ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಫೋರ್ಸ್ ಫಿರಂಗಿಗೆ ಕಿಚ್ಚು ಹಚ್ಚಿದ ಪ್ರಣಬ್

By Mahesh
|
Google Oneindia Kannada News

ನವದೆಹಲಿ, ಮೇ.27: ಬಹುಕೋಟಿ ಬೊಫೋರ್ಸ್ ಫಿರಂಗಿ ಖರೀದಿ ಹಗರಣ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದು ದೊಡ್ಡ ಕಿಡಿ ಹಚ್ಚಿದೆ. ದೇಶದ ಅತ್ಯಂತ ಕರಾಳ ಹಗರಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೋಫೋರ್ಸ್ ಹಗರಣದ ಬಗ್ಗೆ ಪ್ರಣಬ್ ಮುಖರ್ಜಿ ಅವರು ಹೇಳಿದ್ದೇಕೆ? ಎಂಬ ಪ್ರಶ್ನೆ ಜೊತೆಗೆ ಬೋರ್ಫೋರ್ಸ್ ಹಗರಣದ ಬಗ್ಗೆ ವಿವರಣೆ ಇಲ್ಲಿದೆ

ಸ್ವೀಡಿಷ್ ರಾಷ್ಟ್ರೀಯ ದೈನಿಕಕ್ಕೆ ಇತ್ತೀಚೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂದರ್ಶನ ನೀಡಿದ್ದರು. ಸಂದರ್ಶನದ ವೇಳೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ..[ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]

'1987ರ ಬೋಫೋರ್ಸ್ ಫಿರಂಗಿ ಖರೀದಿಯನ್ನು ಹಗರಣ ಎಂದು ಕರೆಯುವುದು ಸರಿಯಲ್ಲ. ನಾನು ರಕ್ಷಣಾ ಸಚಿವನಾಗಿದ್ದ ಕಾಲದಲ್ಲೇ ಫಿರಂಗಿ ಖರೀದಿ ನಡೆಯಿತು. ಬೊಫೋರ್ಸ್ ಸಂಸ್ಥೆಯ ಫಿರಂಗಿಗಳ ಬಗ್ಗೆ ರಕ್ಷಣಾ ಸಚಿವಾಲಯ ಹಾಗೂ ಸೇನೆಯ ಉನ್ನತ ಮಟ್ಟದ ಅಧಿಕಾರಿಗಳು ಪ್ರಮಾಣ ಪತ್ರ ನೀಡಿದ ನಂತರ ಖರೀದಿ ಪ್ರಕ್ರಿಯೆ ನಡೆಸಲಾಯಿತು' ಎಂದಿದ್ದಾರೆ.

ಬಹುಕೋಟಿ ಭೋಫೋರ್ಸ್ ಫಿರಂಗಿ ಖರೀದಿ ಹಗರಣದಲ್ಲಿ ಭಾಗಿಯಾಗಿದ್ದ ಕ್ವಟ್ರೋಚಿ ಸಿಬಿಐ ಮುಷ್ಟಿಯಿಂದ ತಪ್ಪಿಸಿಕೊಳ್ಳಲು ಕೇಂದ್ರದ ಯುಪಿಎ ಸರ್ಕಾರ ಕಾರಣ ಎಂದು ಬಿಜೆಪಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಕ್ವಟ್ರೋಚಿ, ರಾಜೀವ್ ಗಾಂಧಿ ಬದುಕುಳಿದಿಲ್ಲ, ಬೋಫೋರ್ಸ್ ಹಗರಣ ಎಂದರೇನು? ಯಾರು ಯಾರು ಆರೋಪಿಗಳು? ಪ್ರಕರಣದ ಸ್ಥಿತಿ ಗತಿ ಏನಾಗಿದೆ? ಎಂಬ ವಿವರ ಮುಂದಿದೆ.

ಬೋಫೋರ್ಸ್ ಹಗರಣ ಎಂದರೇನು?

ಬೋಫೋರ್ಸ್ ಹಗರಣ ಎಂದರೇನು?

