BSNL: ಗ್ರಾಹಕಸ್ನೇಹಿ 'ಫ್ಲಾಶ್ ಸೇಲ್' ಪ್ಲಾನ್ ಘೋಷಣೆ: 400ಜಿಬಿ ಹೈಸ್ಟೀಡ್ ಡೇಟಾ ಪ್ಯಾಕ್...
BSNL ₹1 per GB Data: ಭಾರತ ಸರ್ಕಾರದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಜೊತೆಗೆ ಟಾಟಾ ಗ್ರೂಪ್ ಕೈಜೋಡಿಸಿದ ಬಳಿಕ ಸಾಕಷ್ಟು ಬದಲಾವಣೆ ಆಗುತ್ತಿದೆ. BSNL 'ಕ್ವಾಂಟಮ್ 5G' ಹೆಸರಿನಡಿ 5G ಸೇವೆಗಳ ಕೆಲವೇ ತಿಂಗಳಲ್ಲಿ ಆರಂಭಿಸಲಿದೆ. ಆಯ್ದ ರಾಜ್ಯಗಳ ರಾಜಧಾನಿಯಲ್ಲಿ ವೇಗದ ಇಂಟರ್‌ನೆಟ್ ಸೇವೆ ಲಭ್ಯವಾಗಲಿದೆ. ಈ ಮಧ್ಯ ಬಿಎಸ್‌ಎನ್‌ಎಲ್ 1 ರೂಪಾಯಿಗೆ 1ಜಿಬಿ ಡೇಟಾ ಪ್ಯಾಕ್ ಪ್ಲಾನ್ ಘೋಷಣೆ ಮಾಡಿದೆ.
ಸದ್ಯ ಬಿಎಸ್‌ಎನ್‌ಎಲ್ ಟವರ್‌ಗಳಲ್ಲಿ 90,000 ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಇದರ ಸಾಧನೆ ಕುರಿತು BSNL ಸೀಮಿತ ಪ್ರಚಾರದ ಅವಧಿಗೆಂದು 'ಫ್ಲಾಶ್ ಸೇಲ್' ಘೋಷಿಸಿದೆ. ಇದಕ್ಕೆ ಭರ್ಜರಿ ಸ್ಪಂದನೆ ಸಿಗುವ ನಿರೀಕ್ಷೆ ಇದೆ. ಅಂದರೆ ಪ್ರತಿ ಒಂದು ಜಿಬಿ 4ಜಿ ಇಂಟರ್‌ನೆಟ್ ಸೇವೆ ನಿಮಗೆ ಕೇವಲ 1 ರೂ. ದರದಲ್ಲಿ ಸಿಗುತ್ತದೆ. 400GB ಹೈ-ಸ್ಪೀಡ್ 4ಜಿ ಡೇಟಾ ಯೋಜನೆ ಇದಾಗಿದೆ.

400GB ಡೇಟಾ ಪ್ಯಾಕ್ ಯೋಜನೆ ಪ್ರಯೋಜನ
ಕಳೆದ ಜೂನ್ 28 ರಿಂದ BSNL ಬಳಕೆದಾರರು 400 ರೂ ಮೌಲ್ಯದ ಹೊಸ ವಿಶೇಷ ಡೇಟಾ ರೀಚಾರ್ಜ್ ಪ್ಯಾಕ್ ಘೋಷಣೆ ಮಾಡಿದೆ. ಸೀಮಿತ ಅವಧಿಗೆ ಇದನ್ನು ನೀಡಲಾಗಿದೆ. ಆ ಅವಧಿ ಜುಲೈ 01 ರಂದು ಇಂದಿಗೆ ಪೂರ್ಣಗೊಂಡಿದೆ. 400GB ಹೈಸ್ಪೀಡ್ ಡೇಟಾ ಅನ್ನು ನೀವು 400 ರೂಪಾಯಿಗೆ ಪಡೆಯಬಹುದಾಗಿದೆ. ಅಸ್ತಿತ್ವದಲ್ಲಿರುವ ಯೋಜನೆ ಜೊತೆಗೆ ಈ ರಿಚಾರ್ಜ್ ಪಡೆಯಬೇಕಾಗುತ್ತದೆ. ಸಂದೇಶ, ಕರೆಗಳಿಗೆ ಈ ಯೋಜನೆ ಅಲ್ಲ ಬದಲಾಗಿ, ಇಂಟರ್‌ನೆಟ್ ಬಳಕೆದಾರರಿಗೆ ಇದು ಹೆಚ್ಚು ಅನುಕೂಲವಾಗಲಿದೆ. ಒಂದು ವೇಳೆ ಈ ಡೇಟಾ ಖಾಲಿ ಆದರೂ ಸಹಿತ ಅದರ ವೇಗವು 40 ಕೆಬಿಪಿಎಸ್ ನಲ್ಲಿ ಇಂಟರ್‌ನೆಟ್ ಸಿಗಲಿದೆ ಎಂದು ಬಿಎಸ್‌ಎನ್‌ಎಲ್ ಸುಳಿವು ನೀಡಿದೆ.
ಬಿಎಸ್ಎನ್ಎಲ್ ಇತ್ತೀಚೆಗೆ 5G ಸೇವೆಯನ್ನು ಇದೇ ಸೆಪ್ಟಂಬರ್ ಅಂತ್ಯದ ಹೊತ್ತಿಗೆ ದೇಶದ ನಾನಾ ರಾಜ್ಯಗಳ ರಾಜಧಾನಿಗಳಲ್ಲಿ ಆರಂಭಿಸುವುದಾಗಿ ತಿಳಿಸಿದೆ. ಕ್ವಾಂಟಮ್ 5G ಎಫ್‌ಡಬ್ಲ್ಯೂಎ ಎಂಬ ಸ್ಥಿರ ವೈರ್‌ಲೆಸ್ ಸೇವೆಗೆ ಬಳಕೆದಾರರು ಕಾತರರಾಗಿದ್ದಾರೆ. ಈಗಾಗಲೇ ಹೈದರಾಬಾದ್‌ನಲ್ಲಿ 5G ಸೇವೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಹಾಲಿ ಇರುವ ಒಂದು ಲಕ್ಷ ಟವರ್‌ಗಳಲ್ಲಿಯೇ 5G ಸೇವೆ ಬರಲಿವೆ. ಎಲ್ಲ ಟವರ್‌ಗಳು ಅಪ್‌ಗ್ರೇಡ್ ಆಗಲಿವೆ.
5G ಪ್ರಯೋಗ ಆರಂಭ
ಹೆಚ್ಚುವರಿಯಾಗಿ ಒಂದು ಲಕ್ಷ ಟವರ್‌ಗಳನ್ನು ಅಳವಡಿಕೆ ಮಾಡುತ್ತಿದ್ದು, ಬಿಎಸ್‌ಎನ್‌ಎಲ್ ಹಾಲಿ ಟವರ್‌ಗಳನ್ನು 5ಜಿಗೆ ಅಪ್‌ಗ್ರೇಡ್ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದೆ. ದೇಶದ ದೆಹಲಿ, ಜೈಪುರ, ಲಕ್ನೋ, ಚಂಡೀಗಢ, ಭೋಪಾಲ್, ಕೋಲ್ಕತ್ತಾ, ಪಾಟ್ನಾ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ವಾಣಿಜ್ಯ ಬಳಕೆಗಾಗಿ 5G ಪ್ರಯೋಗ ಆರಂಭವಾಗಿದೆ. ಇದರೊಂದಿಗೆ ಬಿಎಸ್‌ಎನ್‌ಎಲ್ ಕೈಗೆಟುಕುವ ಗ್ರಾಹಕಸ್ನೇಹಿ ಮೊಬೈಲ್ ರಿಚಾರ್ಜ್ ಯೋಜನೆ ಜಾರಿಗೆ ತರುತ್ತಿದೆ.
ಬಿಎಸ್ಎನ್ಎಲ್ ಭವಿಷ್ಯದ ಟೆಲಿಕಾಂ ನೆಟ್‌ವರ್ಕ್ ವಲಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಟಿಸಿಎಸ್ ನೇತೃತ್ವದ ಮತ್ತು ತೇಜಸ್ ನೆಟ್‌ವರ್ಕ್, ಸಿ-ಡಾಟ್ ಮತ್ತು ಐಟಿಐ ಬೆಂಬಲವು ಕೇಂದ್ರ ಸರ್ಕಾರಿ ಸ್ವಾಧೀನದ ಟೆಲಿಕಾಂ ಸಂಸ್ಥೆಗೆ ಇದೆ.












Click it and Unblock the Notifications