ಉತ್ತರಾಖಂಡ್ ನಲ್ಲಿ ಬಾಂಬ್ ಸ್ಫೋಟ, ಬಾಲಕ ಸಾವು
ಉತ್ತರಾಖಂಡ್, ಡಿ. 6: ಉತ್ತರಖಂಡ್ ನ ರೂರ್ಕಿಯ ದಾವ್ ಕಾಲೇಜು ಬಳಿ ಶನಿವಾರ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಶಾಲಾ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ.
6 ನೇ ತರಗತಿ ಓದುತ್ತಿದ್ದ ಬಾಲಕನ ಬ್ಯಾಗ್ ನಲ್ಲಿ ಬಾಂಬ್ ಇರಿಸಲಾಗಿತ್ತು. ಶಾಲೆಯ ಎದುರು ಬಾಂಬ್ ಸ್ಫೋಟವಾಗಿದ್ದು ಉಳಿದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.ಉಗ್ರರು ಪದೇ ಪದೇ ದಾಳಿ ಮಾಡುತ್ತಿದ್ದು ಶುಕ್ರವಾರ ಭಾರತದ 11 ಸೈನಿಕರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದರು.[ಭಾರತೀಯ ಸೇನಾ ಶಿಬಿರಕ್ಕೆ ನುಗ್ಗಿತು ಉಗ್ರರ ಗುಂಡು]

ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್
ಸೋಮವಾರ ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವಿದ್ದು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಉಗ್ರರು ದಾಳಿ ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಗುಪ್ತಚರ ದಳ ಮಾಹಿತಿ ನೀಡಿದ್ದು ಎಲ್ಲ ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.[ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶಕ್ಕೆ ಸೇರಿಸ್ತಾರಂತೆ?]
ಕಾಶ್ಮೀರ ಮತ್ತು ಪಂಜಾಬ್ ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು ರಾಷ್ಟ್ರದ ಯೋಧರ ಪ್ರಾಣ ಬಲಿಯಾಗುತ್ತಿದೆ. ಕಳೆದ ಒಂದು ವಾರದಿಂದ ಒಂದೆಲ್ಲಾ ಒಂದು ಕಡೆ ಉಗ್ರರು ವಿಧ್ವಂಸಕ ಕೃತ್ಯ ನಡೆಸುತ್ತಲೇ ಇದ್ದಾರೆ.












Click it and Unblock the Notifications