Year Ender 2024: ಈ ವರ್ಷ ವಿಚ್ಛೇದನ ಪಡೆದ ಪ್ರಮುಖರು ಇವರು
2024 ಮುಗಿಯಲು ಇನ್ನು ಕೆಲವೇ ದಿನಗಳಿಗೆ ಹಳೆ ವರ್ಷವನ್ನು ಬೀಳ್ಕೊಟ್ಟು ಹೊಸ ವರ್ಷವನ್ನು ಸ್ವಾಗತಿಸಲು ಜಗತ್ತು ಸಜ್ಜಾಗುತ್ತಿದೆ. 2024ರ ವರ್ಷದಲ್ಲಿ ಜಗತ್ತು ಅನೇಕ ಸಿಹಿ-ಕಹಿಗಳನ್ನು ಕಂಡಿದೆ. ಭಾರತದ ಮಟ್ಟಿಗೆ ಕೂಡ ಈ ವರ್ಷ ಅನೇಕ ನೋವು - ಸಲಿವು ಸಿಕ್ಕಿವೆ. ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿದ್ದು, ಒಲಿಂಪಿಕ್ಸ್‌ನಲ್ಲಿ ಭಾರತದ ಉತ್ತಮ ಪ್ರದರ್ಶನ, ಹಾಕಿಯಲ್ಲಿ ಕಂಚು ಭಾರತದ ಅಭಿಮಾನಿಗಳಿಗೆ ಮರೆಯಲಾಗದ ವರ್ಷವಾಗಿದೆ. ಅನೇಕ ಸ್ಟಾರ್ ಗಳು ಈ ವರ್ಷ ಮದುವೆಯಾಗಿದ್ದರೆ, ಅನೇಕರ ಬಾಳಲ್ಲಿ ಬಿರುಗಾಳಿ ಎದ್ದಿದ್ದು ವಿಚ್ಛೇದನ ಪಡೆದುಕೊಂಡಿದ್ದಾರೆ.
2024ರಲ್ಲಿ ಅನೇಕ ಸಿನಿಮಾ ತಾರೆಗಳು ಮತ್ತು ಕ್ರೀಡಾಪಟುಗಳಿಗೆ ಕಹಿ ವರ್ಷವಾಗಿತ್ತು, ಮುಖ್ಯವಾಗಿ ದಾಂಪತ್ಯದ ವಿಚಾರ ಸಾಕಷ್ಟು ಸದ್ದು ಮಾಡಿತ್ತು, ಹಾರ್ದಿಕ್ ಪಾಂಡ್ಯ ವಿಚ್ಛೇದನ ಈ ವರ್ಷ ಹೆಚ್ಚಿನ ಚರ್ಚೆಗೆ ಕಾರಣವಾಗಿತ್ತು, ಎಆರ್ ರೆಹಮಾನ್ ವಿಚ್ಛೇದನ ಪಡೆದಿದ್ದು ಅನೇಕರಿಗೆ ಆಘಾತ ನೀಡಿತ್ತು. 2024ರಲ್ಲಿ ವಿಚ್ಛೇದನ ಪಡೆದ ಪ್ರಮುಖ ಸ್ಟಾರ್ ಜೋಡಿಗಳ ಪಟ್ಟಿ ಇಲ್ಲಿದೆ.

