ಬಜೆಟ್ 2017: ಮೂಲ ಸೌಕರ್ಯಕ್ಕೆ ಜೇಟ್ಲಿ ಕೊಟ್ಟಿದ್ದು ಬರೀ ಸಪ್ಪೆ ಸಪ್ಪೆ..

Subscribe to Oneindia Kannada

ದೆಹಲಿ, ಫೆಬ್ರವರಿ 1: ಬುಧವಾರ 2017-18ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವ ಅರುಣ್ ಜೇಟ್ಲಿ ಮೂಲ ಸೌಕರ್ಯಕ್ಕೆ ಹೇಳಿಕೊಳ್ಳುವಂತ ಯಾವ ಯೋಜನೆಗಳನ್ನೂ ಘೋಷಿಸಿಲ್ಲ. ಹಾಗೆ ನೋಡಿದರೆ ಜೇಟ್ಲಿ ಬಜೆಟಿನಲ್ಲಿ ಮೂಲ ಸೌಕರ್ಯ ವಲಯ ತೀರಾ ಸಪ್ಪೆಯಾಗಿದೆ.[ಬಜೆಟ್ 2017: 'ಡಿಜಿಟಲ್ ವ್ಯವಹಾರ'ವೇ ಮೋದಿ ಸರಕಾರದ ಮಂತ್ರ]

Budget: Jaitlley gives no more push to infrastructure

ಜೇಟ್ಲಿ ತಮ್ಮ ಬಜೆಟಿನಲ್ಲಿ ಮೂಲ ಸೌಕರ್ಯ ವಲಯಕ್ಕೆ ನೀಡಿದ ಕೊಡುಗೆಗಳು ಹೀಗಿವೆ,

*2017-18ನೇ ವರ್ಷದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಬಂದರು ಅಭಿವೃದ್ಧಿಗೆ 1.51 ಲಕ್ಷ ಕೋಟಿ ಮೀಸಲು

*ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ 64,900 ಕೋಟಿ ಮೀಸಲು. ಹಿಂದಿನ ಬಜೆಟಿನಲ್ಲಿ ಈ ಪ್ರಮಾಣ 57,976 ಕೋಟಿ.

*ಬಂದರುಗಳನ್ನು ಸಂಪರ್ಕಿಸುವ 2,000 ಕಿಲೋಮೀಟರ್ ಉದ್ದದ ರಸ್ತೆಗಳನ್ನು ಗುರುತಿಸಲಾಗಿದ್ದು 2017-18ರಲ್ಲಿ ಅವುಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಕ್ರಮ

*ಎರಡನೇ ಹಂತದ ನಗರಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣಗಳ ಕಾರ್ಯಾರಂಭ ಮತ್ತು ನಿರ್ವಹಣೆ

*2017-18ರಲ್ಲಿ ದಿನಕ್ಕೆ 133 ಕಿಲೋಮೀಟರಿನಂತೆ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ರಸ್ತೆಗಳ ನಿರ್ಮಾಣ

*ಮುಂದಿನ ಬಜೆಟ್ ವೇಳೆಗೆ 1,50,000 ಗ್ರಾಮ ಪಂಚಾಯತ್ ಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ

*ಎರಡನೇ ಹಂತದ ಸೋಲಾರ್ ಪಾರ್ಕ್ ಗಳ ಮೂಲಕ 20,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ.

*2018ರ ಅಂತ್ಯಕ್ಕೆ ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ


ಹಣಕಾಸು ವಲಯಕ್ಕೆ ಜೇಟ್ಲಿ ನೀಡಿದ ಹೊಸ ಯೋಜನೆಗಳು ಹೀಗಿವೆ,[ಬಜೆಟ್ 2017: ಯಾವ್ದು ಏರಿಕೆ? ಯಾವ್ದು ಇಳಿಕೆ?]

*ಮುಂದಿನ ಆರ್ಥಿಕ ವರ್ಷದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಚಾರ ಮಂಡಳಿ ರದ್ದು. 2017-18ರ ಆರ್ಥಿಕ ವರ್ಷದಲ್ಲಿ ಸದ್ಯಕ್ಕಿರುವ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿನ ನೀತಿಗಳ ಪರಿಷ್ಕರಣೆ

*ಅಕ್ರಮ ಠೇವಣಿ ಪದ್ಧತಿಗಳನ್ನು ಗುರುತಿಸಿ ಅವುಗಳಿಂದಾಗುತ್ತಿರುವ ತೊಂದರೆಗಳ ನಿವಾರಣೆಗೆ ಕ್ರಮ

*ಮೂಲ ಸೌಕರ್ಯ ನಿರ್ವಹಣೆ ಹಾಗೂ ನಿರ್ಮಾಣ ವ್ಯಾಜ್ಯಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ರೂಪುರೇಷೆ
*ಆರ್ಥಿಕ ವಲಯಕ್ಕಾಗಿ ವಿಶೇಷವಾದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸ್ಥಾಪನೆ

ರಿಯಲ್ ಎಸ್ಟೇಟ್ ಉದ್ಯಮದ ಪುನಶ್ಚೇತನಕ್ಕೆ ಜೇಟ್ಲಿ ನೀಡಿದ ಕೊಡುಗೆಗಳಿವು,

*ಸರ್ವರಿಗೂ ಸಮಾನವಾಗಿ ಕೈಗೆಟಕುವ ಬೆಲೆಯಲ್ಲಿ ಮನೆಯ ಕನಸು ನನಸಾಗಿಸಲು ನಿರ್ಧಾರ

*ಸರ್ವರಿಗೂ ಸೂರು ಎಂಬ ಪರಿಕಲ್ಪನೆಯಲ್ಲಿ ಮನೆ ಯೋಜನೆಗಳನ್ನು ಘೋಷಿಸುವ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿಗೆ ಚಿಂತನೆ

*ಪ್ರತಿಯೊಂದು ವಸತಿ ಸಮುಚ್ಛಯಕ್ಕೂ ಅದು ನಿರ್ಮಾಣವಾಗಿ ಕಂಪ್ಲೀಷನ್ ಪ್ರಮಾಣ ಪತ್ರ ಸಿಕ್ಕ ನಂತರವಷ್ಟೇ ತೆರಿಗೆ ವಿಧಿಸುವ ಬಗ್ಗೆ ಚಿಂತನೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Instead of promote good infrastructure in the country, government announced very few projects in its 2017-18 budget.
Please Wait while comments are loading...