‘ಖಲಿಸ್ತಾನ್’ ವಿಚಾರದಲ್ಲಿ ಕೆನಡಾ ಕಿರಿಕ್ ಕಂಟಿನ್ಯೂ!

'ಖಲಿಸ್ತಾನ್' ವಿಚಾರದಲ್ಲಿ ಭಾರತದ ವಿರುದ್ಧ ಪಾಶ್ಚಿಮಾತ್ಯ ದೇಶಗಳ ಕಿರಿಕ್ ನಿಲ್ಲುತ್ತಿಲ್ಲ ಎಂಬ ಆರೋಪಗಳ ನಡುವೆ, ಇದೀಗ ಕೆನಡಾದಲ್ಲಿ ಮತ್ತೊಂದು ಪ್ರಮುಖ ಘಟನೆ ವರದಿಯಾಗಿದೆ. ಅದ್ರಲ್ಲೂ ಕೆಲ ದಿನಗಳ ಹಿಂದೆ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್ ನಿಜ್ಜರ್ ಹತ್ಯೆ ಆರೋಪದ ಅಡಿಯಲ್ಲಿ ಕೆಲವು ಭಾರತ ಮೂಲದ ಪ್ರಜೆಗಳನ್ನ ಕೆನಡಾ ಅರೆಸ್ಟ್ ಮಾಡಿತ್ತು. ಈಗ ಕೂಡ ಅದೇ ರೀತಿ ಮತ್ತೊಬ್ಬರನ್ನು ಅಂದರ್ ಮಾಡಿದೆ.

ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ 2023ರ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹಿಂಸಾಚಾರ & ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾದ ಆರೋಪ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದ್ರೆ ಭಾರತದ ಏಜೆಂಟ್‌ಗಳು ಈ ಕೊಲೆ ಮಾಡಿದ್ದಾರೆ ಎನ್ನುತ್ತಿದೆ ಕೆನಡಾ. ಹೀಗಾಗಿಯೇ ಸೂಕ್ತ ಸಾಕ್ಷ್ಯ ಇಲ್ಲದೆ, ಇಂತಹ ಆರೋಪ ಸರಿಯಲ್ಲ ಎಂದು ಭಾರತ ವಾರ್ನಿಂಗ್ ಮಾಡುತ್ತಿದೆ. ಹೀಗಿದ್ದಾಗ ಭಾರತ ಮೂಲದ ಪ್ರಜೆಗಳನ್ನ ಕೆನಡಾ ಅರೆಸ್ಟ್ ಮಾಡುತ್ತಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿದೆ. ಈಗಲೂ ಅಂತಹದ್ದೇ ಕಿತಾಪತಿ ಮಾಡಿದೆ.

Canada Arrested One More Suspect In Hardeep Singh Nijjar s Case

ಕೊಲೆಗೆ ಸಂಚು ಮಾಡಿದ್ದು ಯಾರು?

ಹೌದು ಖಾಲಿಸ್ತಾನಿ ಪ್ರತ್ಯೇಕವಾದಿ ಉಗ್ರ ಹರ್ದೀಪ್‌ ಸಿಂಗ್ ನಿಜ್ಜರ್‌ನ ಹತ್ಯೆ ಕೇಸ್ ಹಿನ್ನೆಲೆ ಕೆನಡಾ ಪೊಲೀಸರು ಮತ್ತೊಬ್ಬ ಭಾರತೀಯ ಪ್ರಜೆಯ ಬಂಧಿಸಿದ್ದಾರೆ. ಈ ಮೂಲಕ ಈವರೆಗೂ ನಿಜ್ಜರ್ ಮರ್ಡರ್ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ಭಾರತೀಯ ಪ್ರಜೆಗಳ ಸಂಖ್ಯೆ 4ಕ್ಕೆ ಏರಿದ್ದು, ಈಗ ಅರೆಸ್ಟ್ ಆಗಿರುವ ವ್ಯಕ್ತಿಯನ್ನ ಅಮನ್‌ದೀಪ್‌ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ನಿಜ್ಜರ್ ಕೊಲೆ ಮಾಡೋದಕ್ಕೆ ಸಂಚು ರೂಪಿಸಿದ ಆರೋಪ ಈತನ ಮೇಲಿತ್ತು ಎನ್ನುತ್ತಿದೆ ಕೆನಡಾ. ಜೂನ್ 18, 2023 ರಂದು ಸರ್ರೆಯ ಗುರುನಾನಕ್‌ ಸಿಖ್‌ ಗುರುದ್ವಾರ ಸಮೀಪ ನಿಜ್ಜರ್‌ನ ಭೀಕರವಾಗಿ ಕೊಲೆ ಮಾಡಲಾಗಿತ್ತು. ಗುರುದ್ವಾರಕ್ಕೆ ಬಂದಿದ್ದ ಹರ್ದೀಪ್ ಸಿಂಗ್ ನಿಜ್ಜರ್‌ ವಾಪಸ್ ಹೋಗುವಾಗ, ಗೇಟ್ ಬಳಿಯೇ ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಿದ್ದರು ಕೊಲೆಗಾರರು.

ಜಗತ್ತಿನಾದ್ಯಂತ ಕೊಲೆಯ ಸಂಚಲನ!

45 ವರ್ಷ ವಯಸ್ಸಿನ ನಿಜ್ಜರ್‌ ಹತ್ಯೆ ಸಂಚಲನ ಸೃಷ್ಟಿ ಮಾಡಿದ್ದು, ಜಾಗತಿಕ ಮಟ್ಟದಲ್ಲಿಯೂ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಪ್ರಮುಖವಾಗಿ ಈ ಹತ್ಯೆ ಭಾರತ & ಕೆನಡಾ ಸಂಬಂಧಕ್ಕೆ ಹುಳಿ ಹಿಂಡಿತ್ತು. ಇದೀಗ ಅರೆಸ್ಟ್ ಆಗಿರುವ ಆರೋಪಿ ವಿರುದ್ಧ ನಿಜ್ಜರ್ ಕೊಲೆ ಮಾಡೋಕೆ ಸಂಚು ರೂಪಿಸಿದ ಆರೋಪ ಇದೆ. ನಿಜ್ಜರ್ ಕೊಲೆ ಪ್ರಕರಣದ ಸಂಬಂಧ ಅಮನ್‌ದೀಪ್ ಸಿಂಗ್ ಅರೆಸ್ಟ್ ಆಗಿದ್ದು, ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆ ನಂತರ ತಿಕ್ಕಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+