ಕಪ್ಪು ಹಣ ವರ್ಗಾವಣೆ: ಬ್ಯಾಂಕ್ ಆಫ್ ಬರೋಡಾದ ಮೇಲೆ ಸಿಬಿಐ ದಾಳಿ

ನವದೆಹಲಿ, ಅಕ್ಟೋಬರ್. 11: ಕಪ್ಪು ಹಣದ ರವಾನೆ ಕಳಂಕ ರಾಷ್ಟ್ರೀಕೃತ ಬ್ಯಾಂಕ್ ಗಳಿಗೂ ತಟ್ಟಿದೆ. ನವದೆಹಲಿಯ ಬ್ಯಾಂಕ್ ಆಫ್ ಬರೋಡಾದಿಂದ 6100 ಕೋಟಿ ರೂ. ಮೊತ್ತದ ಕಪ್ಪುಹಣ ಹಾಂಕ್ ಕಾಂಗ್ ಗೆ ಹರಿದು ಹೋಗಿದೆ ಶಂಕೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬ್ಯಾಂಕ್‌ ಆಫ್ ಬರೋಡಾ ಅಶೋಕ ವಿಹಾರ ಶಾಖೆಯ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಲ ಮಾಹಿತಿಗಳು ಸಮರ್ಪಕವಾಗಿಲ್ಲದಿರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.[ಸ್ವಿಸ್ ಬ್ಯಾಂಕಲ್ಲಿ ಅತ್ತೆ-ಸೊಸೆಯರ ಭರ್ಜರಿ ಜುಗಲಬಂದಿ]

bank

ಕಾಂಗ್ರೆಸ್ ಕೆಲ ದಿನಗಳ ಹಿಂದೆ ಬ್ಯಾಂಕ್ ನಿಂದ ಕಪ್ಪು ಹಣ ರವಾನೆಯಾಗಿದೆ ಎಂದು ಆರೋಪಿಸಿತ್ತು. ಬ್ಯಾಂಕ್ ಅಧಿಕಾರಿಗಳು ಕಂಪನಿಗಳ ಮಾಲೀಕರೊಂದಿಗೆ ಕೈಜೋಡಿಸಿ ಇಂತರ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.[ಕಪ್ಪು ಹಣದ ಮಾಹಿತಿ ಯಾರು ಬೇಕಾದ್ರೂ ಕೊಡಬಹುದು]

ಅಕ್ರಮ ವಹಿವಾಟು ನಡೆದಿರುವು ದು ಬ್ಯಾಂಕ್ ಆಡಿಟ್ ವರದಿಗಳಲ್ಲಿ ಕಂಡು ಬಂದಿದೆ ಎಂದು ಸಿಬಿಐ ಮೂಲಗಳು ಹೇಳಿವೆ. ಅಶೋಕ್ ವಿಹಾರ್ ಶಾಖೆಯಲ್ಲಿ ಕೆಲ ಕಂಪನಿಗಳು ಹೊಸದಾಗಿ ತೆರೆದಿರುವ 60 ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದೆ ಎಂದು ಸಿಬಿಐ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+