BSNL: ಬರೋಬ್ಬರಿ 336 ದಿನಗಳ ರಿಚಾರ್ಜ್ ಪ್ಲಾನ್ ಪರಿಚಯ! ವ್ಯಾಲಿಡಿಟಿ, ವಿಶೇಷತೆ, ವಿವರ
ಭಾರತಾದ್ಯಂತ ಜಾಲ ವಿಸ್ತರಣೆ ಮಾಡಿಕೊಂಡು ಭದ್ರವಾಗಿ ನೆಲೆಯೂರುತ್ತಿರುವ ಸರ್ಕಾರಿ ಸ್ವಾಧೀನದ ಟೆಲಿಕಾಂ ಕಂಪನಿ 'ಭಾರತ್ ಸಂಚಾರ ನಿಗಮ್ ಲಿಮಿಟೆಡ್' (BSNL) ಕರೆಗಳು ಹಾಗೂ ದೈನಂದಿನ ಸಂದೇಶ ಅಗತ್ಯವುಳ್ಳ ಬಳಕೆದಾರರನ್ನು ಗುರಿಯಾಗಿಸಿಕೊಂಡು ಹೊಸ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. 4ಜಿ ಯಿಂದ 5ಜಿ ಗೆ ಅಪ್‌ಗ್ರೇಡ್ ಆಗುತ್ತಿರುವ ಈ ಕಂಪನಿಯು ಗ್ರಾಹಕಸ್ನೇಹಿ, ಕೈಗೆಟುಕುವ ಬೆಲೆಗೆ ಹೊಸ ರಿಚಾರ್ಜ್ ಯೋಜನೆ ತಂದಿದೆ.
ಖಾಸಗಿ ಟೆಲಿಕಾಂ ಕಂಪನಿಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ BSNL 336 ದಿನಗಳ ಪ್ರಿಪೇಯ್ಡ್ ಯೋಜನೆ ಪರಿಚಯಿಸಿದೆ. ನಿರ್ದಿಷ್ಟ ಗ್ರಾಹಕರಿಗೆ ಸರಿ ಹೊಂದುವಂತೆ ಈ ಮೊಬೈಲ್ ರಿಚಾರ್ಜ್ ಪ್ಲಾನ್ ಜಾರಿಗೊಳಿಸಿದೆ. ಈ ಯೋಜನೆಯು ದಿನಕ್ಕೆ 5 ರೂ.ಗಳಿಗಿಂತ ಕಡಿಮೆ ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಸುಧಾರಿಸುವ ಪ್ರಯತ್ನದ ಭಾಗವಾಗಿ ಈ ಹೊಸ ಪ್ಲಾನ್ ತರಲಾಗಿದೆ.

BSNL 1499 ರೂಪಾಯಿಗಳಿಗೆ 336 ದಿನಗಳ ಪ್ರಿಪೇಯ್ಡ್ ಪ್ಲಾನ್ ಖರೀದಿಸಬಹುದಾಗಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆಗಳು, ಒಟ್ಟು 24ಜಿಬಿ ಡೇಟಾ ಮತ್ತು 100 ದೈನಂದಿನ ಎಸ್‌ಎಂಎಸ್ ಸೇವೆ ಸಿಗುತ್ತದೆ. ಹೆಚ್ಚಾಗಿ ಅನಿಯಮಿತ ಕರೆಗಳು ಹಾಗೂ ಸಂದೇಶ ಕಳುಹಿಸುವ ಬಳಕೆದಾರರಿಗೆ ಈ ರಿಚಾರ್ಜ್ ಪ್ಲಾನ್ ಅನುಕೂಲವಾಗಲಿದೆ.
ಈ ಪ್ಲಾನ್‌ನಲ್ಲಿ ಡೇಟಾ ಎಷ್ಟಿರುತ್ತೆ
ಅಷ್ಟೇ ಅಲ್ಲದೇ ಚಂದಾದಾರರು ಅನಿಯಮಿತ ಧ್ವನಿ ಕರೆ, ಉಚಿತ ರಾಷ್ಟ್ರೀಯ ರೋಮಿಂಗ್, ದಿನಕ್ಕೆ 100 ಉಚಿತ SMS ಸೇವೆ ಇರಲಿದೆ. ಈ ಪ್ಲಾನ್‌ನಲ್ಲಿ ಒಟ್ಟು ಅವಧಿಗೆ ಒಟ್ಟು 24 ಜಿಬಿ 4ಜಿ ಇಂಟರ್‌ನೆಟ್ ಸೇವೆ ಲಭ್ಯವಾಗಲಿದೆ. ಆದರೆ ಭಾರೀ ಇಂಟರ್‌ನೆಟ್ ಬಳಕೆದಾರರಿಗೆ ಹೆಚ್ಚುವರಿ ಡೇಟಾ ಪ್ಯಾಕ್ ಅಗತ್ಯವಿರುತ್ತದೆ. ಅವರು ಈ 336 ದಿನಗಳ ಪ್ಲಾನ್ ಅನ್ನು ಬೇಸ್ ಪ್ಲಾನ್ ಆಗಿಟ್ಟುಕೊಂಡು ಡೇಟಾ ಪ್ಯಾಕ್ ಪಡೆಬಯಹುದು. ನೀವು BSNL ಅಧಿಕೃತ ಜಾಲತಾಣ ಇಲ್ಲವೇ ಮೊಬೈಲ್ ಆಪ್ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದು.
BSNL ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಟವರ್ ಸ್ಥಾಪನೆ ಮಾಡಿದೆ. ಹೆಚ್ಚುವರಿಯಾಗಿ ಮತ್ತೆ ಒಂದು ಲಕ್ಷ ಟವರ್ ಹಾಕಲು ಯೋಜಿಸಿದೆ. ಇದು ಕೇವಲ 4ಜಿ ಮಾತ್ರವಲ್ಲದೇ 5ಜಿ ಸಹ ಆಗಿದೆ. ದುರ್ಬಲ ಸಂಪರ್ಕ ಸಮಸ್ಯೆ ಪರಿಹರಿಸಲು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಧಿಕ ಬಂಡವಾಳ ಹೂಡಿಕೆ ಮಾಡುತ್ತಿದೆ. 4ಜಿ ಜೊತೆಗೆ ಶೀಘ್ರವೇ 5ಜಿಗೆ ಬಿಎಸ್‌ಎನ್‌ಎಲ್ ಟವರ್‌ಗಳು ಅಪ್‌ಗ್ರೇಡ್ ಆಗಲಿವೆ. ಇದೇ ವರ್ಷ ಪ್ರಮುಖ ನಗರಗಳಿಗೆ 5ಜಿ ಸೇವೆ ಸಿಗುವ ವಿಶ್ವಾಸ ಇದೆ.
ಸದ್ಯದ ಪರಿಸ್ಥಿತಿಯಲ್ಲಿ ಗ್ರಾಹಕರು ನೆಟ್‌ವರ್ಕ್ ಸಮಸ್ಯೆ, ಟಾವರ್ ಕನೆಕ್ಟ್, ಕರೆಗಳು ದಿಢೀರ್ ಕಡಿತದ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಸಮಸ್ಯೆ ಪರಿಹರಿಸಿದ್ದಾಗಿ ಸಂಸ್ಥೆ ಹೇಳಿಕೊಂಡಿದೆ. ಆದರೆ 4ಜಿ ಗಿಂತ 3ಜಿ ಸೇವೆ ಉತ್ತಮವಾಗಿತ್ತು ಎನ್ನುವ ಮಟ್ಟಿಗೆ ಸೇವೆಯಲ್ಲಿ ಅಡಚಣೆ ಉಂಟಾಗುತ್ತಿದೆ.












Click it and Unblock the Notifications