗೆ ಒಂದು ರೀತಿಯ ವಿವಾದ ಉಂಟಾಗಿತ್ತು.

ಕೇಂದ್ರ ಸರ್ಕಾರದ ಅಧಿಸೂಚನೆಯು ಫೆಡರಲ್ ಸಿಬ್ಬಂದಿ ಒಕ್ಕೂಟದ ಗೊಂದಲಗಳೂ, ನೌಕರರಿಗೆ ಈ ಬಗ್ಗೆ ಇದ್ದ ಪ್ರಶ್ನೆಗಳಿಗೆ ಉತ್ತರಿಸಿದಂತಾಗಿದೆ. ಏಕೀಕೃತ ಪಿಂಚಣಿ ಯೋಜನೆ (UPS) ಅಡಿಯಲ್ಲಿ, ಉದ್ಯೋಗಿ 25 ವರ್ಷಗಳಿಗಿಂತ ಕಡಿಮೆ ಸೇವೆ ಅಂದರೆ, 10 ವರ್ಷಗಳಿಗಿಂತ ಹೆಚ್ಚು ಕೆಲಸ ಮಾಡಿದ್ದರೆ, ಅಂತವರಿಗೆ ಅನುಪಾತದ ಆಧಾರದಲ್ಲಿ ಪಿಂಚಣಿ ಪಡೆಯುವುದನ್ನು ಯುಪಿಎಸ್ ಖಚಿತಪಡಿಸುತ್ತದೆ.

ಈ ಹೊಸ ಪಿಂಚಣಿ ಯೋಜನೆಯು ಮೃತರ ಕುಟುಂಬವರಿಗೂ ಪಿಂಚಣಿಯ ಪ್ರಯೋಜನ ನೀಡುತ್ತದೆ. ಮೃತ ಉದ್ಯೋಗಿಯ ಕೊನೆಯದಾಗಿ ಪಡೆದ ವೇತನದ ಶೇಕಡಾ 60 ರನ್ನು ಅವರು ಕುಟುಂಬಕ್ಕೆ ನೀಡಲು ಸೂಚಿಸುತ್ತದೆ. ಕೇಂದ್ರ ಸರ್ಕಾರದಲ್ಲಿ ಕನಿಷ್ಠ 10 ವರ್ಷ ದುಡಿದು ನಿವೃತ್ತಿ ಆಗುವ ಉದ್ಯೋಗಿಗಳು ಮಾಸಿಕವಾಇಗ ರೂ.10,000 ಪಿಂಚಣಿ ಪಡೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+