ಕಚೇರಿಯೊಳಗೆ ಪಕ್ಕದಲ್ಲೇ ಹೋದ ಚಿರತೆಯನ್ನು ನೋಡಿ 12 ವರ್ಷದ ಬಾಲಕ ಮಾಡಿದ್ದೇನು?

ಕಚೇರಿಯಲ್ಲಿ ಮೊಬೈಲ್‌ ನೋಡುತ್ತಾ ಕುಳಿತಿರುವ 12 ವರ್ಷದ ಬಾಲಕ, ಏಕಾಏಕಿ ಅದೇ ಕೋಣೆಗೆ ನುಗ್ಗುವ ಚಿರತೆ. ಇಂತಹದ್ದೊಂದು ಪರಿಸ್ಥಿತಿಯಲ್ಲಿ ನೀವಿದ್ದರೆ ಏನು ಮಾಡ್ತಿದ್ರಿ, ಭಯಕ್ಕೆ ಏನು ಮಾಡಬೇಕು ಅನ್ನೋದೆ ಗೊತ್ತಾಗ್ತಾ ಇರಲಿಲ್ಲ, ಅಥವಾ ಜೋರಾಗಿ ಕಿರುಚಿ ಚಿರತೆಗೂ ಗಾಬರಿ ಮಾಡ್ತಿದ್ರಿ. ಆದರೆ ಈ ಬಾಲಕ ಮಾತ್ರ ಅಸಾಧ್ಯ ಧೈರ್ಯ ಪ್ರದರ್ಶಿಸಿದ್ದಾನೆ.

12 ವರ್ಷ ವರ್ಷದ ಹುಡುಗ ಮೋಹಿತ್ ಅಹಿರೆ ಅವನ ಅಸಾಧಾರಣ ಧೈರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಚಿರತೆ ಒಳಗೆ ಬರುತ್ತಿದ್ದಂತೆ ಸೈಲೆಂಟಾಗಿ ರೂಮಿನಿಂದ ಹೊರ ಹೋದ ಬಾಲಕ ಬಾಗಿಲು ಹಾಕಿದ್ದು, ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾನೆ.

Brave 12-Year-Old Locks Leopard Inside Office Cabin in Maharashtra

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿ ಈ ಘಟನೆ ನಡೆದಿದೆ. ಹುಡುಗನ ಶೌರ್ಯ ಮತ್ತು ಚಾಣಾಕ್ಷತನ ಊರಿನಲ್ಲಿ ಚರ್ಚೆಯಾಯಿತು. ಮದುವೆ ಮಂಟಪದ ಸೆಕ್ಯುರಿಟಿ ಗಾರ್ಡ್‌ನ ಮಗನಾದ ಮೋಹಿತ್ ಅಹಿರೆ, ಚಿರತೆ ಅವನ ಹಿಂದೆ ನಡೆದು ಕಚೇರಿಗೆ ಪ್ರವೇಶಿಸಿದಾಗ ಕೇವಲ ಒಂದು ಅಡಿ ದೂರದಲ್ಲಿತ್ತು ಎನ್ನುವುದನ್ನು ನೋಡಬಹುದು.

ವೈರಲ್ ಆದ ವಿಡಿಯೋ

ಮಾಲೆಗಾಂವ್-ನಂಪುರ್ ರಸ್ತೆಯಲ್ಲಿರುವ ಸಾಯಿ ಸೆಲೆಬ್ರೇಷನ್ ಮದುವೆ ಮಂಟಪದಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ.
ಆ ಸಮಯದಲ್ಲಿ, ಮೋಹಿತ್ ಅಹಿರೆ ಮದುವೆ ಮಂಟಪದ ಬುಕಿಂಗ್ ಕಚೇರಿಯ ಪ್ರವೇಶ ದ್ವಾರದ ಬಳಿಯ ಬೆಂಚಿನ ಮೇಲೆ ಕುಳಿತು ತನ್ನ ಸೆಲ್‌ಫೋನ್‌ನಲ್ಲಿ ಆಟವಾಡುತ್ತಿದ್ದನು. ಏಕಾಏಕಿ ಚಿರತೆ ರೂಮಿನೊಳಗೆ ಸಾಗುತ್ತಿರುವುದನ್ನು ಕಂಡನು. ಆದರೆ, ಚಿರತೆಯು ಹುಡುಗನನ್ನು ಗಮನಿಸಲಿಲ್ಲ.

