Alcohol Price Reduction: ಮದ್ಯ ಪ್ರಿಯರಿಗೆ ಬಂಪರ್ ಗುಡ್‌ನ್ಯೂಸ್: ಕೇಂದ್ರ ನಿರ್ಧಾರದಿಂದ ಬಿಯರ್‌ ಬೆಲೆ ಭರ್ಜರಿ ಇಳಿಕೆ!

Alcohol Price Reduction: ಕಳೆದ ಕೆಲವು ದಿನಗಳಿಂದ ಮದ್ಯ ಪ್ರಿಯರಿಗೆ ಒಂದರ ಮೇಲೆ ಒಂದು ಶಾಕ್‌ ಎದುರಾಗುತ್ತಲ್ಲೇ ಇತ್ತು. ಅದರಲ್ಲೂ ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ನಿರಂತರವಾಗಿ ಶಾಕ್‌ ಎದುರಾಗುತ್ತಲ್ಲೇ ಇತ್ತು. ಕಳೆದ ಎರಡು ವರ್ಷದ ಅವಧಿಯಲ್ಲಿ ಮದ್ಯದ ಬೆಲೆಯು ಮೂರು ಬಾರಿ ಹೆಚ್ಚಳವಾದಂತೆ ಆಗಿತ್ತು. ಇದರ ನಡುವೆ ಈಚೆಗೆ ಬಿಯರ್‌ ಬೆಲೆಯನ್ನು ಮತ್ತೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರವು ಮದ್ಯ ಪ್ರಿಯರಿಗೆ ಶಾಕ್‌ ನೀಡಿತ್ತು. ಇದೀಗ ಮದ್ಯ ಪ್ರಿಯರು ಸಂತೋಷಪಡುವ ಖುಷಿಯೊಂದು ಇದೆ. ಮದ್ಯ ತೆರಿಗೆ ಕಾರಣದಿಂದಾಗಿ ಬಿಯರ್‌ ಬೆಲೆಯು ಭರ್ಜರಿ ಇಳಿಕೆಯಾಗುತ್ತಿದೆ. ತುಂಬಾ ದಿನಗಳ ನಂತರ ಬಿಯರ್‌ ಪ್ರಿಯರು ಸಂತೋಷಗೊಳ್ಳುವ ಸುದ್ದಿಯೊಂದು ಇಲ್ಲಿದೆ.

ಭಾರತ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಅಮೆರಿಕ ಹಾಗೂ ಬ್ರಿಟನ್‌ಗೆ ಸಂಬಂಧಿಸಿದಂತೆ ಟ್ಯಾಕ್ಸ್‌ ವಿಚಾರದಲ್ಲಿ ಕೆಲವೊಂದು ವಿನಾಯಿತಿಯನ್ನು ನೀಡಿದ್ದು ಇದು ಭಾರೀ ಲಾಭವನ್ನು ತಂದುಕೊಟ್ಟಿದೆ. ಈ ಬೆಳವಣಿಗೆ ಪರೋಕ್ಷವಾಗಿ ದೇಶದಲ್ಲಿ ಬಿಯರ್‌ ಬೆಲೆ ಇಳಿಕೆಗೆ ಕಾರಣವಾಗಿದೆ. ದೇಶದಲ್ಲಿ ಕೆಲವು ನಿರ್ದಿಷ್ಟ ಬ್ರ್ಯಾಂಡ್‌ಗಳ ಬಿಯರ್‌ ಬೆಲೆ ಭರ್ಜರಿ ಇಳಿಕೆಯಾಗಲಿದೆ. ಇದು ಬಿಯರ್‌ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಬ್ರಿಟಿಷ್ ಬಿಯರ್ ಬ್ರ್ಯಾಂಡ್ ಸೇರಿದಂತೆ ಕೆಲವೊಂದು ನಿರ್ದಿಷ್ಟ ಬಿಯರ್‌ಗಳ ಮೇಲಿನ ಬೆಲೆಯನ್ನು ಭಾರತದಲ್ಲಿ ಇಳಿಸಲಾಗಿದೆ. ಇದರಿಂದ ಭಾರತದಲ್ಲಿ ಬ್ರಿಟಿಷ್ ಬ್ರ್ಯಾಂಡ್‌ ಬಿಯರ್‌ಗಳ ಬೆಲೆಯು ಭರ್ಜರಿ ಇಳಿಕೆಯಾಗಲಿದೆ. ಈ ಮೊದಲಿನ ದರಕ್ಕಿಂತ ಶೇ 25ರಷ್ಟಾದರೂ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

Bumper Good News for Alcohol lovers Beer amp amp Alcohol Prices Dropped Drastically Due to Central Decision

