ಕತ್ತಿಯಿಂದ ಕೇಕ್ ಕಟ್: ಅತ್ಯಾಚಾರ ಅಪರಾಧಿ ರಾಮ್ ರಹೀಮ್ ಸಂಭ್ರಮ
ಅತ್ಯಾಚಾರ ಮತ್ತು ಕೊಲೆಗಾಗಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಜೈಲಿನಿಂದ 40 ದಿನಗಳ ಪೆರೋಲ್‌ನಲ್ಲಿ ಹೊರಬಂದು ಸಂಭ್ರಮಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ನವದೆಹಲಿ ಜನವರಿ 24: ಪ್ರಸ್ತುತ ಪೆರೋಲ್ ಮೇಲೆ ಹೊರಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರು ಕತ್ತಿಯಿಂದ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ಫೋಟೋಗಳು ವೈರಲ್ ಆಗಿದೆ. ಅತ್ಯಾಚಾರ ಮತ್ತು ಕೊಲೆಗಾಗಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಡೇರಾ ಮುಖ್ಯಸ್ಥರು ಶನಿವಾರ ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಿಂದ 40 ದಿನಗಳ ಪೆರೋಲ್‌ನಲ್ಲಿ ಹೊರಬಂದಿದ್ದಾರೆ. ಬಳಿಕ ಅವರು ತಮ್ಮ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿರುವ ಅವರ ಬರ್ನಾವಾ ಆಶ್ರಮಕ್ಕೆ ಆಗಮಿಸಿದರು. ತಮ್ಮ ಬಿಡುಗಡೆಯನ್ನು ರಾಮ್ ರಹೀಮ್ ಅವರು ಕತ್ತಿಯಿಂದ ಕೇಕ್ ಕತ್ತರಿಸುವುದರೊಂದಿಗೆ ಆಚರಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಾಮೀನು ಅರ್ಜಿಯಲ್ಲಿ ರಾಮ್ ರಹೀಮ್ ಅವರು ಜನವರಿ 25 ರಂದು ಮಾಜಿ ಡೇರಾ ಮುಖ್ಯಸ್ಥ ಷಾ ಸತ್ನಾಮ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಲು ಬಯಸುವುದಾಗಿ ಹೇಳಿದ್ದಾರೆ.
Baba Ram Rahim who is serving a 20-yr-sentence for allegedly raping 2 of his followers in his Dera ashram got 40-day parole and came out of jail on Jan https://t.co/SG1997bplu is seen cutting a cake with a sword. Ram Rahim has got parole 4 a total of 133 days so far! pic.twitter.com/DA8Ry4LdZZ
— Shikha Salaria (@Salaria_Shikha1) January 23, 2023
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ರಾಮ್ ರಹೀಮ್, "ಐದು ವರ್ಷಗಳ ನಂತರ ಈ ರೀತಿ ಆಚರಿಸಲು ಅವಕಾಶ ಸಿಕ್ಕಿದೆ. ಹಾಗಾಗಿ ಕನಿಷ್ಠ ಐದು ಕೇಕ್‌ಗಳನ್ನಾದರೂ ಕತ್ತರಿಸಬೇಕು. ಇದು ಮೊದಲ ಕೇಕ್" ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ಪ್ರಾಸಂಗಿಕವಾಗಿ ಶಸ್ತ್ರಾಸ್ತ್ರಗಳ ಕಾಯಿದೆಯ ಅಡಿಯಲ್ಲಿ ಶಸ್ತ್ರಾಸ್ತ್ರಗಳ ಸಾರ್ವಜನಿಕ ಪ್ರದರ್ಶನವನ್ನು (ಕತ್ತಿಯಿಂದ ಕೇಕ್ ಕತ್ತರಿಸುವುದು) ನಿಷೇಧಿಸಲಾಗಿದೆ.
Haryana | Dera Sacha Sauda chief Gurmeet Ram Rahim was spotted cutting a cake with a sword during his ongoing 40-day parole (23.01) pic.twitter.com/bVrD6ce5q7
— ANI (@ANI) January 24, 2023
ರಾಮ್ ರಹೀಮ್ ಸೋಮವಾರ ಹರ್ಯಾಣ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಅನೇಕ ಸ್ಥಳಗಳಲ್ಲಿ ತಮ್ಮ ಪಂಥದ ಸ್ವಯಂಸೇವಕರು ಆಯೋಜಿಸಿದ್ದ ಮೆಗಾ ಸ್ವಚ್ಛತಾ ಅಭಿಯಾನವನ್ನು ಉದ್ಘಾಟಿಸಿದ್ದರು. ಈ ವೇಳೆ ರಾಜ್ಯಸಭಾ ಸಂಸದ ಕ್ರಿಶನ್ ಲಾಲ್ ಪನ್ವಾರ್ ಮತ್ತು ಮಾಜಿ ಸಚಿವ ಕ್ರಿಶನ್ ಕುಮಾರ್ ಬೇಡಿ ಸೇರಿದಂತೆ ಹರಿಯಾಣದ ಕೆಲವು ಹಿರಿಯ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಳೆದ 14 ತಿಂಗಳಲ್ಲಿ ಇದು ನಾಲ್ಕನೇ ಬಾರಿ ಮತ್ತು ಮೂರು ತಿಂಗಳೊಳಗೆ ಎರಡನೇ ಬಾರಿಗೆ ರಾಮ್ ರಹೀಮ್‌ಗೆ ಪೆರೋಲ್ ನೀಡಲಾಗಿದೆ. ಇದಕ್ಕೂ ಮೊದಲು, ಹರಿಯಾಣ ಪಂಚಾಯತ್ ಚುನಾವಣೆ ಮತ್ತು ಆದಂಪುರ ವಿಧಾನಸಭಾ ಉಪಚುನಾವಣೆಗೆ ಮುಂಚಿತವಾಗಿ ಅವರನ್ನು ಅಕ್ಟೋಬರ್ 2022 ರಲ್ಲಿ 40 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು.

2021ರಲ್ಲಿ ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ ಡೇರಾ ಮುಖ್ಯಸ್ಥ, ಇತರ ನಾಲ್ವರು, ಶಿಕ್ಷೆಗೊಳಗಾದರು. 16 ವರ್ಷಗಳ ಹಿಂದೆ ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ 2019 ರಲ್ಲಿ ಡೇರಾ ಮುಖ್ಯಸ್ಥ ಮತ್ತು ಇತರ ಮೂವರಿಗೆ ಶಿಕ್ಷೆ ವಿಧಿಸಲಾಗಿತ್ತು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications