#ByeByeSmriti ಇರಾನಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

Posted By:
Subscribe to Oneindia Kannada

ನವದೆಹಲಿ, ಜುಲೈ 06: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಪುಟ ಪುನರ್ ರಚನೆ ಬಳಿಕ ಖಾತೆ ಮರು ಹಂಚಿಕೆ ಕೂಡಾ ಮಾಡಿದ್ದಾರೆ. ಸಂಪುಟದಲ್ಲಿ ಹಲವರ ಖಾತೆಗಳು ಬದಲಾಗಿವೆ. ಮುಖ್ಯವಾಗಿ ಎಚ್ ಆರ್ ಡಿ ಸಚಿವೆಯಾಗಿದ್ದ ಸ್ಮೃತಿ ಇರಾನಿ ಅವರಿಗೆ ಜವಳಿ ಖಾತೆ ನೀಡಲಾಗಿದೆ.

ಕ್ಯಾಬಿನೆಟ್ ದರ್ಜೆಗೇರಿದ ಪ್ರಕಾಶ್ ಜಾವ್ಡೇಕರ್ ಅವರಿಗೆ ಮಾನವ ಸಂಪನ್ಮೂಲ ಖಾತೆ ದೊರೆತಿದೆ. ಮೋದಿ ಸಂಪುಟದ ವಿವಾದಿತ ಸಚಿವೆಯಾಗಿರುವ ಸ್ಮೃತಿ ಇರಾನಿ ಅವರು ಖಾತೆ ಕಳೆದುಕೊಂಡಿರುವ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಬಗೆ ಬಗೆ ಟ್ವೀಟ್ ಗಳು ಬಂದಿವೆ. ಅವುಗಳಲ್ಲಿ ಹೆಚ್ಚಿನವು ಸ್ಮೃತಿ ಅವರನ್ನು ಗೇಲಿ ಮಾಡಿದ ಟ್ವೀಟ್ಸ್ ಎಂದು ಒತ್ತಿ ಹೇಳಬೇಕಾಗಿಲ್ಲ.[ಖಾತೆ ಹಂಚಿಕೆಯಲ್ಲಿ ಭಾರೀ ಬದಲಾವಣೆ, ಸ್ಮೃತಿಗೆ ಶಾಕ್!]

#ByeByeSmriti: Twitterati bid adieu to former 'Yale educated' HRD minister, Irani

ಸ್ಮೃತಿ ಅವರು ಈಗ ಶಿಸ್ತಿನಿಂದ ಡಿಗ್ರಿ ಪಡೆಯಲು ಓದಬಹುದಾಗಿದೆ. ನೂತನ ಖಾತೆಯಿಂದ ಎಲ್ಲರಿಗೂ ಸಮವಸ್ತ್ರಭಾಗ್ಯ ಸಿಗಲಿದೆ. ಮಾಜಿ ಕ್ರಿಕೆಟರ್ ಚೇತನ್ ಚೌಹನ್ ಅವರು ಎನ್ ಐಎಫ್ ಟಿ ಚೇರ್ಮನ್ ಆಗಬಹುದಾದರೆ, ಸ್ಮೃತಿ ಇರಾನಿ ಅವರು ಏಕೆ ಜವಳಿ ಖಾತೆ ಸಚಿವೆಯಾಗಬಾರದು ಎಂದು ಪ್ರಶ್ನಿಸಿದವರು ಇದ್ದಾರೆ. [ಮೋದಿ ಸಂಪುಟ ಸೇರಿದ 19 ಸಚಿವರ ಸಂಕ್ಷಿಪ್ತ ಪರಿಚಯ]

ವಿಶ್ವವಿದ್ಯಾಲಯಗಳು ಹಾಗೂ ವಿದ್ಯಾರ್ಥಿಗಳಿಗೆ ಅಚ್ಚೇ ದಿನ್ ಬಂತು ಬಿಟ್ಟಿತು ಎಂದು ಕಾಲೆಳೆಯುವ ಟ್ವೀಟ್ ಕೂಡಾ ಇದೆ. ಈ ರೀತಿ ಥರಾವತಿ ಟ್ವೀಟ್ ಗಳಲ್ಲಿ ಆಯ್ದ ಕೆಲ ಟ್ವೀಟ್ಸ್ ಇಲ್ಲಿವೆ ನೋಡಿ, ಓದಿ, ಪ್ರತಿಕ್ರಿಯಿಸಿ...

[ಮೋದಿ ಸಂಪುಟದಲ್ಲಿ ಯಾರಿಗೆ, ಯಾವ ಖಾತೆ?]


(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
#ByByeSmriti is trending on Twitter on Wednesday morning after 'Yale educated' HRD minister, Irani was dropped from the HRD ministry. Twitterati making fun on Irani's departure, Check out some hilarious reactions on the microblogging website.
Please Wait while comments are loading...