ಐಟಂ ಗರ್ಲ್ ಗಳನ್ನು ವೇಶ್ಯೆ ಎನ್ನಿರಿ: ಹಿಂದೂ ಮುಖಂಡ
ನವದೆಹಲಿ, ಡಿ.3: ತುಂಡುಡುಗೆ ಉಟ್ಟ ತಪ್ಪಿಗೆ ಕಪಾಳಮೋಕ್ಷ ಮಾಡಿಸಿಕೊಂಡ ನಟಿ ಗೌಹರ್ ಖಾನ್ ಪ್ರಸಂಗ ಬಿಸಿಯಾಗಿರುವಾಗಲೇ ಹಿಂದೂ ಮಹಾಸಭಾದ ಕಾರ್ಯದರ್ಶಿ ನವೀನ್ ತ್ಯಾಗಿ ನೀಡಿರುವ ಹೇಳಿಕೆ ಭಾರಿ ಗದ್ದಲವೆಬ್ಬಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ತ್ಯಾಗಿ ಪರ ವಿರೋಧ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.
ಸಿನಿಮಾಗಳಲ್ಲಿ ಮೈತೋರಿ ಕುಣಿಯುವ ಐಟಂ ಗರ್ಲ್ ಗಳನ್ನು ವೇಶ್ಯೆಯರೆಂದು ಘೋಷಿಸಬೇಕು ಎಂದು ಹಿಂದೂ ಮಹಾಸಭಾದ ಕಾರ್ಯದರ್ಶಿ ನವೀನ್ ತ್ಯಾಗಿ ಆಗ್ರಹಿಸಿದ್ದರು. ಉತ್ತರಪ್ರದೇಶ ಹಿಂದೂ ಮುಖಂಡ ನವೀನ್ ಹೇಳಿಕೆ ನೀಡಿದ್ದಷ್ಟೇ ಮಾಧ್ಯಮಗಳ ಮುಂದೆ ಮಾತನಾಡುತ್ತಾ ಈ ವಿಷಯವನ್ನು ಸುಪ್ರೀಂಕೋರ್ಟಿನ ತನಕ ಎಳೆದೊಯ್ಯುವುದಾಗಿ ಘೋಷಿಸಿದ್ದಾರೆ.

ಶಾಲೆಗಳಲ್ಲಿ ಮಿನಿಸ್ಕರ್ಟ್ ತೊಡುವುದು, ಬಿಗಿಯಾದ ಮೈಉಡುಪು ಧರಿಸಿ ಕಾಲೇಜಿಗೆ ಹೋಗುವವರನ್ನು ತರಾಟೆಗೆ ತೆಗೆದುಕೊಂಡಿರುವ ತ್ಯಾಗಿ, ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು ಎಂದಿದ್ದಾರೆ.
Hypocrisy hypocrisy n hypocrisy...Wake up man... #MoralMonster
— Kennedy L S Pereira (@pereiraken) December 2, 2014 ನವೀನ್ ತ್ಯಾಗಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜಕೀಯ ಪಕ್ಷಗಳು ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ತ್ಯಾಗಿ ಹೇಳಿಕೆಯನ್ನು ಖಂಡಿಸಿದೆ. 'ಇಂಥ ಹೇಳಿಕೆ ತಪ್ಪು. ನಮಗೆ ಇದರ ಬಗ್ಗೆ ಹೆಚ್ಚು ಗೊತ್ತಿಲ್ಲ. ತ್ಯಾಗಿ ಅವರಿಂದ ಮಾಹಿತಿ ಪಡೆಯುತ್ತೇವೆ' ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ.
@timesnow #MoralMonster even the stone age n most primitive tribal ppl won't address women in those terms.
— kashif Qureshi (@kashiflion) December 2, 2014 ಹರ್ಯಾಣದಲ್ಲಿ ನಿರ್ಬಂಧ: ಈ ಹಿಂದೆ ಹರ್ಯಾಣದಲ್ಲಿ ಹಿಂದೂ ಮಹಾಸಭಾ ವಿದ್ಯಾರ್ಥಿನಿಯರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿ ಜೀನ್ಸ್, ಮೊಬೈಲ್ ಬಳಕೆ ನಿರ್ಬಂಧ ಹೇರಿತ್ತು. ಖಾಪ್ ಪಂಚಾಯಿತಿಗಳು ಮಹಿಳೆಯರ ಅಧುನಿಕ ಜೀವನಶೈಲಿಯ ವಿರುದ್ಧ ನಿರಂತರವಾಗಿ ಕೆಂಡಕಾರುತ್ತಲೇ ಬಂದಿವೆ.
Just heard the ridiculous demands of the #MoralMonster .ban skirts,ban mobiles & label girls doing item numbers as prostitutes..BIZZARE!!!
— aditya sahu (@champlibran) December 2, 2014 ಹರ್ಯಾಣ ಸಿಸ್ಟರ್ ಹೇಳಿಕೆ: ಜೀನ್ಸ್ ಧರಿಸದಿದ್ದರೆ ತಮಗೆ ತಮ್ಮನ್ನು ರಕ್ಷಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಟಿವಿ ಚಾನೆಲ್‌ವೊಂದಕ್ಕೆ ಹರ್ಯಾಣದ ಸಹೋದರಿಯರು ನೀಡಿದ್ದ ಹೇಳಿಕೆ ನೀಡಿದ್ದರು.
#MoralMonster Every human being whether an item girl or a prostitute deserve protection and respect.No one has the right to cast out anyone.
— Deepa chettiar (@deepakrchettiar) December 2, 2014 ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ್ ಹಿಂದೂ ಮಹಾಸಭಾ(ಎಬಿಎಚ್‌ಎಂ)ದ ರಾಜ್ಯ ವಕ್ತಾರ ಲಲಿತ್ ಭಾರದ್ವಾಜ್ 'ಹುಡುಗಿಯರು ಜೀನ್ಸ್ ಧರಿಸುವುದನ್ನು ನಾವು ವಿರೋಧಿಸುವುದಿಲ್ಲ.ಆದರೆ ಅವರು ತುಂಡು ಉಡುಗೆಗಳನ್ನು ಧರಿಸುವುದಕ್ಕೆ ನಮ್ಮ ವಿರೋಧವಿದೆ'' ಎಂದು ಹೇಳಿದ್ದಾರೆ.
#MoralMonster I do not understand this constant attack on women. If an item girl arouses a large group of men, somehow the blame is on her?
— Deepa chettiar (@deepakrchettiar) December 2, 2014 











Click it and Unblock the Notifications