Kerala: ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವುದರ ಹಿಂದಿದೆ ಜಾತಿ ಧರ್ಮದ ಲೆಕ್ಕಾಚಾರ – ಶಿವಗಿರಿ ಶ್ರೀ
ತಿರುವನಂತಪುರಂ 1: ಜನವರಿ ಕೇರಳದ ಪ್ರಮುಖ ಹಿಂದೂ ಸನ್ಯಾಸಿಯೊಬ್ಬರು ಮಂಗಳವಾರ ದೇವಾಲಯಗಳಿಗೆ ಪ್ರವೇಶಿಸಲು ಪುರುಷ ಭಕ್ತರು ಮೇಲಿನ ಉಡುಪನ್ನು ತೆಗೆಯುವ ಪದ್ಧತಿ ಅನಿಷ್ಟ ಎಂದು ಕರೆದಿದ್ದಾರೆ. ಜೊತೆಗೆ ಈ ಪದ್ಧತಿಯನ್ನು ತೆಗೆದುಹಾಕಲು ಕರೆ ನೀಡಿದ್ದಾರೆ. ಅಲ್ಲದೆ ಈ ಪದ್ಧತಿಯ ಹಿಂದೆ ಜಾತಿ ಧರ್ಮದ ಲೆಕ್ಕಾಚಾರವಿದೆ ಎಂದು ಅವರು ಹೇಳಿದ್ದಾರೆ.
ಹೌದು.. ಕೇರಳದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಈ ಹೇಳಿಕೆಯನ್ನು ನೀಡಿದ್ದಾರೆ. ಖ್ಯಾತ ಋಷಿ-ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಪ್ರಸಿದ್ಧ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಈ ಮಾತನ್ನು ಹೇಳಿದ್ದಾರೆ. ಇಲ್ಲಿನ ತೀರ್ಥೋದ್ಭವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಚ್ಚಿದಾನಂದ ಅವರು ರಾಜ್ಯದ ಅನೇಕ ದೇವಾಲಯಗಳಲ್ಲಿ ಈ ಪದ್ಧತಿ ಅಸ್ತಿತ್ವದಲ್ಲಿದೆ. ಈ ಪದ್ಧತಿ ಸಾಮಾಜಿಕ ಪಿಡುಗು ಆಗಿದೆ, ಹೀಗಾಗಿ ಈ ಪದ್ಧತಿಯನ್ನು ತೆಗೆದು ಹಾಕುವಂತೆ ಒತ್ತಾಯಿಸಿದರು.

ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವುದರ ಹಿಂದಿದೆ ಜಾತಿ ಲೆಕ್ಕಾಚಾರ
ಪುರುಷರು "ಜನಿವಾರ" (ಬ್ರಾಹ್ಮಣರು ಧರಿಸುವ ಪವಿತ್ರ ದಾರ) ಧರಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಉಡುಪನ್ನು ತೆಗೆದುಹಾಕುವ ಅಭ್ಯಾಸವನ್ನು ಹಿಂದೆ ಪರಿಚಯಿಸಲಾಯಿತು. ಈ ಆಚರಣೆಯು ಶ್ರೀ ನಾರಾಯಣ ಗುರುಗಳ ಉಪದೇಶಗಳಿಗೆ ವಿರುದ್ಧವಾಗಿದೆ. ಕೆಲವು ದೇವಾಲಯಗಳು ಅದನ್ನು ಇನ್ನೂ ಕೂಡ ಅನುಸರಿಸುತ್ತಿರುವುದು ತುಂಬಾ ಬೇಸರದ ಸಂಗತಿ ಎಂದು ಅವರು ಹೇಳಿದರು.
ಕೆಲವು ದೇವಸ್ಥಾನಗಳಲ್ಲಿ ಅನ್ಯ ಧರ್ಮದವರಿಗೆ ಪ್ರವೇಶವಿಲ್ಲ, ಕೆಲವು ಶ್ರೀ ನಾರಾಯಣ ದೇವಸ್ಥಾನಗಳು ಸಹ ಇದೇ ರೀತಿ ನಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಇದರ ಬಗ್ಗೆ ನನಗೆ ಅತೀವ ವಿಷಾದವಿದೆ. ಅಷ್ಟೇ ಅಲ್ಲ, ಅನೇಕ ಶ್ರೀ ನಾರಾಯಣ ದೇವಸ್ಥಾನಗಳು ಸಹ ಮೇಲಿನ ಉಡುಪುಗಳನ್ನು (ಪುರುಷರ) ತೆಗೆದುಹಾಕುವ ಅಭ್ಯಾಸವನ್ನು ಅನುಸರಿಸುವಲ್ಲಿ ಅಚಲವಾಗಿವೆ. ಇದನ್ನು ಯಾವುದೇ ಹಿಂಜರಿಕೆಯಿಲ್ಲದೆ ಸರಿಪಡಿಸಬೇಕು. ಏಕೆಂದರೆ ಶ್ರೀ ನಾರಾಯಣ ಗುರು ದೇವಾಲಯದ ಸಂಸ್ಕೃತಿಯನ್ನು ಆಧುನೀಕರಿಸಿದ ವ್ಯಕ್ತಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ವೇಳೆ ಉಪಸ್ಥಿತರಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಪದ್ಧತಿಯನ್ನು ಕೊನೆಗಾಣಿಸುವಂತೆ ಹೇಳಿದ್ ಸಚ್ಚಿದಾನಂದ ಕರೆಯನ್ನು ಬೆಂಬಲಿಸಿದರು.












Click it and Unblock the Notifications