ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿಯಿಂದ ತಮಿಳುನಾಡಿಗೆ ಯಾವ ತಿಂಗಳಲ್ಲಿ ಎಷ್ಟು ಟಿಎಂಸಿ ನೀರು ಬಿಡಬೇಕು?

By Nayana
|
Google Oneindia Kannada News

ಬೆಂಗಳೂರು, ಜು.4: ಕಾವೇರಿ ನೀರು ಹಂಚಿಕೆ ಮಾಸಿಕ ಪಟ್ಟಿ ಸಿದ್ಧವಾಗಿದೆ, ಸೋಮವಾರ ನಡೆದ ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಇಡೀ ವರ್ಷದ ಮಾಸಿಕ ನೀರು ಹಂಚಿಕೆ ಪ್ರಮಾಣದ ಬಗ್ಗೆಯೂ ಚರ್ಚೆ ನಡೆದಿತ್ತು.

ವಾಡಿಕೆ ಮಳೆಯಾದ ಸಂದರ್ಭದಲ್ಲಿ ನೀರು ಹಂಚಿಕೆಯ ಪರಿಷ್ಕೃತ ಮಾಸಿಕ ಸೂತ್ರವನ್ನು ಕೂಡ ಹೆಣೆಯಲಾಗಿದೆ ಎಂದು ತಿಳಿದುಬಂದಿದೆ. ಕಾವೇರಿ ನ್ಯಾಯಾಧಿಕರಣವು 2007ರಲ್ಲಿ ನೀಡಿದ್ದ ಕರ್ನಾಟಕದ ಮಾಸಿಕ ಬಾಧ್ಯತೆ ಪಟ್ಟಿಯನ್ನು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ ಪರಿಷ್ಕರಿಸುವ ಪ್ರಯತ್ನವನ್ನು ಪ್ರಾಧಿಕಾರ ನಡೆಸಿದೆ.

ತಮಿಳುನಾಡಿಗೆ ನೀರು ಬಿಡಿ: ರಾಜ್ಯಕ್ಕೆ ಕಾವೇರಿ ಪ್ರಾಧಿಕಾರ ಆದೇಶ ತಮಿಳುನಾಡಿಗೆ ನೀರು ಬಿಡಿ: ರಾಜ್ಯಕ್ಕೆ ಕಾವೇರಿ ಪ್ರಾಧಿಕಾರ ಆದೇಶ

ಕಾವೇರಿ ನ್ಯಾಯಾಧೀಕರಣ ನೀಡಿದ್ದ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕವು 192 ಟಿಎಂಸಿ ನೀರನ್ನು ತಮಿಳುನಾಡಿನೊಂದಿಗೆಗಿನ ಅಂತರ ರಾಜ್ಯ ಗಡಿ ಬಿಳಿಗುಂಡ್ಲುವಿಗೆ ತಲುಪಿಸಬೇಕಿತ್ತು. ಅಷ್ಟೇ ಅಲ್ಲದೆ ಮಾಸಿಕವಾಗಿ ಕರ್ನಾಟಕ ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣವನ್ನು ಕೂಡ ನಿಗದಿಪಡಿಸಿತ್ತು.

Cauvery authority finalised water release calendar for state

ಆದರೆ ಕಳೆದ ಫೆಬ್ರವರಿಯಲ್ಲಿ ನೀರು ಹಂಚಿಕೆ ಬಗ್ಗೆ ಅಂತಿಮ ತೀರ್ಪು ನೀಡಿದ ಸುಪ್ರೀಂಕೋರ್ಟ್ ತಮಿಳುನಾಡಿಗೆ 177.25 ಟಿಎಂಸಿ ನೀರನ್ನಷ್ಟೇ ನೀಡುವ ಬಾಧ್ಯತೆಯನ್ನು ಕರ್ನಾಟಕದ ಮೇಲೆ ಹೊರಿಸಿತ್ತು. ಅಂದರೆ ನ್ಯಾಯಾಧೀಕರಣದ ತೀರ್ಪಿನಿಂದ 14.75 ಟಿಎಂಸಿ ನೀರನ್ನು ಕಡಿತ ಮಾಡಿತ್ತು.

ಆದರೆ ಈ ಕಡಿತಗೊಳಿಸಿದ ನೀರನ ಪ್ರಮಾಣವನ್ನು ಮಾಸಿಕ ಲೆಕ್ಕಾಚಾರಕ್ಕೆ ಅನುಗುಣವಾಗಿ ಹಂಚುವ ಪ್ರಯತ್ನವನ್ನು ಪ್ರಾಧಿಕಾರದ ಮುಖ್ಯಸ್ಥ ಮಸೂದ್‌ ಹುಸೇನ್‌ ನೇತೃತ್ವದಲ್ಲಿ ನಡೆಸಲಾಗಿದೆ.
ಸುಪ್ರೀಂಕೋರ್ಟ್‌ ಆದೇಶದಂತೆ ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ 31.24 ಟಿಎಂಸಿ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.

ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸುಪ್ರೀಂಕೋರ್ಟ್‌ ಆದೇಶದಂತೆ ರಾಜ್ಯವು ಜುಲೈನಲ್ಲಿ 31.24 ಟಿಎಂಸಿ ನೀರನ್ನು ಬಿಡುವಂತೆ ತಿಳಿಸಿದೆ. ಕೇಂದ್ರ ಜಲಮಂಡಳಿ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್‌ ನೇತೃತ್ವದಲ್ಲಿ ಸಭೆ ನಡೆದಿದೆ.

ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ನಿರ್ದೇಶನ ನೀಡಿದ್ದಾರೆ. ಬಾಕಿ ಉಳಿಸಿಕೊಂಡಿರುವ ನೀರು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಬೇಕು, ಜುಲೈ ಅಂತ್ಯದೊಳಗೆ ಮತ್ತೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿದೆ. ನಾಲ್ಕು ಗಂಟೆಗಳ ಕಾಲ ಸುದೀರ್ಘ ಸಭೆ ನಡೆಯಿತು.

ಜೂನ್‌ ತಿಂಗಳಲ್ಲಿ ಟ್ರಿಬ್ಯುನಲ್‌ ತೀರ್ಪು ಪ್ರಕಾರ 10 ಡಿಎಂಸಿ ನೀರು ಹಾಗೂ ಸುಪ್ರೀಂಕೋರ್ಟ್‌ ತೀರ್ಪು ಪ್ರಕಾರ 9.14 ಟಿಎಂಸಿ ನೀಡು ಬಿಡಬೇಕು, ಜಲೈನಲ್ಲಿ ಟ್ರಿಬ್ಯುನಲ್‌ ಪ್ರಕಾರ 34 ಹಾಗೂ ಸುಪ್ರೀಂಕೋರ್ಟ್ ಪ್ರಕಾರ 31.24 ಟಿಎಂಸಿ ನೀರು ಬಿಡಬೇಕು.

ಆಗಸ್ಟ್‌ನಲ್ಲಿ ಟ್ರಿಬ್ಯುನಲ್‌ ಪ್ರಕಾರ 50 ಟಿಎಂಸಿ ಹಾಗೂ ಸುಪ್ರೀಂ ಪ್ರಕಾರ 45.95 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು. ಅಕ್ಟೋಬರ್‌ನಲ್ಲಿ ಟ್ರಿಬ್ಯುನಲ್‌ ಪ್ರಕಾರ 22 ಟಿಎಂಸಿ ಹಾಗೂ ಸುಪ್ರೀಂಕೋರ್ಟ್‌ ಪ್ರಕಾರ 20.22 ಟಿಎಂಸಿ ನೀರು ಬಿಡಬೇಕು. ನವೆಂಬರ್‌ನಲ್ಲಿ ಟ್ರಿಬ್ಯುನಲ್‌ ಪ್ರಕಾರ 15 ಟಿಎಂಸಿ ಹಾಗೂ ಸುಪ್ರೀಂ ಪ್ರಕಾರ 13.82 ಟಿಎಂಸಿ ನೀರು ಬಿಡಬೇಕು.

ಇನ್ನು ಡಿಸೆಂಬರ್‌ನಲ್ಲಿ ಟ್ರಿಬ್ಯುನಲ್‌ ಪ್ರಕಾರ 8 ಟಿಎಂಸಿ ಹಾಗೂ ಸುಪ್ರೀಂ ಕೋರ್ಟ್‌ನ ಪ್ರಕಾರ 7.35 ಟಿಎಂಸಿ ನೀಡು, ಜನವರಿಯಲ್ಲಿ ಟ್ರಿಬ್ಯುಉನಲ್‌ ಪ್ರಕಾರ 3 ಟಿಎಂಸಿ ಹಾಗೂ ಸುಪ್ರೀಂಕೋರ್ಟ್‌ ಪ್ರಕಾರ 2.76 ಟಿಎಂಸಿ ನೀರು ಬಿಡಬೇಕಾಗಿದೆ.

ಫೆಬ್ರವರಿಯಿಂದ ಮೇ-ಪ್ರತಿ ತಿಂಗಳು ತಲಾ 2.5 ಟಿಎಂಸಿ, ಪ್ರತಿತಿಂಗಳು ತಲಾ 2.5 ಟಿಎಂಸಿ ವಾಡಿಕೆ ಮಳೆಯಾದ ಜಲ ವರ್ಷಗಳಲ್ಲಿ ಈ ನೀರು ಹಂಚಿಕೆಯೇ ಇರಲಿದೆ.

English summary
Cauvery river authority has finalised calendar of water release from Karnataka to Tamilnadu according to supreme court verdict. Here is the details about.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X