Adani Group: ಅದಾನಿ ವಿರುದ್ಧದ ಅರ್ಜಿ ವಜಾಗೊಳಿಸಿದ ಮುಂಬೈ ಹೈಕೋರ್ಟ್
ಮುಂಬೈ, ಡಿಸೆಂಬರ್ 16: ಮಹಾರಾಷ್ಟ್ರ ರಾಜ್ಯ ಸರ್ಕಾರ ಅದಾನಿ ಗ್ರೂಪ್‌ಗೆ ನೀಡಿದ್ದ ಮಹತ್ವ ಗುತ್ತಿಗೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕೃತಗೊಳಿಸಿದೆ. ನವೀಕರಿಸುವ ಮತ್ತು ಉಷ್ಣ ವಿದ್ಯುತ್ ವಿದ್ಯುಚ್ಛಕ್ತಿ ಸರಬರಾಜು ಮಾಡಲು ಗುತ್ತಿಗೆಯನ್ನು ಪಡೆದ ಅದಾನಿ ಗ್ರೂಪ್‌ಗೆ ಜಯ ಸಿಕ್ಕಂತಾಗಿದೆ. ಮುಂಬೈ ಹೈಕೋರ್ಟ್ ಅರ್ಜಿಯನ್ನು ಸೋಮವಾರ ವಜಾಗೊಳಿಸಿದೆ.
ಮುಂಬೈ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಅದಾನಿ ಗ್ರೂಪ್ ಗೆ ನೀಡಿದ್ದ ಗುತ್ತಿಗೆ ಆಕ್ಷಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯು ಆಧಾರ ರಹಿತವಾಗಿದೆ ಎಂದು ನ್ಯಾಯಪೀಠವು ತಿಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದೊಂದು ಅಸ್ಪಷ್ಟ ಅರ್ಜಿಯಾಗಿದೆ ಎಂದು, ದೂರುದಾರ ಶ್ರೀರಾಜ್ ನಾಗೇಶ್ವರ್ ಏಪುರ್ವಾರ್ ಅವರಿಗೆ ಮುಂಬೈ ಹೈಕೋರ್ಟ್ 50,000 ದಂಡ ವಿಧಿಸಿತು. 6,600 ಮೆಗಾವ್ಯಾಟ್ ನವೀಕರಿಸಬಹುದಾದ ಮತ್ತು ಶಾಖೋತ್ಪನ್ನ ವಿದ್ಯುತ್ ಪೂರೈಕೆಯ ಗುತ್ತಿಗೆಯನ್ನು ಮಹಾರಾಷ್ಟ್ರ ಸರ್ಕಾರ ಅದಾನಿ ಸಮೂಹಕ್ಕೆ ನೀಡಿದೆ. ವಿದ್ಯುತ್ ಪೂರೈಕೆಯ ಗುತ್ತಿಗೆ ಪಡೆದ ಅದಾನಿ ಗ್ರೂಪ್ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅದಾನಿ ಗ್ರೂಪ್ ಮಾತ್ರವಲ್ಲದೇ ಗುತ್ತಿಗೆ ನೀಡಿದ್ದ ಮಹಾರಾಷ್ಟ್ರ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧವೂ ಅರ್ಜಿಯಲ್ಲಿ ದೂರುದಾರರು ಆರೋಪಿಸಿದ್ದಾರೆ. ಅರ್ಜಿದಾರರ ಪರ ವಾದ ಮಾಡುತ್ತಿದ್ದಂತೆ ನ್ಯಾಯಪೀಠ ಆಧಾರ ರಹಿತ ವಾದಗಳನ್ನು ಸ್ವೀಕರಿಸಲಿಲ್ಲ. ನ್ಯಾಯಪೀಠ ವಾದ ಒಪ್ಪಲು ನಿರಾಕರಿಸಿತು.
ಈ ಅರ್ಜಿಯಲ್ಲಿ ಆಧಾರ ರಹಿತ ಆರೋಪಗಳು, ಅಜಾಗರೂಕ ಅರ್ಜಿ ಇದಾಗಿದೆ. ಇಂತಹ ಅರ್ಜಿಗಳನ್ನು ಕೋರ್ಟ್ ಸಲ್ಲಿಸುವ ಮೂಲಕ ಉತ್ತಮ ಸರ್ಕಾರಣಗಳಿಗೆ ಕೆಲವೊಮ್ಮೆ ತೊಂದರೆ ಎದುರಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ನೀಡಲಾದ ಗುತ್ತಿಗೆಯು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಹಗರಣ ಇದಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಸರ್ಕಾರ ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಯಾವುದೇ ಭ್ರಷ್ಟ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ನಿಮ್ಮ ಅರ್ಜಿಯಲ್ಲಿ ಪೂರಕೆ ದಾಖಲೆಗಲು ಇಲ್ಲ. ಅರ್ಜಿದಾರರು ಒಪ್ಪಂದದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ ನೀವು ಹೇಳುವಂತೆ ಹಲವರು ಭಾಗವಹಿಸಿಲ್ಲ ಎಂದಿತು.
ನೀವು ಹೇಳುವ ದಾಖಲೆಗಳು ನೀವು ಸಲ್ಲಿಸುವ ಅರ್ಜಿಯಲ್ಲಿ ಇಲ್ಲ. ಪೋಷಕ ದಾಖಲೆಗಳು ಇಲ್ಲ. ಅಸ್ಪಷ್ಟ ಆರೋಪ, ಅಧಾರರಹಿತವಾಗದದ್ದು ಎಂಬು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಪುನರುಚ್ಚರಿಸಿದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.
ಜೊತೆಗೆ ಅರ್ಜಿದಾರರಿಗೆ 50,000 ರೂಪಾಯಿ ಹಣವನ್ನು (ವೆಚ್ಚವನ್ನು) ಅರ್ಜಿದಾರರು ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಠೇವಣಿ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿತು.












Click it and Unblock the Notifications