ಬಜೆಟ್ 2026: ಹಿಮಾಲಯ ಚಾರಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ, ಬೆಂಗಳೂರಿನಿಂದ ಅಲ್ಲಿಗೆ ತಲುಪುವುದು ಹೇಗೆ? ತಿಳಿಯಿರಿ
ನವದೆಹಲಿ: ಭಾರತದಲ್ಲಿ ಪರಿಸರ ಸ್ನೇಹಿ ಟ್ರೆಕ್ಕಿಂಗ್ ಮತ್ತು ಪಾದಯಾತ್ರೆಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಪ್ರಮುಖ ಯೋಜನೆ ಘೋಷಿಸುವ ನಿರೀಕ್ಷೆ ಇದೆ. ಈ ಬಗ್ಗೆ ಇಂದಿನ ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ್ದಾರೆ.
ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ ಪರ್ವತ ಹಾದಿಗಳು, ಹಾಗೆಯೇ ಪೂರ್ವ ಘಟ್ಟಗಳಲ್ಲಿನ ಅರಕು ಕಣಿವೆಯ ಪ್ರವಾಸಿ ಸ್ಥಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದರೊಂದಿಗೆ ಪಶ್ಚಿಮ ಘಟ್ಟಗಳಲ್ಲಿರುವ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪವಿತ್ರವಾದ ಮತ್ತು ನೈಸರ್ಗಿಕ ಸೌಂದರ್ಯದಿಂದ ಕೂಡಿದ ಪರ್ವತವಾದ 'ಪೋಧಿಗೈ ಮಲೈ'ನಲ್ಲಿನ ಅಭಿವೃದ್ಧಿ ಸಹ ಸೇರಿದೆ.

ಪ್ರವಾಸೋದ್ಯಮ ಯೋಜನೆ ಅಡಿಯಲ್ಲಿ ಪಾರಂಪರಿಕ ಹಾಗೂ ಸಂಸ್ಕೃತಿ ಪ್ರವಾಸೋದ್ಯಮದ ಅಡಿ ಲೋಥಾಲ್, ಧೋಲಾವಿರ, ರಾಖಿಗಢಿ, ಆದಿಚನಲ್ಲೂರ್, ಸಾರನಾಥ್, ಹಸ್ತಿನಾಪುರ ಮತ್ತು ಲೇಹ್ ಅರಮನೆ ಸೇರಿ 15 ಪುರಾತತ್ವ ತಾಣಗಳು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಪ್ರವಾಸ ಮಾರ್ಗದರ್ಶಿ ಗೈಡ್ ನೇಮಕ ಜೊತೆಗೆ ಅವರಿಗೆ ತರಬೇತಿ ನೀಡಲಾಗುವುದು. ಜೊತೆಗೆ ಆಯಾ ತಾಣಗಳ ಕಥೆ ಹೇಳವು ತಂತ್ರಜ್ಞಾನ, ಪರಿಕರ ಪರಿಚಯಿಸುವ ಚಿಂತನೆ ಇದೆ ಎಂದು ವಿತ್ತ ಸಚಿವೆ ತಿಳಿಸಿದರು.
ಇನ್ನೂ ದಕ್ಷಿಣ ಭಾರತದ ಕರಾವಳಿ ಒಡಿಶಾ, ಕರ್ನಾಟಕ ಮತ್ತು ಕೇರಳದ ಪ್ರಮುಖ ಗೂಡುಕಟ್ಟುವ (ಕರಾವಳಿ) ಸ್ಥಳಗಳಲ್ಲಿ ಆಲಿವ್ ಆಮೆಗಳ ಸಂರಕ್ಷಣೆಗಾಗಿ ಟರ್ಟಲ್ ಟ್ರೇಲ್ಸ್‌ಗೆ ಒತ್ತು ನೀಡಲಾಗುತ್ತದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಪುಲಿಕಾಟ್ ಸರೋವರದ ಸುತ್ತಲೂ ಪಕ್ಷಿ ವೀಕ್ಷಣೆಗೆ ವಿಶೇಷ ರೈಲು ಬಿಡುವ ಮೂಲಕ ಈ ಭಾಗದ ಸಾರಿಗೆ ಸುಧಾರಣೆ ಜೊತೆಗೆ ಪ್ರವಾಸೋದ್ಯಮ ಉತ್ತೇಜಿಸುವ ಬಗ್ಗೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
3 ರಾಜ್ಯಗಳ ಪರ್ವತ ಪ್ರದೇಶಕ್ಕೆ ಚಾರಣಿಗರು ಭೇಟಿ ನೀಡೋದೇಗೆ?
