ಸಿಬಿಎಸ್ಇ ಶಾಲೆಗಳಲ್ಲಿ ಇನ್ಮುಂದೆ ಆನ್ ಲೈನ್ ಶುಲ್ಕ ಪಾವತಿ

Posted By:
Subscribe to Oneindia Kannada

ನಾಗ್ಪುರ್, ಡಿಸೆಂಬರ್ 13: ಮುಂದಿನ ಶೈಕ್ಷಣಿಕ ವರ್ಷದಿಂದ ಸಿಬಿಎಸ್ಇ ಶಾಲೆಗಳಲ್ಲಿ ನಗದು ರೂಪದಲ್ಲಿ ಶುಲ್ಕ ಸ್ವೀಕರಿಸುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಆನ್ಲೈನ್ ವ್ಯವಹಾರದಲ್ಲೇ ಎಲ್ಲವೂ ನಡೆಯುವ ಹಾಗೆ ನೋಡಿಕೊಳ್ಳಲು ಕೇಂದ್ರಿಯ ಬೋರ್ಡ್ ಕಾರ್ಯದರ್ಶಿ ಜೋಸೆಫ್ ಇಮ್ಯಾನೆಲ್ ಅವರು ಸೂಚಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಪ್ಪು ಹಣವನ್ನು ಬಿಳಿ ಹಣ ಮಾಡುವ ಅಕ್ರಮ ವ್ಯವಹಾರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರಕವಾಗಿ ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

CBSE asks schools to go cashless from Jan 2017

2017ರ ಜನವರಿ 1ರಿಂದಲೇ ಜಾರಿಗೆ ಬರುವಂತೆ ಎಲ್ಲಾ ಸಿಬಿಎಸ್ ಇ ಶಿಕ್ಷಣ ಸಂಸ್ಥೆಗಳಲ್ಲಿ ಆನ್ ಲೈನ್ ಮೂಲಕವೆ ಶುಲ್ಕ ಪಾವತಿ ಮಾಡಿಕೊಳ್ಳಬೇಕು.ಸಿಬಿಎಸ್ಇ ಈಗಾಗಲೇ ತನ್ನ ಎಲ್ಲ ಶೈಕ್ಷಣಿಕ, ವ್ಯಾವಹಾರಿಕ ಕೆಲಸಗಳಿಗೆ ಆನ್‌ ಲೈನ್ ಹಣ ಪಾವತಿ ಕಡ್ಡಾಯಗೊಳಿಸಿದೆ. ಪರೀಕ್ಷೆ, ಮಾನ್ಯತೆ ನವೀಕರಣ ಸೇರಿ ಎಲ್ಲ ಶುಲ್ಕಗಳನ್ನು ಆನ್‌ ಲೈನ್ ಮೂಲಕವೇ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All CBSE affiliated schools will have to start collecting fee in cashless mode, from January 1, 2017 according to a directive from the central board secretary Joseph Emmanuel
Please Wait while comments are loading...