ಚಿರತೆ ತುಂಬಾ ಹತ್ತಿರವಾಗಿತ್ತು. ಚಿರತೆ ಮತ್ತು ನನ್ನ ನಡುವೆ ಸ್ವಲ್ಪ ಜಾಗವಿರಲಿಲ್ಲ. ಅದು ನನ್ನ ಮುಂದೆಯೇ ಕಚೇರಿಯ ಒಳಗಿನ ಕ್ಯಾಬಿನ್‌ಗೆ ಕಾಲಿಟ್ಟಿತು. ನನಗೆ ಭಯವಾಯಿತು, ಆದರೆ ನಾನು ಸದ್ದಿಲ್ಲದೆ ಬೆಂಚ್‌ನಿಂದ ಇಳಿದು ರೂಮಿನಿಂದ ಹೊರಬಂದು ಬಾಗಿಲು ಮುಚ್ಚಿದೆ, ಎಂದು ಬಾಲಕ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮದುವೆ ಮಂಟಪದ ಮಾಲೀಕ ಅನಿಲ್ ಪವಾರ್, "ಬುಕಿಂಗ್ ಕಚೇರಿಯ ಸುತ್ತಳತೆ 22 ಅಡಿ x 10 ಅಡಿ. ನಾವು ಕಚೇರಿಯಲ್ಲಿ ಎರಡು ವಿಭಾಗಗಳನ್ನು ರಚಿಸಿದ್ದೇವೆ. ಮೋಹಿತ್ ಅಹಿರೆ ಪ್ರವೇಶದ್ವಾರದ ಬಳಿ ಮೊದಲ ಕಂಪಾರ್ಟ್‌ಮೆಂಟ್‌ನಲ್ಲಿ ಕುಳಿತಿದ್ದರು. ಚಿರತೆ ನೇರವಾಗಿ ಒಳಗೆ ಹೋಗಿದೆ. ಚಿರತೆ ಅವನಿಂದ ಕೇವಲ ಒಂದು ಅಡಿ ದೂರದಲ್ಲಿ ನಡೆದುಕೊಂಡು ಹೋಗುವುದನ್ನು ಕಂಡಾಗ ಆತ ಶಾಂತವಾಗಿದ್ದ. ನಂತರ ಅವನು ಕಛೇರಿಯಿಂದ ಹೊರಬಂದು ಬಾಗಿಲು ಮುಚ್ಚಿದ" ಎಂದು ಹೇಳಿದ್ದಾರೆ.

ಮುಂಜಾನೆಯೇ ಸಮೀಪದ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು ಎಂದು ಪವಾರ್ ಹೇಳಿದ್ದಾರೆ. ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಯೊಂದಿಗೆ ನಿವಾಸಿಗಳು ಅದನ್ನು ಪತ್ತೆಹಚ್ಚಲು ಪ್ರಯತ್ನಿಸಿದರು. ಕಚೇರಿಯೊಳಗೆ ಚಿರತೆಯನ್ನು ಹಿಡಿದಿರುವುದಾಗಿ ಮೋಹಿತ್ ಅಹಿರೆ ತನ್ನ ತಂದೆಗೆ ತಿಳಿಸಿದ ನಂತರ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಇತರ ನಾಗರಿಕರು ಸ್ಥಳಕ್ಕೆ ಬಂದರು.

ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಈ ಪ್ರದೇಶದ ಸುತ್ತಲೂ ಅನೇಕ ಕೃಷಿ ಕ್ಷೇತ್ರಗಳಿರುವುದರಿಂದ ಮತ್ತು ಮೌಸಮ್ ನದಿಯು ಸಹ ಪ್ರದೇಶದಿಂದ ಕೇವಲ ಒಂದೆರಡು ಕಿಲೋಮೀಟರ್ ದೂರದಲ್ಲಿ ಹರಿಯುವುದರಿಂದ ಈ ಹಿಂದೆ ಚಿರತೆ ಕಾಣಿಸಿಕೊಂಡಿದೆ ಎಂದು ಅಧಿಕಾರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+