• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ 2022: ವರ್ಕ್ ಫ್ರಮ್‌ ಹೋಮ್‌ ಮಾಡುವವರಿಗೆ ಬಿಗ್‌ ರಿಲೀಫ್‌ ಸಾಧ್ಯತೆ

|
Google Oneindia Kannada News

ನವದೆಹಲಿ, ಜನವರಿ 27: ಕೊರೊನಾ ವೈರಸ್‌ ಸಾಂಕ್ರಾಮಿಕವು ನಾವು ವಾಸಿಸುವ ಹಾಗೂ ಕೆಲಸ ಮಾಡುವ ವಿಧಾನದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದೆ. ತರಗತಿಗಳಿಗೆ ಹಾಜರಾಗಲು ಶಾಲೆಗೆ ಹೋಗುವ ಮಕ್ಕಳು ಈಗ ಆನ್‌ಲೈನ್‌ನಲ್ಲಿ ಪಾಠ ಕೇಳುತ್ತಾರೆ. ಉಳಿದಂತೆ ಹಲವಾರು ವಿಭಾಗದಲ್ಲಿ ಬದಲಾವನೆ ಉಂಟಾಗಿದೆ.

ಕೋವಿಡ್ ನಿರ್ಬಂಧಗಳ ನಡುವೆ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು ಉದ್ಯೋಗಿಗಳಿಗೆಯೇ ಅಧಿಕವಾಗಿ ಖರ್ಚು ಆಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಬಜೆಟ್‌ನಲ್ಲಿ ವರ್ಕ್ ಫ್ರಮ್‌ ಹೋಮ್‌ ಮಾಡುವವರು ಅಧಿಕ ನಿರೀಕ್ಷೆಯನ್ನು ಹೊಂದಿದ್ದಾರೆ. ಕೊರೊನಾ ವೈರಸ್‌ ಸಾಂಕ್ರಾಮಿಕಕ್ಕೂ ಮುನ್ನ ಕಚೇರಿಯ ಸ್ಟ್ಯಾಂಡರ್ಡ್ ವೈಫೈ, ವರ್ಕ್‌ಸ್ಟೇಷನ್, ಮಕ್ಕಳಿಗಾಗಿ ಲ್ಯಾಪ್‌ಟಾಪ್‌ಗಳಂತಹ ವೆಚ್ಚಗಳ ಬಗ್ಗೆ ಯಾರು ಚಿಂತೆ ಮಾಡಬೇಕಾಗಿರಲಿಲ್ಲ. ಆದರೆ ಈಗ ಆ ಚಿಂತೆ ಹೆಚ್ಚಾಗಿದೆ.

 ಎನ್‌ಇಪಿ, ಜಿಎಸ್‌ಟಿ ರಿಪೀಫ್‌: ಬಜೆಟ್‌ನಿಂದ ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳು ಏನು? ಎನ್‌ಇಪಿ, ಜಿಎಸ್‌ಟಿ ರಿಪೀಫ್‌: ಬಜೆಟ್‌ನಿಂದ ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳು ಏನು?

ಸಂಬಳ ಪಡೆಯುವ ಜನರು ಹಾಗೂ ವ್ಯಾಪಾರ ಮಾಡುವ ಮಾಲೀಕರು ಹೊಸ ಸವಾಲುಗಳೊಂದಿಗೆ, ಕೇಂದ್ರ ಬಜೆಟ್‌ 2022ರ ಈ ಸಂದರ್ಭದಲ್ಲಿ ವರ್ಕ್ ಫ್ರಮ್‌ ಹೋಮ್‌ ಮಾಡುವವರಿಗೆ ಒಳ್ಳೆಯ ಸುದ್ದಿಯನ್ನು ತರುವ ನಿರೀಕ್ಷೆ ಇದೆ. ಸಂಬಳ ಪಡೆಯುವ ವ್ಯಕ್ತಿಗಳು ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಪರಿಹಾರವನ್ನು ಕಂಡಿಲ್ಲ. ಆದರೆ ಈಗ ಮನೆಯ ಭತ್ಯೆಯಿಂದ ಹಿಡಿದು ಹಲವಾರು ಪ್ರಯೋಜನಗಳು ಲಭ್ಯವಾಗುವ ಸಾಧ್ಯತೆ ಇದೆ.

ಮನೆಯಿಂದ ಕೆಲಸ ಮಾಡುವವರಿಗೆ ಭತ್ಯೆಯ ಬೇಡಿಕೆ

ಜೀ ನ್ಯೂಸ್ ಹಿಂದಿ ವರದಿಯ ಪ್ರಕಾರ, ತೆರಿಗೆ ಸೇವೆಗಳು ಮತ್ತು ಹಣಕಾಸು ಸೇವೆಗಳ ಕಂಪನಿ ಡೆಲಾಯ್ಟ್ ಇಂಡಿಯಾ ಇತ್ತೀಚೆಗೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವುದಕ್ಕೆ ಭತ್ಯೆಯನ್ನು ನೀಡಬೇಕಾಗಿದೆ ಎಂದು ಹೇಳಿದೆ. ಸರ್ಕಾರವು ನೇರ ಪ್ರಯೋಜನವನ್ನು ನೀಡದಿದ್ದರೂ ತೆರಿಗೆ ಸಂಬಂಧಿತ ಸಡಿಲಿಕೆಯನ್ನು ನೀಡುವ ಸಾಧ್ಯತೆ ಇದೆ. ಹಣಕಾಸು ಸಚಿವಾಲಯವು ಬೇಡಿಕೆಯನ್ನು ಒಪ್ಪಿಕೊಂಡರೆ, ತಮ್ಮ ಮನೆಯಿಂದಲೇ ಕೆಲಸ ಮಾಡುವ ನೌಕರರು 50,000 ರೂ.ವರೆಗಿನ ಕೆಲಸದ ಭತ್ಯೆಯನ್ನು ಪಡೆಯಬಹುದು. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಕೂಡ ಇದೇ ರೀತಿಯ ವಿನಂತಿಯನ್ನು ಮಾಡಿದೆ.

