ರಾಜಕೀಯದಲ್ಲಿ ಮಠಾಧೀಶರ ಶಾಮೀಲು ಆರೋಪ: ಕೇಂದ್ರ ಬಿಜೆಪಿ ವಿರುದ್ಧ ಸಿಎಂ ಕೆಸಿಆರ್ ಗುಡುಗು
ಬೆಂಗಳೂರು, ಜೂನ್ 16: ಇತ್ತೀಚಿನ ದಿನಗಳಲ್ಲಿ ಮಠಗಳಲ್ಲಿ ಪಾಠ-ಪ್ರವಚನ, ಉಪನ್ಯಾಸ ನೀಡಬೇಕಾದ ಮಠಾಧೀಶರು ತಮ್ಮ ಧರ್ಮ, ಜಾತಿಯ ರಾಜಕೀಯ ನಾಯಕರ ಬೆನ್ನಿಗೆ ನಿಲ್ಲುತ್ತಿದ್ದಾರೆ. ಅದಷ್ಟೇ ಅಲ್ಲದೇ ರಾಜಕಾರಣಿಗಳ ಪರ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ಬಿಜೆಪಿ ಕಾರಣ ಎಂದು ಕೆಲವು ರಾಜಕೀಯ ಮುಖಂಡರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ಧಾರ್ಮಿಕ ವ್ಯಕ್ತಿಗಳನ್ನು ರಾಜಕೀಯದಲ್ಲಿ ತೊಡಗಿಸಿಕೊಂಡಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಗುರುವಾರ ಆರೋಪಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರವು ಧರ್ಮ ಗುರುಗಳು/ ಧಾರ್ಮಿಕ ಮುಖಂಡರನ್ನು ಎಲ್ಲಿಂದ ರಾಜಕೀಯಕ್ಕೆ ತರುತ್ತಿದ್ದಾರೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಬುಧವಾರ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ ಕುರಿತು ಹೊಸ ಸಮಾಲೋಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಸಂಬಂಧ ಸಂಹಿತೆ ಬಗ್ಗೆ ಆಯೋಗವು ಸಾರ್ವಜನಿಕ ಹಾಗೂ ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯ ಕೇಳಿದೆ. ಈ ಕಾರಣಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಮತ್ತು ಧರ್ಮಗುರುಗಳ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ.
ರಾಜಕೀಯದಲ್ಲಿ ನುಸುಳುತ್ತಿರುವ ಮಠಾಧೀಶರು
ಧರ್ಮ ಗುರುಗಳು, ಮಠಾಧೀಶರುಗಳು ಮಠಗಳನ್ನು ಸಮಪರ್ಕವಗಿ ನಡೆಸಬೇಕು. ದೇವರಿಗೆ ಪೂಜೆ ನಡೆಸಬೇಕು. ಆದರೆ ಇದನ್ನು ಬಿಟ್ಟು ಅವರೆಲ್ಲ ರಾಜಕೀಯ ಆಡಳಿತದಲ್ಲಿ ನುಸುಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕೆಸಿಆರ್ ಹೇಳಿದರು.
ಈ ಹಿಂದೆ 2018ರ ಆಗಸ್ಟ್ ತಿಂಗಳಲ್ಲಿ ಕೊನೆಕೊಂಡ 21ನೇ ಕಾನೂನು ಆಯೋಗವು ಸಮಸ್ಯೆಯನ್ನು ಪರಿಶೀಲಿಸಿದೆ. ಈಗಾಗಲೇ ಎರಡು ಭಾರಿ ಸಂಹಿತೆ ಕುರಿತು ಅಭಿಪ್ರಾಯ ಕೇಳಿದೆ. ನಂತರ ಅದೇ ವರ್ಷ (2018) ಆಯೋಗವು 'ಕುಟುಂಬ ಕಾನೂನಿನ ಸುಧಾರಣೆಗಳು' ಬಗ್ಗೆ ಸಮಾಲೋಚನಾ ಪತ್ರ ನೀಡಿದೆ.
