ಪಂಜಾಬ್: ಹುಟ್ಟುಹಬ್ಬದಿನದಂದೇ ಅಮರಿಂದರ್ ಸಿಂಗ್ ಗೆ ಗೆಲುವಿನ ಗಿಫ್ಟ್

ಅಮೃತಸರ, ಮಾರ್ಚ್ 11: ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬರಲಿರುವ ಇಂದೇ ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ತಮ್ಮ 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಈ ಬಾರಿಯ ಚುನಾವಣೆಯಲ್ಲಿ ಅವರು, ಎರಡು ಕ್ಷೇತ್ರಗಳಿಂದ ಸ್ಪರ್ಧೆಗಿಳಿದಿದ್ದರು. ಪಟಿಯಾಲಾ ಹಾಗೂ ಲಂಬಿ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅವರಿಗೆ, ಒಂದು ಸಿಹಿ ಹಾಗೂ ಮತ್ತೊಂದು ಕಹಿ ಅನುಭವ ಸಿಕ್ಕಿದೆ.

Capt. Amarinder Singh got birthday gift

ಪಟಿಯಾಲಾದಲ್ಲಿ ಅವರು ಗೆಲವಿನತ್ತ ದಾಪುಗಾಲು ಹಾಕಿದ್ದರೆ, ಲಂಬಿಯಲ್ಲಿ ಅವರು, ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಹಾಗೂ ಪಂಜಾಬ್ ನ ಹಾಲಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಮುಂದೆ ಸೋಲಿನತ್ತ ಮುಖ ಮಾಡಿದ್ದಾರೆ.

ಆದರೂ, ಪರವಾಗಿಲ್ಲ. ಕಾಂಗ್ರೆಸ್ ಪಕ್ಷವು ಈಗಾಗಲೇ ಘೋಷಿಸಿರುವಂತೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ.

ಚುನಾವಣಾ ಪ್ರಚಾರದ ವೇಳೆ, ಪಂಜಾಬ್ ರಾಜ್ಯದ ತುಂಬೆಲ್ಲಾ ಆವರಿಸಿರುವ ಡ್ರಗ್ಸ್ ಮಾಫಿಯಾವನ್ನು ಹತ್ತಿಕ್ಕುವುದನ್ನೇ ಪ್ರಧಾನವಾಗಿ ಹೇಳುತ್ತಾ ಬಂದಿದ್ದ ಕಾಂಗ್ರೆಸ್ ನ ಆಶ್ವಾಸನೆಗಳಿಗೆ ಅಲ್ಲಿನ ಮತದಾರರು ನಂಬಿ ಮತ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+