IPL 2025 Final: ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಸ್ಫೋಟ

ಅಹಮದಾಬಾದ್, ಜೂನ್ 03: ಅಹಮದಾಬಾದ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ, ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಸಿಲಿಂಡರ್ ಸ್ಫೋಟಗೊಂಡಿದೆ. ಆದರೆ, ಈ ಸಿಲಿಂಡರ್‌ ಸ್ಟೋಟದಲ್ಲಿ ಯಾವುದೇ ತೊಂದರೆಗಳಾಗಿಲ್ಲ. ಈ ಸ್ಫೋಟದಿಂದ ಪಂದ್ಯಕ್ಕೆ ಯಾವುದೇ ತೊಂದರೆಯಿಲ್ಲ, ಪಂದ್ಯ ನಡೆಯಲಿದೆ ಎನ್ನುವ ಸ್ಪಷ್ಟನೆ ದೊರೆತಿದೆ.

ಐಪಿಎಲ್ 2025ರ ಅಂತಿಮ ಪಂದ್ಯ ಇಂದು (ಜೂನ್‌ 03) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ 11 ನಡುವೆ ನಡೆಯಲಿದೆ. ಐಪಿಎಲ್ ಪಂದ್ಯಕ್ಕೂ ಮುನ್ನ ಇಂದು ಬೆಳಗ್ಗೆ ಕ್ರೀಡಾಂಗಣದ ಮುಖ್ಯ ದ್ವಾರದ ಹೊರಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ಅಪಘಾತದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ. ಸಿಲಿಂಡರ್‌ ಸ್ಫೋಟಗೊಂದ ತಕ್ಷಣ ಸ್ವಲ್ಪ ಸಮಯದವರೆಗೂ ಆತಂಕ ಸೃಷ್ಟಿಯಾಗಿತ್ತು. ಅಲ್ಲದೇ ಈ ಸ್ಥಳದಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಎಲ್ಲವೂ ಸಾಮಾನ್ಯವಾಯಿತು ಎಂದು ವರದಿಯಾಗಿದೆ.

Brief scare after LPG cylinder explosion near Narendra Modi Stadium blaze under control

ಈ ಅಪಘಾತ ಬೆಳಗ್ಗೆ ಸಂಭವಿಸಿದ್ದು, ಕ್ರೀಡಾಂಗಣದ ಹೊರಗಿನ ಫುಟ್‌ಪಾತ್‌ನಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ನಿರ್ಲಕ್ಷ್ಯದಿಂದಾಗಿ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ. ಸಿಲಿಂಡರ್ ಸ್ಫೋಟ ಸಂಭವಿಸಿದ ತಕ್ಷಣ, ಸ್ವಲ್ಪ ಸಮಯದವರೆಗೆ ಭೀತಿ ಆವರಿಸಿತ್ತು. ಈಗಾಗಲೇ ಐಪಿಎಲ್‌ ಫೈನಲ್‌ ಪಂದ್ಯಕ್ಕೆ ಬಿಸಿಸಿಐ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆಪರೇಷನ್ ಸಿಂಧೂರ್‌ನ ಅದ್ಧೂರಿ ಯಶಸ್ಸಿಗಾಗಿ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೇನೆಯ ಗೌರವಾರ್ಥ ಬಿಸಿಸಿಐ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಿದೆ. ಪ್ರಸಿದ್ಧ ಗಾಯಕ ಶಂಕರ್ ಮಹಾದೇವನ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನೂ ಐಪಿಎಲ್‌ ಫೈನಲ್‌ ಪಂದ್ಯಕ್ಕೆ ಈಗಾಗಲೇ ಸಕಲ ಸಿದ್ದತೆಯನ್ನ ನಡೆಸಿದೆ. ಪ್ರೇಕ್ಷಕರು ಕ್ರೀಡಾಂಗಣವನ್ನು ತಲುಪುವಲ್ಲಿ ಯಾವುದೇ ತೊಂದರೆಯನ್ನು ಎದುರಿಸದಂತೆ ನೋಡಿಕೊಳ್ಳಲು, ಬಿಆರ್‌ಟಿಎಸ್ ಬಸ್‌ಗಳು ಮತ್ತು ಮೆಟ್ರೋ ರಾತ್ರಿ 12.30 ರವರೆಗೆ ಚಲಿಸುತ್ತವೆ ಎಂದು ಹೇಳಲಾಗಿದೆ. ಮೆಟ್ರೋ 2 ಕಾರಿಡಾರ್‌ನಲ್ಲಿ ಒಟ್ಟು 26 ರೈಲುಗಳನ್ನು ಓಡಿಸಲಾಗುವುದು. ಐಪಿಎಲ್ ಫೈನಲ್ ಪಂದ್ಯಕ್ಕೆ ವಿವಿಐಪಿಗಳು ಸೇರಿದಂತೆ ಅನೇಕ ಜನರು ಹಾಜರಾಗುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+