ಕೇಂದ್ರ ಬಜೆಟ್ 2022-23 ರ ಕುರಿತು ಯಾರು ಏನು ಹೇಳಿದರು?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ -19 ಮೂರನೇ ಅಲೆಯ ನಡುವೆ ಈ ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಕೇಂದ್ರ ಬಜೆಟ್ಗೆ ರಾಜಕೀಯ ಪ್ರತಿಕ್ರಿಯೆಗಳು ಬಂದಿವೆ. ಕಾಂಗ್ರೆಸ್ ಕೇಂದ್ರ ಬಜೆಟ್ ವಿರುದ್ಡ ವಾಗ್ದಾಳಿ ಮಾಡಿದೆ. 'ಒಂದೆಡೆ ದೇಶ ಬಡವಾಗುತ್ತಿದ್ದರೆ ಇನ್ನೊಂದೆಡೆ ಸರ್ಕಾರದ ಖಜಾನೆ ತುಂಬುತ್ತಿದೆ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಘೋಷಣೆಯೊಂದಿಗೆ ಬಿಜೆಪಿಯವರು ದೇಶವಾಸಿಗಳ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆಯೇ ಹೊರತು ಬೇರೇನೂ ಅಲ್ಲ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
|
ಬಜೆಟ್ ಬಗ್ಗೆ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಪ್ರತಿಕ್ರಿಯೆ
ಪ್ರಧಾನಿ ಮೋದಿಯವರ ದೊಡ್ಡ ಉದ್ಯಮ ಸ್ನೇಹಿತರ ಹಿತಾಸಕ್ತಿಗಳ ಮೇಲೆ ಬಜೆಟ್ ಕೇಂದ್ರೀಕರಿಸಿದೆ. ಇದು ನಿರುದ್ಯೋಗ ಮತ್ತು ಹಣದುಬ್ಬರದ ಸಮಸ್ಯೆಗಳನ್ನು ನಿಭಾಯಿಸಲಿಲ್ಲ. ಈ ಬಜೆಟ್ ಅಸಮಾನತೆಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಜನಸಂಖ್ಯೆಯ ದೊಡ್ಡ ವಿಭಾಗವನ್ನು ದುರ್ಬಲಗೊಳಿಸುತ್ತದೆ ಎಂದು ಬಜೆಟ್ ಬಗ್ಗೆ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಪ್ರತಿಕ್ರಿಯಿಸಿದ್ದಾರೆ.
|
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಣದೀಪ್ ಸುರ್ಜೇವಾಲಾ ಪ್ರತಿಕ್ರಿಯೆ
ಶ್ರೀಮತಿ ಹಣಕಾಸು ಮಂತ್ರಿ, ದಯವಿಟ್ಟು ರಾಷ್ಟ್ರಕ್ಕೆ ತಿಳಿಸಿ - ಕ್ರಿಪ್ಟೋಕರೆನ್ಸಿಗೆ ಕಾನೂನು ಮಾನ್ಯತೆ ಇದೆಯೇ? ಕ್ರಿಪ್ಟೋಕರೆನ್ಸಿ ಮಸೂದೆ ಮಂಡನೆ ಮಾಡದೆ ತೆರಿಗೆ ವಿಧಿಸುವುದು ಎಷ್ಟು ಸರಿ? ಕ್ರಿಪ್ಟೋ ವಿನಿಮಯ ನಿಯಂತ್ರಕರು ಯಾರು? ಹೂಡಿಕೆದಾರರರನ್ನು ರಕ್ಷಿಸುವವರು ಯಾರು? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಣದೀಪ್ ಸುರ್ಜೇವಾಲಾ ಪ್ರತಿಕ್ರಿಯಿಸಿದ್ದಾರೆ.
|
ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ
ನಿರುದ್ಯೋಗ ಮತ್ತು ಹಣದುಬ್ಬರದಿಂದ ನಲುಗಿ ಹೋಗುತ್ತಿರುವ ಸಾಮಾನ್ಯ ಜನರಿಗೆ ಬಜೆಟ್ ಶೂನ್ಯವಾಗಿದೆ. ಸರ್ಕಾರವು ಯಾವುದೇ ದೊಡ್ಡ ಪದಗಳಿಂದ ಸೂಚಿಸುವಂತ ಬಜೆಟ್ ಮಂಡಿಸಿಲ್ಲ- ಪೆಗಾಸಸ್ ಸ್ಪಿನ್ ಬಜೆಟ್
|
ಯಾರಿಗೆ ಬಜೆಟ್?
10% ರಷ್ಟು ಶ್ರೀಮಂತ ಭಾರತೀಯರು ದೇಶದ ಸಂಪತ್ತಿನ 75% ರಷ್ಟು ಹೊಂದಿದ್ದಾರೆ. ಕೆಳ ವರ್ಗದ 60% ರಷ್ಟು ಜನ 5% ಕ್ಕಿಂತ ಕಡಿಮೆ ಸಂಪತ್ತನ್ನು ಹೊಂದಿದ್ದಾರೆ. ನಿರುದ್ಯೋಗ, ಬಡತನ ಮತ್ತು ಹಸಿವು ಹೆಚ್ಚುತ್ತಿರುವಾಗ ಸಾಂಕ್ರಾಮಿಕ ಸಮಯದಲ್ಲಿ ಸೂಪರ್ ಲಾಭವನ್ನು ಗಳಿಸಿದವರಿಗೆ ಏಕೆ ಹೆಚ್ಚು ತೆರಿಗೆ ವಿಧಿಸಲಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications