BPL, APL Card: ಬಿಪಿಎಲ್‌, ಎಪಿಎಲ್ ಕಾರ್ಡುದಾರರಿಗೆ ಪಡಿತರ ವಿತರಣೆ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

BPL, APL Ration Card: ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಕೆಲವೆಡೆ ಉಚಿತ, ಇನ್ನೂ ಕೆಲವು ರಾಜ್ಯಗಳಲ್ಲಿ ಕಡಿಮೆ ದರದಲ್ಲಿ ಪಡಿತರ ವಿತರಣೆ ಮಾಡಲಾಗುತ್ತದೆ. ಇನ್ನೂ ಈ ರೇಷನ್‌ ಕಾರ್ಡ್‌ಗಳ ಬಗ್ಗೆ ಸುಪ್ರೀಂ ಕೋರ್ಟ್‌ ಪ್ರಶ್ನೆವೊಂದನ್ನು ಕೇಳಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಹಾಗೆಯೇ ಇನ್ನೂ ಕೆಲವು ರಾಜ್ಯಗಳಲ್ಲೂ ಕೂಡ ಕರ್ನಾಟಕದ ಮಾದರಿಯನ್ನೇ ಅನುಸರಿಸಲಾಗುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಪ್ರಶ್ನೆಯೊಂದನ್ನೂ ಕೇಳಿದೆ.

BPL and APL Card What Did Supreme Court Say About Ration Distribution

ಪಡಿತರ ಚೀಟಿಗಳು ಜನಪ್ರಿಯತೆಗಾಗಿ ರೂಪಿಸಿರುವ ಕಾರ್ಡುಗಳಂತಾಗಿವೆ. ಬಡವರಿಗಾಗಿ ಜಾರಿಗೊಳಿಸಿರುವ ಸಾರ್ವಜನಿಕ ಪಡಿತರ ಯೋಜನೆ ಪ್ರಯೋಜನ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂದು ಸುಪ್ರೀಂ ಕೋರ್ಟ್‌ನಲದಕು ಪ್ರಶ್ನಿಸಲಾಗಿದೆ. ಸಬ್ಸಿಡಿಯ ಲಾಭ ಅರ್ಹ ಫಲಾನುಭವಿಗಳಿಗೇ ತಲುಪಬೇಕು. ಬಡವರಿಗಾಗಿ ಇರುವ ಈ ಪ್ರಯೋಜನಗಳು ಅರ್ಹತೆ ಹೊಂದಿರುವ ವ್ಯಕ್ತಿಗಳ ಪಾಲಾಗುತ್ತಿದೆ ಅಂತಲೂ ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.

ಕೊರೊನಾ ಸಮಯದಲ್ಲಿ ವಲಸೆ ಕಾರ್ಮಿಕರು ಎದುರಿಸಿದ ಸಂಕಷ್ಟಗಳಿಗೆ ಸಂಬಂಧಿಸಿ ಸ್ವಯಂ ಪ್ರೇರಿತವಾಗಿ ದಖಲು ಮಾಡಿಕೊಂಡಿರುವ ಅರ್ಜಿ ವಿಚಾರಣೆ ವೇಳೆ, ನ್ಯಾಯಾಲಯ ಈ ಪ್ರಶ್ನೆ ಕೇಳಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಎನ್‌.ಕೋಟೇಶ್ವರ ಸಿಂಗ್ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿದೆ. ಬಡವರಿಗೆ ವಿತರಿಸಲಾದ ಉಚಿತ ಪಡಿತರ ಕುರಿತು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಪೀಠ, ವಿಚಾರಣೆಯಮ್ನು ಮುಂದೂಡಿಕೆ ಮಾಡಿದೆ.

ಇದಕ್ಕೂ ಮುಂಚಿತವಾಗಿ ವಿಚಾರಣೆ ವೇಳೆ, ಕೆಲ ರಾಜ್ಯಗಳು ಸಾಕಷ್ಟು ಸಂಖ್ಯೆಯಲ್ಲಿ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳುತ್ತವೆ. ಅಭಿವೃದ್ಧಿ ವಿಚಾರ ಬಂದಾಗ ಕೆಲ ರಾಜ್ಯಗಳು ತಮ್ಮ ತಲಾ ಆದಾಯವನ್ನು ಹೆಚ್ಚು ಮಾಡುತ್ತಿವೆ ಎಂಬ ವಾದ ಮಂಡಿಸುತ್ತವೆ. ಆದರೆ, ಸಬ್ಸಿಡಿ ವಿಷಯ ಪ್ರಸ್ತಾಪಿಸಿದಾಗ ತಮ್ಮ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡ 75ರಷ್ಟು ಜನರು ಬಿಪಿಎಲ್ ಕಾರ್ಡು ಹೊಂದಿದ್ದಾಗಿ ಹೇಳುತ್ತವೆ. ಇಂತಹ ಸಂಗತಿಗಳ ನಡುವೆ ಸಮಸ್ವಯ ಸಾಧಿಸುವುದೇಗೆ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಕೇಲ ಅರ್ಜಿದಾರರ ಪರ ಹಾಜರಿದ್ದ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ್, ಇಂತಹ ವ್ಯತ್ಯಾಸಗಳಿಗೆ ಜನರ ಆದಾಯದಲ್ಲಿನ ಅಸಮಾನತೆಯೇ ಕಾರಣ ಎಂದು ಪೀಠಕ್ಕೆ ತಿಳಿಸಿದರು. ಬೆರಳಣಿಕೆಯಷ್ಟು ಜನರು ಭಾರಿ ಸಂಪತ್ತು ಹೊಂದಿದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ಅಂತಲೂ ಹೇಳಿದರು.

ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ಬಡ ವಲಸೆ ಕಾರ್ಮಿಕರ ಸಂಖ್ಯೆ 8 ಕೋಟಿ ಇದ್ದು, ಇವರಿಗೆ ಉಚಿತವಾಗಿ ಪಡಿತರ ನೀಡಬೇಕು ಅಂತಲೂ ಹೇಳಿದರು. ಆಗ ನ್ಯಾಯಮೂರ್ತಿ ಸೂರ್ಯಕಾಂತ, ಪಡಿತರ ಚೀಟಿಗಳನ್ನು ನೀಡುವ ವೇಳೆ ಯಾವುದೇ ರಾಜಕೀಯ ಬೆರಸುವುದಿಲ್ಲ ಎಂಬ ವಿಶ್ವಾಸ ನಮ್ಮದು. ಜೊತೆಗೆ ಬಡವರ ಸ್ಥಿತಿ ಬಗ್ಗೆ ನನಗೆ ಅರಿವು ಇದೆ. ಕೆಲ ಕುಟುಂಬಗಳು ಈಗಲೂ ಬಡತನದಿಂದ ಬಳಲುತ್ತಿರುವುದೂ ನನಗೆ ತಿದಿದೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ ಭೂಷಣದ, ಕೇಂದ್ರ ಸರ್ಕಾರ 2021ರಲ್ಲಿ ಜನಗಣತಿ ನಡೆಸಿಲ್ಲ. 2021ರ ಜನಗಣತಿಯ ದತ್ತಾಂಶ ಆಧರಿಸಿಯೇ ಪಡಿತರ ನೀಡುತ್ತಿದೆ. ಆದ್ದರಿಂದ ಉಚಿತ ಪಡಿತರ ಪಡೆಯಲು ಅರ್ಹರಾಗಿರುವ 10 ಕೋಟಿ ಜನರು ಬಿಪಿಎಲ್‌ ಕಾರ್ಡ್‌ನಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ಅಂದಾಜು 81.35 ಕೋಟಿ ಜನರಿಗೆ ಕೇಂದ್ರ ಸರ್ಕಾರ ಉಚಿತ ಪಡಿತರ ನೀಡುತ್ತಿದೆ. ಇತರ 11 ಕೋಟಿ ಜನರು ಇಂತಹದ್ದೇ ಯೋಜನೆಗಳಡಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+