ಸದಾ ಹಿಮದಿಂದ ಕೂಡಿರುವ ಪರ್ವತಗಳ ಸಾಲು ಕಣ್ತುಂಬಿಕೊಳ್ಳಲು ಈ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ನದಿ, ಹಸಿರು, ಬಿಳಿಯ ನೊರೆಯಂತೆ ಕಾಣುವ ಪರ್ವತಗಳನ್ನು ಕಣ್ತುಂಬಿಕೊಳ್ಳಲಾಗುತ್ತದೆ. ವರ್ಷದ ಒಂದಷ್ಟು ದಿನಗಳು ಇಲ್ಲಿ ಚಾರಣಿಗರ ದಂಡೇ ಕಂಡು ಬರುತ್ತದೆ. ಹಾಗಾದರೆ ಈ ಮೂರು ರಾಜ್ಯಗಳ ತಾಣಗಳಿಗೆ ಬೆಂಗಳೂರು/ಕರ್ನಾಟಕದಿಂದ ತೆರಳುವುದು ಹೇಗೆ? ಇಲ್ಲಿದೆ ವಿವರ
ಬೆಂಗಳೂರು-ಹಿಮಾಚಲ ಪ್ರದೇಶದ ಟ್ರೆಕ್ಕಿಂಗ್ ತಾಣಕ್ಕೆ ಮಾರ್ಗ ವಿವರ
ಬಜೆಟ್‌ನಲ್ಲಿ ಉಲ್ಲೇಖಿಸಿರುವ ಹಿಮಾಚಲ ಪ್ರದೇಶದ ಪರ್ವತ ಶ್ರೇಣಿ ಟ್ರೆಕ್ಕಿಂಗ್ ತಾನಕ್ಕೆ ಬೆಂಗಳೂರಿನಿಂದ ನೀವು ಮೊದಲು ಚಂಡೀಗಢಕ್ಕೆ (IXC) ವಿಮಾನ ಮೂಲಕ ಅಥವಾ ಇತರ ವಾಹನ ಮೂಲಕ ತೆರಳಬೇಕು. ಅಲ್ಲಿಂದ ನಂತರ ಮನಾಲಿಗೆ ಬಸ್ ಅಥವಾ ಟ್ಯಾಕ್ಸಿ ತೆರಳಿದರೆ 8-10 ಗಂಟೆಗಳಲ್ಲಿ ತಲುಪುತ್ತೀರಿ. ಇಲ್ಲವಾದರೆ ಹತ್ತಿರದ ಕುಲು ಸ್ಥಳಕ್ಕೆ ನೀವು ಭೇಟಿ ನೀಡಬಹುದು. ಈ ಕಣಿವೆ ರಾಜ್ಯಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಜಮ್ಮು& ಕಾಶ್ಮೀರ ಪರ್ವತ ಟ್ರೆಕ್ಕಿಂಗ್ ಮತ್ತು ಪಾದಯಾತ್ರೆ ಮಾರ್ಗ
ಕರ್ನಾಟಕದ ಬೆಂಗಳೂರಿನಿಂದ ನೀವು ಜಮ್ಮು ಮತ್ತು ಕಾಶ್ಮೀರ ಪರ್ವತ ಟ್ರೆಕ್ಕಿಂಗ್ ಮತ್ತು ಪಾದಯಾತ್ರೆ ಪ್ರವಾಸಿ ಸ್ಥಳಗಳಿಗೆ
ಪ್ರವಾಸಿಗರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (BLR) ಶ್ರೀನಗರಕ್ಕೆ (SXR) ತಲುಪಬೇಕು. ಸರಿಸುಮಾರು 5 ಗಂಟೆಗಳಲ್ಲಿ ಅಲ್ಲಿಗೆ ತಲುಪಬಹುದಾಗಿದೆ.