22ನೇ ಕಾನೂನು ಆಯೋಗದ ನಿರ್ಧಾರ ಸೂಕ್ತವಾಗಿದೆ
ಸದ್ಯ ಏಕರೂಪ ನಾಗರಿಕ ಸಂಹಿತೆ ಪ್ರಸ್ತುತತೆ ಮತ್ತು ಪ್ರಾಮುಖ್ಯತೆ ಹಾಗೂ ವಿಷಯದ ಮೇಲಿನ ವಿವಿಧ ನ್ಯಾಯಾಲಯದ ಆದೇಶ ಗಮನದಲ್ಲಿಟ್ಟುಕೊಂಡು ಸಮಾಲೋಚನಾ ಪತ್ರ ನೀಡಲಾಗಿದೆ. ಇದು ನೀಡಿ ಮೂರು ವರ್ಷಗಿಂತಲೂ ಹೆಚ್ಚು ಕಾಲ ಗತಿಸಿದೆ. ಹೀಗಾಗಿ ಸದ್ಯದ ಭಾರತದ 22 ನೇ ಕಾನೂನು ಆಯೋಗವು ಸಂಹಿತ ವಿಚಾರದಲ್ಲಿ ಕೈಗೊಂಡ ನಿಲು ಸರಿಯಾಗಿದೆ ಎಂದು ಪರಿಗಣಿಸಲಾಗಿದೆ ಎಂದು ತಿಳಿಸಲಾಗಿದೆ.
ಇತ್ತೀಚೆಗೆ 22 ನೇ ಕಾನೂನು ಆಯೋಗವು ಜೂನ್ 2016 ರಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯವು ಕಳುಹಿಸಿದ ಉಲ್ಲೇಖದ ಮೇಲೆ ಯುಸಿಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದೆ. ಅದರ ಆಧಾರದಲ್ಲಿ ನೋಡುವುದಾದರೆ, ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಬೃಹತ್ ಹಾಗೂ ಮಾನ್ಯತೆಯ ಧಾರ್ಮಿಕ ಮುಖಂಡರುಗಳು/ಸಂಸ್ಥೆಗಳಿಂದ, ಸಾರ್ವಜನಿಕ ಅಭಿಪ್ರಾಯ ಕೇಳಲು 22ನೇ ಕಾನೂನು ಆಯೋಗ ನಿರ್ಧರಿಸಿದೆ ಎಂದು ಸಮೀತಿಯೊಂದು ಮಾಹಿತಿ ನೀಡಿದೆ.
ಕಾನೂನು ಆಯೋಗಕ್ಕೆ ನೋಟಿಸ್ ನೀಡಿದ ದಿನಾಂಕದಿಂದ ಒಂದು ತಿಂಗಳೊಳಗೆ ಸಂಹಿತ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಇದೆ. ಅಗತ್ಯ ಬಿದ್ದಲ್ಲಿ ಆಯೋಗವು ವೈಯಕ್ತಿಕ ವಿಚಾರಣೆ ಅಥವಾ ಚರ್ಚೆಗಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಕರೆಯಬಹುದು ಅಂತಲೂ ಸಮಿತಿ ತಿಳಿಸಿದೆ.
ಏಕರೂಪ ನಾಗರಿಕ ಸಂಹಿತೆಯು ದೇಶದ ಎಲ್ಲಾ ನಾಗರಿಕರಿಗೆ ಧರ್ಮವನ್ನು ಆಧರಿಸಿರದ ಸಾಮಾನ್ಯ ಕಾನೂನು ಅನ್ನು ಒಳಗೊಂಡಿದೆ. ಆನುವಂಶಿಕತೆ, ದತ್ತು ಸ್ವೀಕಾರ ಹಾಗೂ ಉತ್ತರಾಧಿಕಾರದ ವಿಚಾರಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳನ್ನು ಒಳಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನವು ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಮುಖ ಅಂಶವೇ ಆಗಿದೆ. ಸದರಿ 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯು ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಬಿಜೆಪಿ ಭರವಸೆ ನೀಡಿತ್ತು. ಅದೇ ರೀತಿ ಉತ್ತರಾಖಂಡನಲ್ಲಿ ಏಕರೂಪ ನಾಗರಿಕ ಸಂಹಿತೆ ರೂಪಿಸುವ ಪ್ರಕ್ರಿಯೆಯಲ್ಲಿ ಬಿಜೆಪಿ ಇದೆ.












Click it and Unblock the Notifications