One Class, One TV Channel: ಕೇಂದ್ರ ಬಜೆಟ್ 2022: ಒನ್ ಕ್ಲಾಸ್, ಒನ್ ಟಿವಿ ಘೋಷಣೆ
ನವದೆಹಲಿ, ಫೆಬ್ರವರಿ 1: ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ 'ಒನ್ ಕ್ಲಾಸ್ ಒನ್ ಟಿವಿ ಚಾನೆಲ್' ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 200 ಟಿವಿ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ ಮಾಡಲಾಗಿದೆ. ಪ್ರಧಾನಿ ಇ-ವಿದ್ಯಾ ಯೋಜನೆ ಅಡಿಯಲ್ಲಿ 200 ಚಾನೆಲ್ ಜಾರಿಯಾಗುವುದು.
ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿವೆ. ಹೀಗಾಗಿ 1ರಿಂದ 12ನೇ ತರಗತಿ ಮಕ್ಕಳಿಗೆ ಚಾನೆಲ್ ಮಾಡಲಾಗುವುದು ಒನ್ ಕ್ಲಾಸ್, ಒನ್ ಟಿವಿ ಚಾನೆಲ್ ಮಾಡಲಾಗುವುದು ಅಂತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Recommended Video
ಕೇಂದ್ರ ಸರ್ಕಾರ ಇಂದು 2022-23ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದು, 'ಒನ್ ಕ್ಲಾಸ್, ಒನ್ ಟಿವಿ' ಘೋಷಣೆ ಮಾಡಿದ್ದಾರೆ.

ರ್ಕಾರ ಶಾಲೆಗಳಲ್ಲಿ ಪೂರಕ ಶಿಕ್ಷಣ ಪೂರೈಕೆಗೆ 'ಒನ್ ಕ್ಲಾಸ್, ಒನ್ ಟಿವಿ' ಯೊಜನೆ ಜಾರಿ ಮಾಡಲಾಗಿದೆ. ಗ್ರಾಮೀಣ SC/ST ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರತ್ಯೇಕ ಟಿವಿ ಚಾನೆಲ್ ಆರಂಭವಾಗಲಿದ್ದು, 1-7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಯಲ್ಲಿ ಟಿವಿ ಚಾನೆಲ್ ಇರಲಿದೆ.
1ರಿಂದ 12 ತರಗತಿ ಮಕ್ಕಳಿಗೆ ಪ್ರತ್ಯೇಕ ಶೈಕ್ಷಣಿಕ ಚಾನೆಲ್ ಪ್ರಾರಂಭವಾಗಲಿದ್ದು, ವಿಶ್ವದರ್ಜೆಯ ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆ ಮಾಡಲಾಗುತ್ತದೆ. 200 ಶೈಕ್ಷಣಿಕ ಟಿವಿ ಚಾನೆಲ್‌ಗಳ ಮೂಲಕ ಶಿಕ್ಷಣ ನೀಡಲಾಗುತ್ತದೆ. 750 ವರ್ಚುವಲ್ ಗಣಿತ ಮತ್ತು ವಿಜ್ಞಾನ ಲ್ಯಾಬ್ ಸೌಲಭ್ಯ ಆರಂಭ ಮಾಡಲಾಗುತ್ತದೆ.
2 ಲಕ್ಷ ಅಂಗನವಾಡಿಗಳು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ತಿಳಿಸಿದ ಸಚಿವೆ, 3.8 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. 2020-23ರಲ್ಲಿ 80 ಲಕ್ಷ ಮನೆ ನಿರ್ಮಾಣ ಪೂರ್ಣ ಮಾಡಲಾಗುತ್ತದೆ. ಪಿಎಂ ಅವಾಸ್ ಯೋಜನೆಗೆ 48 ಸಾವಿರ ಕೋಟಿ ರೂ. ನೀಡಲಾಗಿದೆ.
ಗ್ರಾಮ ಸೌಕರ್ಯ ಅಭಿವೃದ್ಧಿಗೆ ಕೇಂದ್ರ ವಿಶೇಷ ಅನುದಾನ ನೀಡಲು ನಿರ್ಧರಿಸಿದೆ. ಗಡಿಪ್ರದೇಶಗಳ ಗ್ರಾಮಗಳ ಮೂಲಸೌಕರ್ಯಕ್ಕೆ ಆರ್ಥಿಕ ನೆರವು ನೀಡಲಾಗುವುದು. ಎಲ್ಲಾ ಪೋಸ್ಟ್ ಆಫಿಸ್‌ಗಳಲ್ಲೂ ಬ್ಯಾಂಕಿಂಗ್ ವ್ಯವಸ್ಥೆಗೆ ಯೋಜನೆ ಮಾಡಲಾಗುವುದು. 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್‌ಗಳನ್ನು ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ.












Click it and Unblock the Notifications