 ತೆರಿಗೆ ರಿಯಾಯಿತಿ, ನಿಧಿ ಹಂಚಿಕೆ: ಕೇಂದ್ರ ಬಜೆಟ್‌ನಿಂದ ಫಾರ್ಮಾ ವಲಯದ ನಿರೀಕ್ಷೆಗಳಿವು ತೆರಿಗೆ ರಿಯಾಯಿತಿ, ನಿಧಿ ಹಂಚಿಕೆ: ಕೇಂದ್ರ ಬಜೆಟ್‌ನಿಂದ ಫಾರ್ಮಾ ವಲಯದ ನಿರೀಕ್ಷೆಗಳಿವು

ಪ್ರಸ್ತುತ, ಸೆಕ್ಷನ್ 16 ರ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಸಂಬಳದ ವರ್ಗಗಳಿಗೆ 50,000 ರೂ.ಗೆ ನಿಗದಿಪಡಿಸಲಾಗಿದೆ. ಆದರೆ ಅದನ್ನು ಒಂದು ಲಕ್ಷ ರೂಪಾಯಿಗೆ ಏರಿಕೆ ಮಾಡಬೇಕು ಎಂದು ಜನರು ಒತ್ತಾಯ ಮಾಡಿದ್ದಾರೆ. ಮುಂಬರುವ ಯೂನಿಯನ್ ಬಜೆಟ್‌ನಲ್ಲಿ ಕಾರ್ಮಿಕ ವರ್ಗವು ಈ ನಿಟ್ಟಿನಲ್ಲಿ ಬದಲಾವಣೆಯನ್ನು ನಿರೀಕ್ಷಿಸುತ್ತಿದೆ. ಡೆಲಾಯ್ಟ್ ಇಂಡಿಯಾದ ಪೂರ್ವ-ಬಜೆಟ್ ನಿರೀಕ್ಷೆಗಳು 2022ರ ಪ್ರಕಾರ "ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳು 'ವರ್ಕ್ ಫ್ರಮ್ ಹೋಮ್'ಗಾಗಿ ಅಧಿಕ ಖರ್ಚು ಮಾಡುತ್ತಿದ್ದಾರೆ. ಇಂಟರ್ನೆಟ್ ಶುಲ್ಕಗಳು, ಬಾಡಿಗೆ, ವಿದ್ಯುತ್, ಪೀಠೋಪಕರಣಗಳು ಇತ್ಯಾದಿಗಳಿಗೆ ಅಧಿಕ ಖರ್ಚನ್ನು ಉದ್ಯೋಗಿಗಳು ಮಾಡುತ್ತಿದ್ದಾರೆ. ಆದ್ದರಿಂದ, ಈ ವೆಚ್ಚಗಳನ್ನು ಪೂರೈಸಲು ಉದ್ಯೋಗದಾತರು ಭತ್ಯೆಗಳನ್ನು ಒದಗಿಸಬೇಕಾಗುತ್ತದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ 50,0000 ರೂ.ಗಳ ಹೆಚ್ಚುವರಿ 'ವರ್ಕ್ ಫ್ರಮ್ ಹೋಮ್' ಪ್ರಮಾಣಿತ ಕಡಿತವನ್ನು ಶಿಫಾರಸು ಮಾಡಲಾಗುತ್ತದೆ.

ಕೊರೊನಾ ವೈರಸ್‌ ಸಾಂಕ್ರಾಮಿಕದ ಮಧ್ಯೆ ಜೀವ ವಿಮೆಗಳ ಸಂಖ್ಯೆ ಮತ್ತು ಪ್ರಮಾಣವೂ ಹೆಚ್ಚಾಗಿದೆ. ಆದ್ದರಿಂದ, ತೆರಿಗೆದಾರರು ಈಗ ಈ ವಿಷಯದಲ್ಲಿ ವಿನಾಯಿತಿಯನ್ನು ನಿರೀಕ್ಷೆ ಹೊಂದಿದ್ದಾರೆ. ಕೊರೊನಾ ಕಾರಣದಿಂದಾಗಿ ಪಡೆದ ವಿಮೆಯನ್ನು 5-10 ವರ್ಷಗಳವರೆಗೆ ತೆರಿಗೆ ಮುಕ್ತಗೊಳಿಸಲು ಬೇಡಿಕೆಯಿದೆ. ಮುಂಬರುವ ಬಜೆಟ್‌ನಲ್ಲಿ ಒಟ್ಟಾರೆ 80 ಸಿ ಮಿತಿಯನ್ನು ಹೆಚ್ಚಿಸಬಹುದು ಎಂದು ಜನರು ನಿರೀಕ್ಷೆ ಹೊಂದಿದ್ದಾರೆ. (ಒನ್‌ಇಂಡಿಯಾ ಸುದ್ದಿ)

ನಿರ್ಮಲಾ ಸೀತಾರಾಮನ್
Know all about
ನಿರ್ಮಲಾ ಸೀತಾರಾಮನ್
English summary
Budget 2022: Big relief likely work from home employees, benefits up to Rs 50,000. ಬಜೆಟ್ 2022
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X