ಕೆಲಸದ ನಿಮಿತ್ತ ಪತಿ ಪ್ರವಾಸಕ್ಕೆ ಹೋದ, ಪತ್ನಿ ಇನ್ನೊಂದು ಮದುವೆಯಾದ್ಳು

Posted By:
Subscribe to Oneindia Kannada

ಭುವನೇಶ್ವರ, ಮಾ 9: ಕೆಲಸದ ನಿಮಿತ್ತ ಪತಿ ಪ್ರವಾಸಕ್ಕೆ ಹೋಗಿದ್ದಾಗ, ಪತ್ನಿ ಇನ್ನೊಬ್ಬನನ್ನು ಮದುವೆಯಾದ ಘಟನೆ ಒರಿಸ್ಸಾದ ಉಕ್ಕಿನ ನಗರ ರೂರ್ಕೆಲಾದಿಂದ ವರದಿಯಾಗಿದೆ. ಈ ಸಂಬಂಧ ಪತಿ, ಪೊಲೀಸ್ ಮೆಟ್ಟಲೇರಿದ್ದಾನೆ.

ವಾಣಿಜ್ಯೋದ್ಯಮಿಯಾಗಿರುವ ವ್ಯಕ್ತಿ ಉತ್ತರಪ್ರದೇಶಕ್ಕೆ ಕೆಲಸ ಸಂಬಂಧ ಪ್ರವಾಸದಲ್ಲಿದ್ದ, ಆ ವೇಳೆ ಪತ್ನಿ ಇನ್ನೊಬ್ಬನ ಜೊತೆ ಹಸೆಮಣೆ ಏರಿದ ವಿಷಯ ಗೊತ್ತಾಗಿದೆ. ವಾರಣಾಸಿಯಿಂದ ಪತ್ನಿಯ ಮೊಬೈಲಿಗೆ ಫೋನ್ ಮಾಡಿದಾಗ ಆಕೆ ಕರೆಯನ್ನು ಸ್ವೀಕರಿಸರಿರಲಿಲ್ಲ.

ವಿಡಿಯೋ: 'ತೀಟೆ ಸುಬ್ಬ' ಮದುಮಗನಿಗೆ ಕ್ವಾಟ್ಲೆ ಕೊಟ್ಟ ಸ್ನೇಹಿತರು

ಕೊನೆಗೆ, ಪತ್ನಿಯ ತಾಯಿಗೆ ಫೋನ್ ಮಾಡಿದಾಗ ಈತನ ಅತ್ತೆ ಮಗಳು ಇನ್ನೊಬ್ಬನನ್ನು ಮದುವೆಯಾದ ವಿಚಾರವನ್ನು ತಿಳಿಸಿದ್ದಾರೆ. ಕೂಡಲೇ ಪ್ರವಾಸ ಮೊಟಕುಗೊಳಿಸಿ ರೂರ್ಕೆಲಾಗ ಬಂದ ಪತಿ, ರಘುನಾಥಪಳ್ಳಿ ಪೊಲೀಸರಿಗೆ ದೂರು ನೀಡಿ, ಜುಲೈ 2016ರಲ್ಲಿ ಮದುವೆಯಾಗಿರುವ ಪ್ರಮಾಣಪತ್ರ ತೋರಿಸಿದ್ದಾನೆ.

Odisha claims wife remarried while he was on UP tour

ಜುಲೈ ತಿಂಗಳಲ್ಲಿ ನನ್ನ ಕುಟುಂಬದಲ್ಲಿ ನಮ್ಮಿಬ್ಬರ ಮದುವೆಗೆ ಪೋಷಕರು ಒಪ್ಪಿಗೆ ತೋರದೇ ಇದ್ದಾಗ, ನಾವಿಬ್ಬರೂ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿರುವುದಾಗಿ ಹೇಳಿರುವ ಪತಿ, ಅದಕ್ಕೆ ಸಂಬಂಧಪಟ್ಟ ದಾಖಲೆಯನ್ನು ನೀಡಿ, ತನ್ನ ಪತ್ನಿಯ ವಿರುದ್ದ ದೂರು ದಾಖಲಿಸಿದ್ದಾನೆ.

ಮಾರ್ಚ್ ನಾಲ್ಕರಂದು ಹಲವು ಬಾರಿ ಫೋನ್ ಮಾಡಿದರೂ, ಪತ್ನಿ ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ನಂತರ ಪತ್ನಿಯ ತಾಯಿಗೆ ಫೋನ್ ಮಾಡಿದೆ, ವಿಷಯ ತಿಳಿದು ರೂರ್ಕೆಲಾಗೆ ಬಂದಾಗ, ಪತ್ನಿ ಆರತಕ್ಷತೆಗೆ ಸಿದ್ದವಾಗುತ್ತಿದ್ದಳು. ನನಗೆ ನನ್ನ ಪತ್ನಿ ಮೋಸ ಮಾಡಿದ್ದಾಳೆ, ನನಗೆ ನ್ಯಾಯ ಕೊಡಿಸಿ ಎಂದು ಪತಿ ಪೊಲೀಸರಲ್ಲಿ ಅವಲತ್ತು ತೋಡಿಕೊಂಡಿದ್ದಾನೆ.

"ವಧು-ವರರು ಮೆಚ್ಚಿದರಾಯ್ತು, ಮದುವೆಯಲ್ಲಿ ಬೇರಾರೂ ತಲೆಹಾಕಬೇಕಿಲ್ಲ!"

ಆದರೆ, ನನ್ನ ಮಗಳಿಗೆ ಇದೇ ಮೊದಲ ಮದುವೆ, ಎರಡನೇ ಮದುವೆ ಮಾಡುತ್ತಿದ್ದೇವೆ ಎನ್ನುವ ಈತನ ಆರೋಪ ಸತ್ಯಕ್ಕೆ ದೂರವಾದುದು ಎಂದು ಪತ್ನಿಯ ತಂದೆ ಪೊಲೀಸರಿಗೆ ಲಿಖಿತ ದೂರು ಕೊಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A businessman in Odisha’s steel city Rourkela lodged a complaint with the police on Thursday (Mar 8) that his wife, married another man while he was on a work trip to Uttar Pradesh last week. In his complaint filed at police station in the city, the businessman said he was in Varanasi when he got the news that his wife had remarried.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