ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡ ಗೆಲುವಿಗೆ ಮುನ್ನಾ ಸಣ್ಣ ಸೋಲುಗಳು ಸಾಮಾನ್ಯ: ರಾಜನಾಥ ಸಿಂಗ್

|
Google Oneindia Kannada News

ನವ ದೆಹಲಿ, ಮೇ 31: ದೊಡ್ಡ ಜಿಗಿತ ಮಾಡಬೇಕಾದರೆ ಎರಡು ಹೆಜ್ಜೆ ಹಿಂದೆ ಇಡಲೇ ಬೇಕು ಹಾಗೆಯೇ ದೊಡ್ಡ ಗೆಲುವಿಗೆ ಮುನ್ನಾ ಸಣ್ಣ ಸೋಲುಗಳು ಸಾಮಾನ್ಯ ಎಂದು ಇಂದು ಹೊರಬಂದ ಉಪ-ಚುನಾವಣೆ ಫಲಿತಾಂಶದ ಬಗ್ಗೆ ಬಿಜೆಪಿ ಮಂತ್ರಿ ರಾಜನಾಥ್ ಸಿಂಗ್ ಪ್ರತಿಕ್ರಿಸಿದ್ದಾರೆ.

ಉಪಚುನಾವಣಾ ಫಲಿತಾಂಶ: 14 ರಲ್ಲಿ ಬಿಜೆಪಿಗೆ 3, ಕಾಂಗ್ರೆಸಿಗೆ 5 ಗೆಲುವುಉಪಚುನಾವಣಾ ಫಲಿತಾಂಶ: 14 ರಲ್ಲಿ ಬಿಜೆಪಿಗೆ 3, ಕಾಂಗ್ರೆಸಿಗೆ 5 ಗೆಲುವು

ಇಂದು ಹೊರಬಿದ್ದ ವಿವಿಧ ರಾಜ್ಯಗಳಲ್ಲಿ ನಡೆದ 14 ಕ್ಷೇತ್ರಗಳ ಉಪ-ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ 2 ಗೆಲುವು ಮಾತ್ರವೇ ಲಭಿಸಿದ್ದು, ಕಾಂಗ್ರೆಸ್‌ಗೆ 4 ಗೆಲುವು ಧಕ್ಕಿದೆ. ಉಳಿದ ಕ್ಷೇತ್ರಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿವೆ. ಅದರಲ್ಲಿಯೂ ಪ್ರತೀಷ್ಠಿತ ಎಂದು ಪರಿಗಣಿಸಲಾಗಿದ್ದ ಉತ್ತರ ಪ್ರದೇಶದ ಕೈರಾನಾದಲ್ಲಿ ಬಿಜೆಪಿಗೆ ಸೋಲಾಗಿದೆ.

 By-Elections small set back wont affect on BJP: Rajnath Singh

ಉಪ-ಚುನಾವಣೆಯಲ್ಲಿನ ಸೋಲಿನ ಬಗ್ಗೆ ಮಾತನಾಡಿದ ರಾಜನಾಥ ಸಿಂಗ್ ಅವರು, ಸಮೀಪದಲ್ಲಿರುವ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಗೆಲುವು ನಾವು ಸಾಧಿಸಲಿದ್ದೇವೆ ಎಂಬುದಕ್ಕೆ ಇಂದಿನ ಸೋಲು ಉದಾಹರಣೆ ಎಂದು ತಮಾಷೆಯಾಗಿ ಹೇಳಿದ್ದಾರೆ.

10 ರಾಜ್ಯಗಳಲ್ಲಿ ಲೋಕಸಭೆ, ವಿಧಾನಸಭೆ ಉಪಚುನಾವಣೆ ಫಲಿತಾಂಶ 2018 LIVE10 ರಾಜ್ಯಗಳಲ್ಲಿ ಲೋಕಸಭೆ, ವಿಧಾನಸಭೆ ಉಪಚುನಾವಣೆ ಫಲಿತಾಂಶ 2018 LIVE

ಕೈರಾನಾದಲ್ಲಿ ಬಿಜೆಪಿ ಎದುರು ಗೆದ್ದ ಸಮಾಜವಾದಿ ಪಾರ್ಟಿಯ ನಾಯಕ ಅಖಿಲೇಶ್ ಯಾದವ್ ಮಾತನಾಡಿ, ಯಾರು ಸಂವಿಧಾನದಲ್ಲಿ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದಾರೆಯೋ ಅವರಿಗೆ ಜನ ಮತ ಹಾಕಿದ್ದಾರೆ. ಗೂಂಡಾ ರಾಜ್ಯ ಚಲಾಯಿಸುವ ಇಚ್ಛೆಯುಳ್ಳವರಿಗೆ ಮತದಾರ ಸರಿಯಾಗಿ ಬುದ್ಧಿ ಕಲಿಸಿದ್ದಾನೆ' ಎಂದಿದ್ದಾರೆ.

English summary
'For a massive leap, one always has to go two steps backward. We are going to take a massive leap' BJP minister Rajnath Singh said about by-election result. He said that we will win Lokasabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X