ಹಾರ್ದಿಕ್ ಪಾಂಡ್ಯ
ಪ್ರೀತಿಸಿದ ಹುಡುಗಿ ಸರ್ಬಿಯಾದ ಮಾಡೆಲ್ ಮತ್ತು ನಟಿ ನತಾಶಾ ಸ್ಟಾಂಕೋವಿಕ್‌ರನ್ನು 2020ರಲ್ಲಿ ಮದುವೆಯಾಗಿದ್ದ ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕೇ ವರ್ಷದಲ್ಲಿ ವೈವಾಹಿಕ ಜೀವನವನ್ನು ಕೊನೆಗೊಳಿಸಿಕೊಂಡರು. 2024ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರಿದ ಪಾಂಡ್ಯ ರೋಹಿತ್ ಶರ್ಮಾ ಬದಲಾಗಿ ನಾಯಕರಾಗಿದ್ದು ಸಾಕಷ್ಟು ಟೀಕೆಗೆ ಕಾರಣವಾಗಿತ್ತು, ಮೈದಾನದಲ್ಲೇ ಅವರನ್ನು ನಿಂದಿಸಲಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಯಿತು, ಮುಂಬೈ ಇಂಡಿಯನ್ಸ್ ತಂಡ ಅವರ ನಾಯಕತ್ವದಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಅವರಿಗೆ ಮತ್ತಷ್ಟು ಬೇಸರ ತರಿಸಿತು. ಇದೆಲ್ಲದರ ನಡುವೆ ಅವರು ತಮ್ಮ ವಿಚ್ಛೇದನವನ್ನು ಘೋಷಿಸಿದರು. ಇದು ಮತ್ತೊಂದು ರೀತಿಯ ಚರ್ಚೆಗೆ ಕಾರಣವಾಯಿತು. ಆದರೆ ತಮ್ಮ ವಿರುದ್ಧದ ಟೀಕೆಗಳಿಗೆ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಉತ್ತರ ಕೊಟ್ಟರು.
ಸಾನಿಯಾ ಮಿರ್ಜಾ
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಈ ವರ್ಷ ಅಷ್ಟೇನೂ ಉತ್ತಮವಾಗಿರಲಿಲ್ಲ. 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗರಾಗಿದ್ದ ಶೋಯೆಬ್ ಮಲಿಕ್ ಜೊತೆ ಮದುವೆಯಾಗಿದ್ದ ಅವರು ಈ ವರ್ಷ ವಿಚ್ಛೇದನ ಪಡೆಯುವ ಮೂಲಕ 14 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದರು, ಸಾನಿಯಾಗೆ ವಿಚ್ಛೇದನ ನೀಡಿದ ಶೋಯೆಬ್ ಮಲಿಕ್ ಎರಡನೇ ಮದುವೆಯಾದರೆ ಸಾನಿಯಾ ಮಿರ್ಜಾ ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ.
ಎಆರ್ ರೆಹಮಾನ್ & ಸೈರಾ ಬಾನು
ಭಾರತದ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತು ಸೈರಾ ವಿಚ್ಛೇದನ ಪಡೆದಿದ್ದು ಅಭಿಮಾನಿಗಳಿಗೆ ಆಘಾತ ನೀಡಿತ್ತು. ಮಾರ್ಚ್ 12, 1995ರಲ್ಲಿ ಮದುವೆಯಾಗಿದ್ದ ಈ ಜೋಡಿ 29 ವರ್ಷಗಳ ಸಂಬಂಧವನ್ನು ಮುರಿದರು. ನವೆಂಬರ್ 2024 ರಲ್ಲಿ ವಿಚ್ಛೇದನ ಘೋಷಿಸಿದರು. ಈ ಜೋಡಿಗೆ ಖತೀಜಾ ರೆಹಮಾನ್, ರಹೀಮಾ ರೆಹಮಾನ್ ಮತ್ತು ಎಆರ್ ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.
ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಐಶ್ವರ್ಯಾ ಮತ್ತು ಖ್ಯಾತ ನಟ ಧನುಷ್ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡರು. ಈ ಇಬ್ಬರು ಬೇರೆ ಬೇರೆ ಇದ್ದಾರೆ, ವಿಚ್ಛೇದನ ಪಡೆಯುತ್ತಾರೆ ಎಂದು ಹಲವು ದಿನಗಳಿಂದ ವದಂತಿಗಳಿದ್ದವು. ನವೆಂಬರ್ 27, 2024ರಲ್ಲಿ ಈ ಜೋಡಿ ತಾವು ವಿಚ್ಛೇದನ ಪಡೆಯುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications