ಕೋಯಿಮತ್ತೂರು: ಲಂಚಾವತಾರಕ್ಕೆ ಶವಾಗಾರವೂ ಹೊರತಲ್ಲ!

ಕೋಯಿಮತ್ತೂರ್(ತಮಿಳುನಾಡು) ಜೂನ್ 10: ವೈದ್ಯಕೀಯ ನಿರ್ಲಕ್ಷ್ಯದಿಂದ ಹದಿನೇಳು ವರ್ಷದ ಮಗಳು ತೀರಿಹೋಗಿದ್ದಾಳೆಂಬ ದುಃಖ ಒಂದೆಡೆಯಾದರೆ, ಅಸುನೀಗಿದ ಮಗಳ ಕಳೇಬರವನ್ನು ಶವಾಗಾರದಿಂದ, ಅಂತ್ಯಸಂಸ್ಕಾರಕ್ಕೆಂದು ತೆಗೆದುಕೊಂಡು ಹೋಗುವುದುಕ್ಕೆಲಂಚ ಕೇಳುವ ಅಮಾನವೀಯತೆ ಇನ್ನೊಂದೆಡೆ...

ಇಂಥ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ತಮಿಳು ನಾಡಿನ ಕೋಯಿಮತ್ತೂರು. ತೂಕ ಇಳಿಸುವುದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 17 ವರ್ಷದ ಭಾಗ್ಯಶ್ರೀ ಎಂಬ ಯುವತಿಯೊಬ್ಬಳು, ಮೈದ್ಯರು ನೀಡಿದ ತಪ್ಪು ಮಾತ್ರೆಯಿಂದಾಗಿ ಅಸುನೀಗಿದ್ದಳು!

Bribery in mortuary! an inhuman incident in Coimbatore

ಆಕೆಯ ಶವವನ್ನು ಕೋಯಿಮತ್ತೂರಿನ ಆಸ್ಪಗತ್ರೆಗೆ ಮರಣೋತ್ತರ ಕ್ರಿಯೆಗೆಂದು ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ಶವಾಗಾರಕ್ಕೆ ರವಾನಿಸಲಾದ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಆಕೆಯ ಕುಟುಂಬ ಕೊಂಡೊಯ್ಯಲು ಬಂದಿತ್ತು.

ಆದರೆ ಮೊದಲೇ ದುಃಖದಲ್ಲಿದ್ದ ಆ ಕುಟುಂಬದ ಬಳಿ ಶವಾಗಾರದ ಸಿಬ್ಬಂದಿಗಳು 3000 ರೂ. ಲಂಚ ಕೇಳಿದ್ದರು. ಇದರಿಂದ ನೊಂದ ಕುಟುಂಬ ಲಂಚ ನೀಡುವುದಿಲ್ಲ ಎಂದಿದ್ದಕ್ಕೆ ಶವವನ್ನು ಶವಾಗಾರದಿಂದ ಆಂಬುಲೆನ್ಸ್ ವರೆಗೆ ಕುಟುಂಬದ ಸದಸ್ಯರೇ ಹೊತ್ತೊಯ್ಯುವ ಪರಿಸ್ಥಿತಿ ಎದುರಾಗಿದೆ.

ಸಾವಿನ ದುಃಖದಲ್ಲಿರುವ ಕುಟುಂಬವನ್ನು ಈ ಪರಿ ಅಮಾನವೀಯವಾಗಿ ನಡೆಸಿಕೊಂಡ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+