ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್

ನವದೆಹಲಿ, ಮಾರ್ಚ್ 22: ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಬರುವ ಏಪ್ರಿಲ್ 26ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

ಜಾನ್ಸನ್ ಬೆಂಗಳೂರು, ಪುಣೆ, ಮುಂಬೈ ಹಾಗೂ ಚೆನ್ನೈಗೆ ಭೇಟಿ ನೀಡಲಿದ್ದಾರೆ, ಈ ಮೊದಲು ಗಣರಾಜ್ಯೋತ್ಸವ ಪರೇಡ್‌ಗೆ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೊರೊನಾದಿಂದಾಗಿ ಭಾರತ ಭೇಟಿಯನ್ನು ಮುಂದೂಡಲಾಗಿತ್ತು.

ಮುಂಬರುವ ವರ್ಷಗಳಲ್ಲಿ ಬ್ರಿಟನ್‌ ಸರಕಾರದ ನೀತಿಯ ಸಮಗ್ರ ವಿಮರ್ಶೆಯ ಭಾಗವಾಗಿ ಇಂಡೋ-ಪೆಸಿಫಿಕ್ ಪ್ರದೇಶದತ್ತ ತನ್ನ ಗಮನವನ್ನು ಹರಿಸಲಿದೆ.

Boris Johnson

ಈ ಪ್ರದೇಶವು ವಿಶ್ವದ ಭೌಗೋಳಿಕ ರಾಜಕೀಯ ಕೇಂದ್ರವನ್ನು ಹೆಚ್ಚು ಪ್ರತಿನಿಧಿಸುತ್ತಿರುವ ಹಿನ್ನೆಲೆ, ಇಂಡೋ-ಪೆಸಿಫಿಕ್ ಪ್ರದೇಶದತ್ತ ಹೆಚ್ಚಿನ ಗಮನ ಹರಿಸಲಿದೆ ಎಂದು ಅಲ್ಲಿನ ಸರಕಾರ ಹೇಳಿದೆ.

ಹೀಗಾಗಿ ಮೋದಿ ಹಾಗೂ ಜಾನ್ಸನ್‌ ಮಙಾತುಕತೆಯಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ಜಾಸ್ತಿ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ. ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಬಲ ಪ್ರದರ್ಶನಕ್ಕೂ ಒತ್ತು ನೀಡುವ ಬಗ್ಗೆ ಚರ್ಚೆ ಸಾಧ್ಯತೆ ಇದೆ.

ಉಭಯ ದೇಶಗಳ ಮಧ್ಯೆ ದ್ವಿಪಕ್ಷೀಯ ಬಾಂಧವ್ಯ, ಸಹಕಾರ ವರ್ಧನೆಗೆ, ಅವಕಾಶಗಳ ವೃದ್ಧಿಗೆ ಇಂಗ್ಲೆಂಡ್ ಪ್ರಧಾನಿಯ ಈ ಭೇಟಿ ಸಹಾಯವಾಗಲಿದೆ ಎಂದು ಅವರ ಕಚೇರಿ ತಿಳಿಸಿದೆ.

ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮಾತುಕತೆಯನ್ನು ಚುರುಕುಗೊಳಿಸುವ ಪ್ರಯತ್ನಗಳ ಭಾಗವಾಗಿ ಜಾನ್ಸನ್ ಜನವರಿಯಲ್ಲಿ ಭಾರತೀಯ ಪ್ರವಾಸವನ್ನು ಯೋಜಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+