Budget 2023 Memes : ಕೇಂದ್ರ ಬಜೆಟ್‌ ಬಗೆಗಿನ ಮೀಮ್‌ಗಳನ್ನು ನೋಡಿ- ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಡಿ

ಈ ವರ್ಷದ ಬಜೆಟ್‌ ಬಗ್ಗೆಯೂ ಸಹ ಮೀಮ್‌ಗಳು ಹರಿದಾಡುತ್ತಿವೆ. ಟ್ವಿಟರ್ ಬಳಕೆದಾರರು ನಿರೀಕ್ಷೆ ಮತ್ತು ಭರವಸೆಗಳನ್ನು ಪ್ರತಿಬಿಂಬಿಸುವ ಬಜೆಟ್ 2023 ಮೀಮ್‌ಗಳನ್ನು ಪೋಸ್ಟ್‌ ಮಾಡಿದ್ದಾರೆ. ಇಲ್ಲಿವೆ ನೋಡಿ

ನವದೆಹಲಿ, ಫೆಬ್ರವರಿ 01: ಇಂದು ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಅನ್ನು ಮಂಡಿಸಿದ್ದಾರೆ. ಅವರು ಮಧ್ಯಮ ವರ್ಗದ ಜನರಿಗೆ ಕೆಲ ಕೊಡುಗೆಗಳನ್ನು ನೀಡಿದ್ದಾರೆ. ಕಳೆದ ಎರಡು ವರ್ಷಗಳಂತೆ, ಕೇಂದ್ರ ಬಜೆಟ್ 2023-24 ಅನ್ನು ಸಹ ಕಾಗದರಹಿತ ರೂಪದಲ್ಲಿ ಮಂಡಿಸಲಾಗುತ್ತಿವೆ. ಸಂಪ್ರದಾಯದಂತೆ ಬಜೆಟ್ ಮಂಡನೆಯು ಸಂಸತ್ತಿನಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಯಿತು. ನಿರ್ಮಾಲಾ ಸೀತಾರಾಮನ್‌ ಅವರು ಕೆಲವರಿಗೆ ಶಾಕ್‌ ಕೊಟ್ಟಿದ್ದಾರೆ. ಇನ್ನು ಕೆಲವರಿಗೆ ಸಿಹಿಸುದ್ದಿ ನೀಡಿದ್ದಾರೆ. 7 ಲಕ್ಷ ರೂಪಾಯಿವರೆಗಿನ ಆದಾಯ ತೆರಿಗೆಗೆ ವಿನಾಯತಿ ನೀಡಿದ್ದಾರೆ. ಚಿನ್ನ, ಬೆಳ್ಳಿ, ಸಿಗರೇಟುಗಳಂತ ವಸ್ತುಗಳ ದರಗಳನ್ನು ಹೆಚ್ಚಿಸಿದ್ದಾರೆ. ಈ ವರ್ಷದ ಬಜೆಟ್‌ ಬಗ್ಗೆಯೂ ಸಹ ಮೀಮ್‌ಗಳು ಹರಿದಾಡುತ್ತಿವೆ. ಟ್ವಿಟರ್ ಬಳಕೆದಾರರು ನಿರೀಕ್ಷೆ ಮತ್ತು ಭರವಸೆಗಳನ್ನು ಪ್ರತಿಬಿಂಬಿಸುವ ಬಜೆಟ್ 2023 ಮೀಮ್‌ಗಳನ್ನು ಪೋಸ್ಟ್‌ ಮಾಡಿದ್ದಾರೆ.

ನನ್ನ ಖಾತೆಯಲ್ಲಿ ರೂ 575 ಇದೆ. ಆದಾಯ ತೆರಿಗೆ ರಿಯಾಯಿತಿಯನ್ನು ರೂ 5 ಲಕ್ಷದಿಂದ ರೂ 7 ಲಕ್ಷಕ್ಕೆ ವಿಸ್ತರಿಸಿದ ನಂತರ ನನಗೆ ಸಂತೋಷವಾಗಿದೆ ಎಂದು ಕೃಷ್ಣಾ ಎಂಬುವವರು ಫೋಸ್ಟ್‌ ಮಾಡಿದ್ದಾರೆ. ಅದರೊಂದಿಗೆ ವಿಡಿಯೊವೊಂದನ್ನು ಹಾಕಿಕೊಂಡಿದ್ದಾರೆ.

ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಕಡಿಮೆ ಮಾಡಲಾಗಿದೆ ಎಂದು ನಿಮಗೆ ತಿಳಿದಾಗ ಎಂದು ಪೋಸ್ಟ್‌ ಮಾಡಿರುವ ಟ್ವಿಟರ್‌ ಖಾತೆದಾರರು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಅವರ ಫೋಟೊವೊಂದನ್ನು ಶೇರ್ ಮಾಡಿದ್ದಾರೆ.

7 ಲಕ್ಷದೊಳಗೆ ತೆರಿಗೆ ಇಲ್ಲ ಎಂಬುದಕ್ಕೆ ಮಧ್ಯಮ ವರ್ಗದ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೊವೊಂದನ್ನು ಟ್ವೀಟಿಗರೊಬ್ಬರು ಹಂಚಿಕೊಂಡಿದ್ದಾರೆ.

Budget 2023 memes take over Internet as Nirmala Sitharaman delivers speech. Best ones

ಕೆಲ ಮೀಮ್ಸ್‌ಗಳು ಈ ರೀತಿಯಾಗಿವೆ

ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಬೆಳವಣಿಗೆಯ ವ್ಯಾಪ್ತಿಯನ್ನು ವಿಸ್ತರಿಸುವುದು, ಮೂಲಸೌಕರ್ಯ, ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯಂತಹ ಪ್ರಮುಖ ಕ್ಷೇತ್ರಗಳನ್ನು ಉತ್ತೇಜಿಸುವತ್ತ ಗಮನ ಹರಿಸಲಾಗಿದೆ ಎಂದು ಹೇಳಿದರು. ಭಾರತೀಯ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ ಮತ್ತು ಸವಾಲುಗಳ ಹೊರತಾಗಿಯೂ, ಅದು ಉಜ್ವಲ ಭವಿಷ್ಯದತ್ತ ಸಾಗುತ್ತಿದೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+