ವಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಅಮಿತ್ ಶಾ ಗೆ BSP ತಿರುಗೇಟು
ಲಕ್ನೋ, ಏಪ್ರಿಲ್ 07: 'ಹಾವು- ಮುಂಗುಸಿ ನಾಯಿ-ಬೆಕ್ಕುಗಳೆಲ್ಲ ಒಂದಾಗುತ್ತಿವೆ' ಎನ್ನುವ ಮೂಲಕ ವಿರೋಧ ಪಕ್ಷಗಳೆಲ್ಲ ಕೈಜೋಡಿಸುತ್ತಿರುವುದರಿಂದ ತಮ್ಮನ್ನು ಪ್ರಾಣಿಗಳಿಗೆ ಹೋಲಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಉತ್ತರ ಪ್ರದೇಶದ ಬಿಎಸ್ಪಿ ನಾಯಕರು ಕೆಂಡಕಾರಿದ್ದಾರೆ.
ಈ ಕುರಿತು ಅಮಿತ್ ಶಾ ಅವರಿಗೆ ಪತ್ರವೊಂದನ್ನು ಬರೆದಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, 'ಗೋರಖ್ಪುರ ಉಪಚುನಾವಣೆಯ ಸಮಯದಲ್ಲೂ ಇಂಥದೇ ಭಾಷೆ ಬಳಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಈಗಾಗಲೇ ಜನ ಪಾಠ ಕಲಿಸಿದ್ದಾರೆ. ಮುಂದಿನ ಚುನಾವಣೆಗಳಲ್ಲೂ ಅಮಿತ್ ಶಾ ಅವರು ಪಾಠ ಕಲಿಯಲಿದ್ದಾರೆ' ಎಂದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
"ಅಮಿತ್ ಶಾ ಅವರ ಮಾತು ಭಾರತೀಯ ಜನತಾ ಪಕ್ಷದ ಸಂಸ್ಕಾರವೇನು ಎಂಬುದನ್ನು ಎತ್ತಿತೋರಿಸುತ್ತಿದೆ. ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆ ಪಕ್ಷದ ಘನತೆ ಕಡಿಮೆಯಾಗುತ್ತಿದೆ, ಅದು ವೈಫಲ್ಯ ಹೊಂದುತ್ತಿದೆ" ಎಂದು ದೂರಿದ್ದಾರೆ.

ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮುಂಬೈಯಲ್ಲಿ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅಮಿತ್ ಶಾ, "ಪ್ರಧಾನಿ ಮೋದಿ ಅಲೆಯ ವಿರುದ್ಧ ಹೋರಾಡಲು ಹಾವು-ಮುಂಗುಸಿ, ನಾಯಿ-ಬೆಕ್ಕುಗಳೆಲ್ಲ ಒಂದಾಗಿವೆ" ಎಂದು ವಿರೋಧ ಪಕ್ಷಗಳಿಗೆ ಪರೋಕ್ಷ ಟಾಂಗ್ ನೀಡಿದ್ದರು.












Click it and Unblock the Notifications