ಅಭ್ಯರ್ಥಿಗಳೇ ವಿದೇಶದಲ್ಲಿನ ಖಾತೆ ಬಹಿರಂಗಗೊಳಿಸಿ!

ನವದೆಹಲಿ, ಮಾ.5: ಕೇಂದ್ರ ಚುನಾವಣೆ ಆಯೋಗ ಲೋಕಸಭೆ ಚುನಾವಣೆ 2014 ವೇಳಾಪಟ್ಟಿ ಘೋಷಿಸಿದ ಬೆನ್ನಲ್ಲೇ ಅಭ್ಯರ್ಥಿಗಳಿಗೆ ಕೆಲ ವಿಶೇಷ ನಿರ್ದೇಶನಗಳನ್ನು ನೀಡಿದೆ.ಇದೇ ಮೊದಲ ಬಾರಿಗೆ ಮಹಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಹೆಚ್ಚಳ ಮಾಡಲಾಗಿದೆ. ಈ ಮೊದಲು 40 ಲಕ್ಷ ರು ಇದ್ದ ವೆಚ್ಚ ಈಗ 70 ಲಕ್ಷ ರು ತನಕ ಏರಿಕೆಯಾಗಿದೆ. ಇದರ ಜತೆಗೆ ಅಭ್ಯರ್ಥಿಗಳು ವಿದೇಶಿದಲ್ಲಿ ಇಟ್ಟಿರುವ ಬ್ಯಾಂಕ್ ಖಾತೆ ವಿವರಗಳನ್ನು ಬಹಿರಂಗಗೊಳಿಸುವುದು ಕಡ್ಡಾಯಗೊಳಿಸಲಾಗಿದೆ.

16 ನೆಯ ಲೋಕಸಭಾ ಚುನಾವಣೆಯು ಏಪ್ರಿಲ್ 7 ರಿಂದ ಆರಂಭವಾಗಿ 9 ಹಂತಗಳಲ್ಲಿ ನಡೆಯಲಿದ್ದು ಮೇ 12ಕ್ಕೆ ಮುಗಿಯಲಿದೆ. ಫಲಿತಾಂಶವು ಮೇ 16ರಂದು ಪ್ರಕಟವಾಗಲಿದೆ.[ಪೂರ್ಣ ವೇಳಾಪಟ್ಟಿ ಇಲ್ಲಿ ಓದಿ]

ಕರ್ನಾಟಕದಲ್ಲಿನ ಚುನಾವಣಾ ಪ್ರಕ್ರಿಯೆ ಮಾರ್ಚ್ 19 ಆರಂಭಗೊಳ್ಳಲಿದ್ದು ಅಂದಿನಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ಮಾರ್ಚ್ 26 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಏಪ್ರಿಲ್ 17ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. [ವಿವರ ಇಲ್ಲಿ ಓದಿ]

Candidates must disclose assets held abroad: EC

ಲೋಕಸಭೆ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ನಾಮಪತ್ರ ಸಲಿಸುವ ಮೊದಲು ವಿದೇಶದಲ್ಲಿ ಹೊಂದಿರುವ ಬ್ಯಾಂಕ್ ಖಾತೆ ಹಾಗೂ ಆಸ್ತಿ ವಿವರಗಳನ್ನು ಪ್ರಕಟಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟ ನಿರ್ದೇಶನ ನೀಡಿದೆ. ಈ ಮೂಲಕ ಚುನಾವಣೆಯಲ್ಲಿ ಕಪ್ಪು ಹಣ ಬಳಕೆಯಾಗುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

2012ರ ಅಗಸ್ಟ್ 1 ರಂದೇ ಈ ಬಗ್ಗೆ ಕೇಂದ್ರ ಕಾನೂನು ಮತ್ತು ಸುವ್ಯವಸ್ಥೆ ಸಚಿವಾಲಯದಿಂದ ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳು ವಿದೇಶದಲ್ಲಿ ಹೊಂದಿರುವ ಆಸ್ತಿ, ಬಂಡವಾಳ ಹೂಡಿಕೆ, ಆರ್ಥಿಕ ಸಂಸ್ಥೆಗಳ ಜತೆಗಿನ ವ್ಯವಹಾರ, ಲೆಕ್ಕ ಪತ್ರಗಳು, ಸ್ಥಿರಾಸ್ತಿ, ಚರಾಸ್ತಿ ಸೇರಿದಂತೆ ಎಲ್ಲವನ್ನು ನಿಗದಿತ ಅರ್ಜಿಯಲ್ಲಿ ವಿವರಗಳೊಂದಿಗೆ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ ನಾಮಪತ್ರ ತಿರಸ್ಕೃತಗೊಳ್ಳಲಿದೆ.

ಇತ್ತೀಚೆಗೆ ಸರ್ಕಾರೇತರ ಸಂಸ್ಥೆಯೊಂದು ಅಭ್ಯರ್ಥಿಗಳು ವಿದೇಶದಲ್ಲಿರುವ ಬ್ಯಾಂಕ್ ಖಾತೆ ವಿವರ ಮುಚ್ಚಿಟ್ಟುಕೊಂಡು ಚುನಾವಣೆ ಕಣಕ್ಕಿಳಿಯುವುದರ ಬಗ್ಗೆ ಪ್ರಶ್ನಿಸಿ ಆಯೋಗಕ್ಕೆ ವಿವರಣೆ ಕೇಳಿತ್ತು. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ ಅಭ್ಯರ್ಥಿಗಳಿಗೆ ನಿರ್ದೇಶನ ನೀಡಿದೆ.

ಪಬ್ಲಿಕ್ ಇಂಟರೆಸ್ಟ್ ಫೌಂಡೇಷನ್ ನಿರ್ದೇಶಕ ನೃಪೇಂದ್ರ ಮಿಶ್ರಾ ಅವರು ಚುನಾವಣೆ ಆಯೋಗಕ್ಕೆ ಪತ್ರ ಬರೆದು ಅಭ್ಯರ್ಥಿಗಳ ಚುನಾವಣಾ ವೆಚ್ಚ, ಕಪ್ಪು ಹಣ ಬಳಕೆ, ವಿದೇಶಿ ಬ್ಯಾಂಕ್ ಗಳಲ್ಲಿನ ಖಾತೆ ಬಗ್ಗೆ ಕೇಳಿದ್ದರು. ಒಂದು ವೇಳೆ ವಿದೇಶದಲ್ಲಿರುವ ಬ್ಯಾಂಕ್ ಖಾತೆ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ ಅಥವಾ ಮಾಹಿತಿ ನೀಡದಿದ್ದರೆ ಅಂಥ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಳ್ಳಲಿದೆ ಇದರ ಜತೆಗೆ ಅಭ್ಯರ್ಥಿಯಾಗಲು ಅನರ್ಹ ಎಂದು ಘೋಷಿಸಬೇಕು ಎಂದು ಮಿಶ್ರಾ ಮಾಡಿಕೊಂಡ ಮನವಿಯನ್ನು ಆಯೋಗ ಸದ್ಯಕ್ಕೆ ಪುರಸ್ಕರಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+