ಬ್ರಿಟನ್‌ ಮೂಲದ ಕಂಪನಿಗಳಿಂದ ತಯಾಗಿರುವ ಬ್ರಾಂಡ್‌ಗಳ ಮೇಲೆ ಶೇ.150ರಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರವು ವಿಧಿಸುತ್ತಿತ್ತು. ಇದೀಗ ಭಾರತದಲ್ಲಿ ತೆರಿಗೆ ಪ್ರಮಾಣವನ್ನು ಇಳಿಸಲಾಗಿದೆ. ಇನ್ಮುಂದಿನ ದಿನಗಳಲ್ಲಿ ಬ್ರಿಟನ್‌ನ ಬಿಯರ್‌ ಬ್ರ್ಯಾಂಡ್‌ಗಳ ಮೇಲೆ ಶೇ 75ರಷ್ಟು ತೆರಿಗೆ ಕಡಿಮೆ ಮಾಡಲು ಭಾರತೀಯ ಸರ್ಕಾರವು ಮುಂದಾಗಿದೆ. ಇದು ಬಿಯರ್‌ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌ ಅಂತಲೇ ಹೇಳಲಾಗುತ್ತಿದೆ. ಬ್ರಿಟಿಷ್ ಸ್ಕಾಚ್ ಸೇರಿದಂತೆ ವಿವಿಧ ಮದ್ಯಗಳ ಮೇಲಿನ ತೆರಿಗೆಯು ಇಳಿಕೆಯಾಗಿರುವುದರಿಂದ ಬಿಯರ್‌ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.

ಸದ್ಯ ಭಾರತ ಸರ್ಕಾರವು ಇಂಗ್ಲೆಂಡ್‌ನ ವೈನ್‌ನ ಮೇಲೆ ಯಾವುದೇ ತೆರಿಗೆಯ ವಿನಾಯಿತಿಯನ್ನು ನೀಡಿಲ್ಲ. ಆದರೆ, ಯುಕೆ ಬಿಯರ್‌ಗಳ ಮೇಲೆ ಕೆಲವೊಂದು ಪ್ರಮುಖ ತೆರಿಗೆ ವಿನಾಯಿತಿಯನ್ನು ನೀಡಿದ್ದು. ಇಂಗ್ಲೆಂಡ್‌ನಿಂದ ಆಮದು ಆಗುವ ಪ್ರಮುಖ ಬಿಯರ್‌ಗಳ ಬೆಲೆ ಇಳಿಕೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

Bumper Good News for Alcohol lovers Beer amp amp Alcohol Prices Dropped Drastically Due to Central Decision

ಕರ್ನಾಟಕದಲ್ಲಿ ಬಿಯರ್‌ ಮಾರಾಟ ಇಳಿಕೆ: ಇನ್ನು ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ನಿರಂತರವಾಗಿ ಬಿಯರ್‌ ಬೆಲೆಯನ್ನು ಏರಿಕೆ ಮಾಡುತ್ತಿರುವುದರಿಂದ ಈಗಾಗಲೇ ರಾಜ್ಯದಲ್ಲಿ ಬಿಯರ್‌ ಮಾರಾಟವು ಗಣನೀಯವಾಗಿ ಇಳಿಕೆಯಾಗಿದೆ. ಈಗಾಗಲೇ ಬಿಯರ್‌ ಕಂಪನಿಗಳು ಕರ್ನಾಟಕದಲ್ಲಿ ಇನ್ಮುಂದೆ ಬಿಯರ್‌ ಬೆಲೆಯನ್ನು ಹೆಚ್ಚಳ ಮಾಡಬೇಡಿ ಇದರಿಂದ ಬಿಯರ್‌ ಮಾರಾಟದ ಮೇಲೆ ಪರಿಣಾಮ ಬೀರಲಿವೆ ಎಂದು ಮನವಿ ಮಾಡಿದ್ದವು. ಆದರೆ, ಇದರ ಹೊರತಾಗಿಯೂ ರಾಜ್ಯದಲ್ಲಿ ಬಿಯರ್‌ ಬೆಲೆಯು ಏರಿಕೆಯಾಗಿದೆ.

ಮದ್ಯ ಪ್ರಿಯರಿಗೆ ಸಂತೋಷ: ಇನ್ನು ಈ ವಿಷಯವನ್ನು ಕೇಳಿ ಮದ್ಯ ಪ್ರಿಯರು ಸಂತೋಷಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೇವಲ ಬೆಲೆ ಏರಿಕೆಯ ಸುದ್ದಿಯನ್ನೇ ಕೇಳಿದ್ದ ಮದ್ಯ ಪ್ರಿಯರು ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿ ಬೆಲೆ ಇಳಿಕೆಯಾಗುವ ಸುದ್ದಿಯನ್ನು ಕೇಳಿ ಸಂತೋಷಿತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+