ನಂತರ ರೈಲು ಮಾರ್ಗದ ಮೂಲಕ ಜಮ್ಮು ತಾವಿ ಎಕ್ಸ್‌ಪ್ರೆಸ್ ಅಥವಾ ಝೀಲಂ ಎಕ್ಸ್‌ಪ್ರೆಸ್ ಮೂಲಕ ಜಮ್ಮು ತಾವಿಗೆ ಪ್ರಯಾಣ ಮಾಡಬೇಕು. ನಂತರ ಶ್ರೀನಗರ ಅಥವಾ ಪಹಲ್ಗಾಮ್‌ಗೆ 7-8 ಗಂಟೆಗಳ ಟ್ಯಾಕ್ಸಿ/ಬಸ್ ಮಾಡಿ ಪರ್ವತಗಳ ಅಡಿ ತಲುಪುತ್ತೀರಿ. ಅಲ್ಲಿಂದ ನಿಮ್ಮ ಟ್ರಕ್ಕಿಂಗ್ ಆರಂಭವಾಗಲಿದೆ.
ಉತ್ತರಾಖಂಡ ಟ್ರಕ್ಕಿಂಗ್ ಪ್ರದೇಶಗಳ ಭೇಟಿ ನೀಡುವುದು ಹೇಗೆ?
ಬೆಂಗಳೂರಿನಿಂದ ಚಾರಣಿಗರು ವಿಮಾನ ಮೂಲಕ ಡೆಹ್ರಾಡೂನ್‌ಗೆ (DED) ತಲುಪಬೇಕು. ಅಲ್ಲಿಯವರೆಗೆ ನೇರ/ಸಂಪರ್ಕ ವಿಮಾನ ಸೇವೆ ಲಭ್ಯವಿದೆ. ರೈಲು ಮಾರ್ಗದಲ್ಲಿ ತೆರಳುವುದಾದರೆ ಬೆಂಗಳೂರಿನಿಂದ ಹರಿದ್ವಾರ (HW) ಅಥವಾ ಡೆಹ್ರಾಡೂನ್‌ಗೆ (DDN) ರೈಲು ಮೂಲಕ ಸಾಗಲು 2 ದಿನ ಹಿಡಿಯುತ್ತದೆ. ಇಲ್ಲಿ ಬಹುತೇಕ ಚಾರಣಗಳು ಋಷಿಕೇಶ, ಡೆಹ್ರಾಡೂನ್, ಜೋಶಿಮಠ ಅಥವಾ ಸಂಕ್ರಿಯಿಂದ ಆರಂಭವಾಗುತ್ತವೆ. ಅತ್ಯಧಿಕ ಹಾಗೂ ಪ್ರಮುಖ ಬಿಳಿ ಹಿಮದಿಂದ ತುಂಬಿದ ಪರ್ವತಗಳ ಸಾಲುಗಳು, ಕಣಿವೆ ಮಧ್ಯ ನಿಮ್ಮ ಹಾದಿ ಸಾಗಲಿದೆ. ನೋಡಲು ಸ್ವರ್ಗವೇ ಧರಿಗಿಳಿದಂತಹ ಅನುಭವ ನಿಮಗಿಲ್ಲ ಸಿಗುತ್ತದೆ.












Click it and Unblock the Notifications