'ಭಾರತ ರತ್ನ' ಸೋಷಿಯಲ್ ಮೀಡಿಯಾ ಅಭಿಯಾನ ನಿಲ್ಲಿಸುವಂತೆ ರತನ್ ಟಾಟಾ ಮನವಿ
ನವದೆಹಲಿ,ಫೆಬ್ರವರಿ 06: ಭಾರತ ರತ್ನ ಸೋಷಿಯಲ್ ಮೀಡಿಯಾ ಅಭಿಯಾನ ನಿಲ್ಲಿಸುವಂತೆ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಮನವಿ ಮಾಡಿದ್ದಾರೆ.
ದೇಶದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುವುದರಲ್ಲಿ ನನಗೆ ಸಂತೋಷವಿದೆ.ತಾನು ಭಾರತೀಯನೆಂಬುದು ನನ್ನ ಅದೃಷ್ಟ ಎಂದು ಪರಿಗಣಿಸುತ್ತಿದ್ದೇನೆ, ಆದರೆ ಜನರು ತನಗಾಗಿ ಭಾರತ ರತ್ನ ಪ್ರಶಸ್ತಿಗೆ ಬೇಡಿಕೆ ಇಡುವುದನ್ನು ನಿಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ.
100 ಶತಕೋಟಿಗೂ ಹೆಚ್ಚಿನ ಮೌಲ್ಯದ ಟಾಟಾ ಸಮೂಹದ ಅಧ್ಯಕ್ಷರಾದ ರತನ್ ಟಾಟಾ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ತನಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡುವಂತೆ ಸರ್ಕಾರವನ್ನು ಕೇಳುವುದನ್ನು ನಿಲ್ಲಿಸುವಂತೆ ಕೇಳಿಕೊಂಡರು.

ಅಭಿಯಾನವನ್ನು ನಿಲ್ಲಿಸಿಬಿಡಿ
ಪ್ರಶಸ್ತಿಯ ವಿಷಯದಲ್ಲಿ ಸೋಷಿಯಲ್ ಮೀಡಿಯಾದ ಒಂದು ವಿಭಾಗ ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಪ್ರಶಂಸಿಸುತ್ತಿದ್ದರೂ, ಅಂತಹ ಅಭಿಯಾನಗಳನ್ನು ನಿಲ್ಲಿಸಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ ಟಾಟಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಯುವ ಉದ್ಯಮಿಗಳ ಪ್ರೋತ್ಸಾಹ
2012 ರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷ ಪದವಿಯಿಂದ ನಿವೃತ್ತರಾದ ನಂತರ, ಟಾಟಾ ಸ್ಟಾರ್ಟ್‌ಅಪ್‌ಗಳಲ್ಲಿ ವೈಯಕ್ತಿಕ ಸಾಮರ್ಥ್ಯದಲ್ಲಿ ಹೂಡಿಕೆ ಮಾಡಲು ಮತ್ತು ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವಲ್ಲಿ ಸಕ್ರಿಯವಾಗಿದ್ದಾರೆ.

ಭಾರತೀಯನಾಗಿರುವುದಕ್ಕೆ ಹೆಮ್ಮೆ ಇದೆ
ನಾನು ಭಾರತೀಯನಾಗಲು ಅದೃಷ್ಟ ಮಾಡಿದ್ದೇನೆ ಎಂದು ಭಾವಿಸುತ್ತೇನೆ ಮತ್ತು ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ. ಎಂದು ಅವರು ಹೇಳಿದರು.

ಟ್ವಿಟ್ಟರ್ ಅಭಿಯಾನ
#BharatRatnaForRatanTata ಅಭಿಯಾನ ಟ್ವಿಟ್ಟರ್ ನಲ್ಲಿ ಪ್ರಾರಂಭವಾಗಿದ್ದು ಟಾಟಾ ಯುವ ಸಾಧಕರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. , ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಒಬ್ಬರ ಸಾಮರ್ಥ್ಯವನ್ನು ನಂಬುವುದು ಅತ್ಯಗತ್ಯ ಎಂದು ಅವರಿಗೆ ತಿಳಿಸಿದೆ ಎಂಬ ವಾಕ್ಯಗಳು ಹರಿದಾಡುತ್ತಿದೆ.












Click it and Unblock the Notifications