ಅರುಣ್ ಜೇಟ್ಲಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
ನವದೆಹಲಿ, ಫೆಬ್ರವರಿ 1: 2018-19ರ ಕೇಂದ್ರ ಬಜೆಟ್ ಅಭಿವೃದ್ಧಿ ಪರ ಬಜೆಟ್ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಈ ಬಜೆಟ್ 'ನವ ಭಾರತ'ದ ಮುನ್ನೋಟಕ್ಕೆ ಬಲ ತುಂಬಲಿದೆ ಎಂದು ಹೇಳಿದ್ದಾರೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ತಂಡವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಬಜೆಟ್ ನಿಂದ ರೈತರು, ದಲಿತರು ಮತ್ತು ಬುಡಕಟ್ಟು ಜನರು ಲಾಭವನ್ನು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
ಗ್ರಾಮೀಣ ಭಾರತದ ಜನರಿಗೆ ಬಜೆಟ್ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಪ್ರಧಾನಿ ವಿಶ್ಲೇಷಿಸಿದ್ದಾರೆ.
ಇನ್ನು ತಮ್ಮ ಸರಕಾರದ ಶೌಚಾಲಯ ನಿರ್ಮಾಣ, ಮನೆ ನಿರ್ಮಾಣ ವಿದ್ಯುತ್, ಆರೋಗ್ಯ ಕ್ಷೇತ್ರಗಳ ಬಗ್ಗೆ ಮಾತನಾಡಿದ ಮೋದಿ, ಬಜೆಟ್ ನಲ್ಲಿ ಕೃಷಿಯಿಂದ ಮೂಲಸೌಕರ್ಯದವರೆಗೆ ಎಲ್ಲಾ ಕ್ಷೇತ್ರಗಳಿಗೂ ಒತ್ತು ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಬಜೆಟ್, ರೈತ ಪರ, ಸಾಮಾನ್ಯ ಜನರ ಪರ, ಉದ್ಯಮ ಪರವಾಗಿದ್ದು, 'ಈಸ್ ಆಫ್ ಲಿವಿಂಗ್' ಮತ್ತು 'ಈಸ್ ಆಫ್ ಡೂಯಿಂಗ್ ಬಿಸಿನೆಸ್'ಗೆ ಬಲ ತುಂಬಲಿದೆ," ಎಂದಿದ್ದಾರೆ.
ಸದ್ಯದಲ್ಲೇ ಸರಕಾರ ಅನುತ್ಪಾದಕ ಸಾಲಗಳಿಗೆ ಸಂಬಂಧಿಸಿದಂತೆ ತನ್ನ ನೀತಿಯನ್ನು ಸ್ಪಷ್ಟಪಡಿಸಲಿದೆ ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.











Click it and Unblock the Notifications