* 1980 ರಿಂದ 1990ರ ದಶಕಗಳಲ್ಲಿ ಭಾರತ ಹಾಗೂ ಸ್ವೀಡನ್ ನಡುವೆ ಶಸ್ತ್ರಾಸ್ತ್ರ ಖರೀದಿ ಸಂದರ್ಭದಲ್ಲಾದ ಅವ್ಯವಹಾರ
* ಆಂದಿನ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ ಅನೇಕ ರಾಜಕೀಯ ಮುಖಂಡರ ಮೇಲೆ ಲಂಚ ಪಡೆದ ಆರೋಪ.
* ಸುಮಾರು 1.3 ಬಿಲಿಯನ್ ಯುಎಸ್ ಡಾಲರ್ ಒಪ್ಪಂದ ಇದಾಗಿದ್ದು, ಸ್ವೀಡನ್ನಿನ ಬೋಫೋರ್ಸ್ ಕಂಪನಿ ಹಾಗೂ ಭಾರತ ಸರ್ಕಾರ ನಡುವೆ ಡೀಲ್.
* ಸ್ವೀಡನ್ ನಡೆಸಿದ ಅತ್ಯಂತ ದೊಡ್ಡ ಡೀಲ್ ಇದಾಗಿದ್ದು, ಭಾರತಕ್ಕೆ ಸುಮಾರು 410ಕ್ಕೂ ಅಧಿಕ ಫಿರಂಗಿಗಳು ರವಾನೆಯಾಗಿತ್ತು.

ರಾಜೀವ್ ಗಾಂಧಿಗೆ ಬಿಸಿ ಮುಟ್ಟಿಸಿದ ಹಗರಣ

ರಾಜೀವ್ ಗಾಂಧಿಗೆ ಬಿಸಿ ಮುಟ್ಟಿಸಿದ ಹಗರಣ

* 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಬೋಫೋರ್ಸ್ ಹಗರಣ ಕಾರಣವಾಯಿತು.
* ರಾಜೀವ್ ಸೇರಿ ಭಾರತದ ರಾಜಕಾರಣಿಗಳಿಗೆ 640 ಮಿಲಿಯನ್ ದುಡ್ಡು ಸಿಕ್ಕಿದೆ ಎಂಬ ಆರೋಪ.
* ವಿಪಿ ಸಿಂಗ್ ಅವರು ರಕ್ಷಣಾ ಸಚಿವರಾಗಿದ್ದ ಕಾಲದಲ್ಲಿ ಹಗರಣ ಬೆಳಕಿಗೆ ಬಂದಿತು.
* ರಾಜೀವ್ ಗಾಂಧಿ ಗೌರವ ಕಾಪಾಡಲು ಹಗರಣ ಮುಚ್ಚಿಡಲಾಯಿತು ಎಂದ ವಿಪಿ ಸಿಂಗ್ ಅವರು ಕಾಂಗ್ರೆಸ್ ಹಾಗೂ ಸಂಸದ್ ಸ್ಥಾನ ತ್ಯಜಿಸಬೇಕಾಯಿತು.

ರೈಟರ್ಸ್ ಹಾಗೂ ದಿ ಹಿಂದೂ ಪತ್ರಿಕೆ ಕಾರ್ಯಾಚರಣೆ

ರೈಟರ್ಸ್ ಹಾಗೂ ದಿ ಹಿಂದೂ ಪತ್ರಿಕೆ ಕಾರ್ಯಾಚರಣೆ

* ರೈಟರ್ಸ್ ಹಾಗೂ ಎನ್ ರಾಮ್ ನೇತೃತ್ವದ ದಿ ಹಿಂದೂ ಪತ್ರಿಕೆ ಕಾರ್ಯಾಚರಣೆ ನಡೆಸಿದರು. ಹಗರಣಕ್ಕೆ ಸಂಬಂಧಿಸಿದ ತನಿಖಾ ವರದಿಗಳನ್ನು ಬಹಿರಂಗಗೊಳಿಸಲಾಯಿತು.
* ಹಿಂದೂ ಪತ್ರಕರ್ತ ಚಿತ್ರಾ ಸುಬ್ರಮಣ್ಯಂ ಅವರು 350 ಕ್ಕೂ ಅಧಿಕ ದಾಖಲೆಗಳನ್ನು ಸಂಗ್ರಹಿಸಿದರು.
* ನಂತರ ಇಂಡಿಯನ್ ಎಕ್ಸ್ ಪ್ರೆಸ್ ಹಾಗೂ ಸ್ಟೇಟ್ಸ್ ಮನ್ ಅನೇಕ ವರದಿಗಳನ್ನು ಪ್ರಕಟಿಸಿತು.

