ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆ ವಸ್ತ್ರ ಸಂಹಿತೆ: ಯಾವ್ಯಾವ ಬಟ್ಟೆ ಓಕೆ?

By Nayana
|
Google Oneindia Kannada News

ನವದೆಹಲಿ, ಮೇ 1: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ಮೇ 6 ರಂದು ನಡೆಸಲಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಈ ವೃತ್ತಿಶಿಕ್ಷಣ ಪ್ರವೇಶ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅನುಸರಿಸಬೇಕಾದ ವಸ್ತ್ರ ಸಂಹಿತೆ ವಿವರಗಳನ್ನು ನೀಡಲಾಗಿದ್ದು, ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ. ಪುರುಷ ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್, ಟಿ-ಶರ್ಟ್ ಗಳನ್ನು ಧರಿಸುವಂತಿಲ್ಲ.

ಶ್ರೇಷ್ಠ, ಕಳಪೆ ಎರಡರಲ್ಲೂ ಅನುದಾನ ರಹಿತ ಕಾಲೇಜುಗಳದ್ದೇ ಸದ್ದು!ಶ್ರೇಷ್ಠ, ಕಳಪೆ ಎರಡರಲ್ಲೂ ಅನುದಾನ ರಹಿತ ಕಾಲೇಜುಗಳದ್ದೇ ಸದ್ದು!

ಅರ್ಧ ತೋಳಿನ ಶರ್ಟ್ ಅಥವಾ ಟಿ-ಶರ್ಟ್ ಧರಿಸಬೇಕು. ಬಟ್ಟೆಗಳು ಹಗುರವಾಗಿರಬೇಕು. ಜಿಪ್‌ಗಳು, ಜೇಬುಗಳು, ದೊಡ್ಡಗುಂಡಿಗಳು, ದೊಡ್ಡ ಎಂಬ್ರಾಯ್ಡರಿಗಳಿರುವ ಡ್ರೆಸ್‌ಗಳನ್ನು ಧರಿಸದೇ ಇರುವುದು ಉತ್ತಮ.

CBSE imposes dress code on NEET exams

ಪುರುಷ ಅಭ್ಯರ್ಥಿಗಳು ಕುರ್ತಾ,ಪೈಜಾಮ, ಧ್ರಿಸುವುದನ್ನು ನಿಷೇಧಿಸಲಾಗಿದೆ. ನೀಟ್ 2018ರ ವಸ್ತ್ರ ಸಂಹಿತೆಯಲ್ಲಿ ಟ್ರೌಷರ್ ಧರಿಸಲು ಅವಕಾಶವಿದೆ. ಪರೀಕ್ಷಾ ಕೇಂದ್ರಗಳಿಗೆ ಶೂಗಳನ್ನು ಧರಿಸಿ ಬರುವಂತಿಲ್ಲ. ಆದ್ದರಿಂದ ಅಭ್ಯರ್ಥಿಗಳು ಚಪ್ಪಲಿಗಳನ್ನು ಧರಿಸಬೇಕು.

ಮಹಿಳಾ ವಸ್ತ್ರ ಸಂಹಿತೆ: ಮಹಿಳಾ ಅಭ್ಯರ್ಥಿಗಳು ಎಂಬ್ರಾಯಿಡರ, ಹೂವುಗಳ ಚಿತ್ತಾರ, ದೊಡ್ಡ ಬಟನ್ ಗಳಿರುವ ವಸ್ತ್ರಗಳನ್ನು ಧರಿಸಬಾರದು. ಬಟ್ಟೆಗಳು ಹಗುರವಾಗಿದ್ದು ಅರ್ಧ ತೋಳಿನದ್ದಾಗಿರಬೇಕು. ಹೊಸ ವಸ್ತ್ರ ಸಂಹಿತೆ ಪ್ರಕಾರ ಸಲ್ವಾರ್ ಮತ್ತು ಟ್ರೌಷರ್ ಧರಿಸಲು ಅವಕಾಶವಿದೆ.

ಪರೀಕ್ಷಾ ಕೊಠಡಿಗೆ ಶೂಗಳನ್ನು ಧರಿಸಿ ಬರುವಂತಿಲ್ಲ. ಕಡಿಮೆ ಹಿಮ್ಮಡಿ ಇರುವ ಸ್ಲಿಪ್ಪರ್ ಅಥವಾ ಸ್ಯಾಂಡಲ್ ಧರಿಸಬೇಕು. ಕಿವಿಯೋಲೆ, ನಕ್ಲೇಸ್ ಅಥವಾ ಯಾವುದೇ ರೀತಿಯ ಲೋಹದ ಆಭರಣ ಧರಿಸುವಂತಿಲ್ಲ. ರೂಢಿಗತ ಅಥವಾ ಸಂಪ್ರದಾಯದ ವಸ್ತ್ರಗಳು, ಬುರ್ಕಾ, ಶಿರ ವಸ್ತ್ರ ಇತ್ಯಾದಿಗಳನ್ನು ಧರಿಸಬಯಸುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದಕ್ಕೆ ಒಂದು ಗಂಟೆ ಮೊದಲು ಈ ಸಂಬಂಧಪಟ್ಟ ಸಿಬ್ಬಂದಿಯಿಂದ ಅನುಮತಿ ಪಡೆಯಬೇಕಿದೆ.

ಇತರೆ ನಿಯಮ: ಪರೀಕ್ಷಾ ಕೊಠಡಿಗೆ ಕೊಂಡಯ್ಯ ಬಾರದ ವಸ್ತುಗಳ ಪಟ್ಟಿಯನ್ನು ಸಿಬಿಎಸ್‌ಇ ತಿಳಿಸಿದ್ದು, ಮುದ್ರಣ ಅಥವಾ ಲಿಖಿತ ಕಾಗದಗಳು, ಕಾಗದಗಳ ತುಣುಕುಗಳು, ಜಾಮಿಟ್ರಿ/ ಪೆನ್ಸಿಲ್ ಬಾಕ್ಸ್, ಕ್ಯಾಲ್ಕ್ಯುಲೇಟರ್, ಪ್ಲಾಸ್ಟಿಕ್ ಪೌಚ್, ರೈಟಿಂಗ್ ಪ್ಯಾಡ್, ಲಾಗ್ ಟೇಬಲ್ ನಿಷೇಧಿಸಲಾಗಿದೆ.

English summary
Central Board of Secondary Education has imposed dress code for students those attending National Eligibility and Entrance Test on May 6. T-Shirts, full shirts, embroidery dresses are prohibited shoes for male students and pendents, nose ring and necklace were banned for female students as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X