ಖ್ಯಾತ ವ್ಯಂಗ್ಯಚಿತ್ರಕಾರ ಪ್ರಾಣ್‌ ಕುಮಾರ್‌ ಇನ್ನಿಲ್ಲ

ನವದೆಹಲಿ, ಆ.6: 'ಚಾಚಾ ಚೌಧರಿ ' ಎಂಬ ಜನಪ್ರಿಯ ಕಾಲ್ಪನಿಕ ಕಾಮಿಕ್‌ ಪಾತ್ರಗಳಿಗೆ ಜೀವತುಂಬಿದ್ದ ಖ್ಯಾತ ವ್ಯಂಗ್ಯಚಿತ್ರಕಾರ ಪ್ರಾಣ್‌ ಕುಮಾರ್‌ ಗುರ್ಗಾವ್‌ನ ಆಸ್ಪತ್ರೆಯೊಂದರಲ್ಲಿ ಬುಧವಾರ ನಿಧನರಾದರು.

ಕಳೆದ 8 ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 75 ವರ್ಷ ವಯಸ್ಸಿನ ಪ್ರಾಣ್‌ ಅವರು ಬೆಳಗ್ಗೆ 9 ಗಂಟೆ ವೇಳೆಗೆ ಮೆದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

1938 ಆಗಸ್ಟ್‌ 15ರಂದು ಪಾಕಿಸ್ತಾನದ ಲಾಹೋರ್‌ ಸಮೀಪವಿರುವ ಕಸೂರ್‌ ಗ್ರಾಮದಲ್ಲಿ ಜನಿಸಿದ ಪ್ರಾಣ್‌, 1960ರಲ್ಲಿ ದೆಹಲಿ ಮೂಲದ ಪತ್ರಿಕೆ 'ಮಿಲಾಪ್‌'ನಲ್ಲಿ 'ಡಾಬು' ಹೆಸರಿನ ಕಾಮಿಕ್‌ ಸ್ಟ್ರಿಪ್‌ನ್ನು ರಚಿಸುವ ಮೂಲಕ ವ್ಯಂಗ್ಯಚಿತ್ರಕಾರರಾಗಿ ಬೆಳಕಿಗೆ ಬಂದರು.

pran 1

ಖ್ಯಾತ ವ್ಯಂಗ್ಯಚಿತ್ರಕಾರ ಪ್ರಾಣ್‌ ಕುಮಾರ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ''ಖ್ಯಾತ ಕಾರ್ಟೂನಿಸ್ಟ್‌ ಆಗಿ ಅವರು ತಮ್ಮ ಶ್ರೀಮಂತ ಕೃತಿಗಳಿಂದ ಜನರ ಮುಖದಲ್ಲಿ ನಗು ಅರಳಿಸಿದ್ದರು' ಎಂದು ಮೋದಿ ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+