ಹಗರಣದ ಪ್ರಮುಖ ಆರೋಪಿಗಳು ಯಾರು?

ಹಗರಣದ ಪ್ರಮುಖ ಆರೋಪಿಗಳು ಯಾರು?

* ಸ್ವೀಡನ್ ಹಾಗೂ ಭಾರತದ ನಡುವೆ ಡೀಲ್ ಕುದುರಿಸಲು ಬಂದ ಮಧ್ಯವರ್ತಿ ಇಟಲಿ ಮೂಲದ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಪ್ರಮುಖ ಆರೋಪಿ.
* 1999ರಲ್ಲಿ ಕ್ವಟ್ರೋಚಿ, ವಿನ್ ಛಡ್ಡಾ, ರಾಜೀವ್ ಗಾಂಧಿ, ರಕ್ಷಣಾ ಕಾರ್ಯದರ್ಶಿ ಎಸ್ ಕೆ ಭಟ್ನಾಗರ್ ಇನ್ನಿತರರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಹಾಕಿತ್ತು.
* 2002ರಲ್ಲಿ ದೆಹಲಿ ಹೈಕೋರ್ಟ್ ನಿಂದ ಪ್ರಕರಣದ ವಿಚಾರಣೆ ರದ್ದು.
* 2003ರಲ್ಲಿ ಸುಪ್ರೀಂಕೋರ್ಟಿನಿಂದ ಮತ್ತೆ ವಿಚಾರಣೆ.
* ಅರ್ಜೆಂಟೀನಾದಲ್ಲಿದ್ದ ಕ್ವಟ್ರೋಚಿಯನ್ನು ಭಾರತಕ್ಕೆ ಕರೆ ತರುವ ವಿಫಲ.
* 2011ರಲ್ಲಿ ಆರೋಪ ಮುಕ್ತನಾದ ಕ್ವಟ್ರೋಚಿ 2013ರಲ್ಲಿ ಮಿಲಾನ್ ನಲ್ಲಿ ಅಸುನೀಗಿದ.

ಹಗರಣದ ತನಿಖೆ ಯಾವ ಸ್ಥಿತಿಯಲ್ಲಿದೆ

ಹಗರಣದ ತನಿಖೆ ಯಾವ ಸ್ಥಿತಿಯಲ್ಲಿದೆ

* ಪ್ರಕರಣದ ತನಿಖೆ, ವಿಚಾರಣೆ ಇನ್ನೂ ಜಾರಿಯಲ್ಲಿದೆ.
* ಹಗರಣ ಬೆಳಕಿಗೆ ಬಂದ ಮೇಲೆ ಬೋಫೋರ್ಸ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. 1999ರಲ್ಲಿ ಪಟ್ಟಿಯಿಂದ ಮುಕ್ತಗೊಳಿಸಲಾಯಿತು.
* ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬೋಫೋರ್ಸ್ ಗನ್ ಹಾಗೂ ಫಿರಂಗಿಗಳನ್ನು ಯಥೇಚ್ಛವಾಗಿ ಬಳಸಲಾಯಿತು.
* ಇಂಟರ್ ಪೋಲ್ ನಿಂದಲೂ ರೆಡ್ ಕಾರ್ನರ್ ನೋಟಿಸ್ ಪಡೆದಿದ್ದ ಇಟಲಿ ಮೂಲದ ವ್ಯಾಪಾರಿ ಒಟ್ಟಾವಿಯೋ ಕ್ವಟ್ರೋಚಿ ಎಲ್ಲಾ ಆರೋಪಗಳಿಂದ ಮುಕ್ತರಾದರು.

English summary
The President claimed that Bofors should not be called "a scam or scandal" as it was not proved to be a scandal in any court of the country. He rather claimed that it was a "media trial' which actually established the case as a "scandal". What's the controversy all about: Explained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X