CBSE 12th Result: ಸಿಬಿಎಸ್‌ಇ 12ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟ: ಪರೀಕ್ಷಾ ಫಲಿತಾಂಶಕ್ಕೆ ಈ ವೆಬ್‌ಸೈಟ್‌ಗೆ ಭೇಟಿ ನೀಡಿ
Cbse 12th Results: ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. CBSE 12ನೇ ತರಗತಿ ಫಲಿತಾಂಶ 2026ರ ಲಿಂಕ್ cbseresults.nic.in ನಲ್ಲಿ ಲಭ್ಯವಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಇಂದು ಮೇ 13ರಂದು 12ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
ಈ ವರ್ಷದ ಅಖಿಲ ಭಾರತ ಹಿರಿಯ ಶಾಲಾ ಪ್ರಮಾಣಪತ್ರ ಪರೀಕ್ಷೆ (AISSCE)ಗೆ ಹಾಜರಾದ ವಿದ್ಯಾರ್ಥಿಗಳು cbse.gov.in ಹಾಗೂ cbseresults.nic.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶದ ಲಿಂಕ್ ಸಕ್ರಿಯಗೊಂಡ ಬಳಿಕ ತಮ್ಮ ಅಂಕಪಟ್ಟಿಯನ್ನು ಆನ್‌ಲೈನ್ ಮೂಲಕ ಪರಿಶೀಲಿಸಬಹುದು ಎಂದು ಹೇಳಲಾಗಿದೆ.
ಇನ್ನು ಇದೇ ಮೊದಲ ಬಾರಿಗೆ ಆನ್-ಸ್ಕ್ರೀನ್ ಮಾರ್ಕಿಂಗ್ ಮೂಲಕ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ನಡೆದಿದೆ. ಮೊದಲ ಬಾರಿಗೆ CBSE ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯ ಮೂಲಕ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ ಮಾಡಲಾಗಿದೆ. ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಆನ್‌ಲೈನ್‌ನಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಹೊಸ ಪ್ರಕ್ರಿಯೆಯಿಂದಾಗಿ ಫಲಿತಾಂಶ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದರೂ ಸಹ ಪರೀಕ್ಷಾ ನಿಯಂತ್ರಕರು ಈ ವಿಷಯವನ್ನು ತಳ್ಳಿಹಾಕಿದ್ದರು.

APAAR ID ಇಲ್ಲದ ವಿದ್ಯಾರ್ಥಿಗಳು DigiLocker ಖಾತೆಯನ್ನು ರಚಿಸಲು ಈ ಹಂತ ಅನುಸರಿಸಿ
cbseservices.digilocker.gov.in ಗೆ ಭೇಟಿ ನೀಡಿ
"ಪ್ರಾರಂಭಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಅಗತ್ಯವಿರುವ ವಿವರಗಳು ಮತ್ತು ಶಾಲೆಯಿಂದ ಒದಗಿಸಲಾದ ಪ್ರವೇಶ ಕೋಡ್ ಅನ್ನು ನಮೂದಿಸಿ
OTP ಮೂಲಕ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ
DigiLocker ಖಾತೆ ಯಶಸ್ವಿಯಾಗಿ ಸಕ್ರಿಯವಾಗುತ್ತದೆ
Cbse 12th Results: ಈ ವೆಬ್‌ಸೈಟ್‌ಗಳಲ್ಲಿ ಸಿಗಲಿದೆ ಫಲಿತಾಂಶ
http://www.results.nic.in/
https://www.cbse.gov.in/
https://results.digilocker.gov.in/
https://umang.gov.in/
https://cbse.digitallocker.gov.in/
https://play.google.com/store/apps/details?id=com.digilocker.android
https://apps.apple.com/in/app/digilocker/id1320618078
https://play.google.com/store/apps/details?id=in.gov.umang.negd.g2c
https://apps.apple.com/in/app/umang/id1236448857
CBSE 12th Result: ಫಲಿತಾಂಶ ಕುಸಿತ
ಇನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 2026ರ 12ನೇ ತರಗತಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಆದರೆ ಈ ಬಾರಿ ಹಲವು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. 2026ನೇ ಸಾಲಿನಲ್ಲಿ ಶೇ.85.20ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದು ಕಳೆದ ವರ್ಷಕ್ಕಿಂತಲೂ ಕಡಿಮೆ ಇದೆ. ಕಳೆದ ವರ್ಷ CBSE 12th Resultಗೆ ಹೋಲಿಕೆ ಮಾಡಿದರೆ, ಈ ಬಾರಿ ಶೇ.3.19ರಷ್ಟು ಫಲಿತಾಂಶ ಕುಸಿತ ಕಂಡು ಬಂದಿದೆ.
ಇನ್ನು ಈ ವರ್ಷ CBSE 12thನಲ್ಲಿ ಶೇ.85.20ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ಕಳೆದ ವರ್ಷಕ್ಕಿಂತಲೂ ಈ ಬಾರಿ ಶೇ.3.19ರಷ್ಟು ಕುಸಿತ ಕಂಡು ಬಂದಿದೆ. ಆದರೆ ಕೆಲವು ಪ್ರಮುಖ ನಗರಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ವಿದ್ಯಾರ್ಥಿಗಳು ಶೇಕಡಾವಾರು ದಾಖಲಿಸುವ ಮೂಲಕ ಮುಂಚೂಣಿಯಲ್ಲಿದ್ದಾರೆ.
ಮಂಡಳಿಯು ವಿದ್ಯಾರ್ಥಿಗಳಲ್ಲಿ ಅನಗತ್ಯ ಮಾನಸಿಕ ಒತ್ತಡವನ್ನು ಸೃಷ್ಟಿಸಬಾರದು ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಯಾವುದೇ ರಾಂಕ್ ಅಥವಾ ಮೊದಲ ಮೂರು ಟಾಪರ್‌ಗಳ ಪಟ್ಟಿಯನ್ನು ಪ್ರಕಟಿಸುತ್ತಿಲ್ಲ. ಈ ಹಿಂದಿನ ಮಾದರಿಯನ್ನೇ ಅನುಸರಿಕೊಂಡು ಬರಲಾಗುತ್ತಿದೆ. ಅಲ್ಲದೆ ಕೇವಲ ಶ್ರೇಣಿಗಳ ಆಧಾರದ ಮೇಲೆ ಫಲಿತಾಂಶ ನೀಡಲಾಗುತ್ತಿದೆ.












Click it and Unblock the Notifications