ಕೇರಳದ ಕಾನ್ವೆಂಟ್ ನ ಬಾವಿಯಲ್ಲಿ 'ಶಿಕ್ಷಕಿ' ಶವ ಪತ್ತೆ
ತಿರುವನಂತಪುರಂ, ಸೆಪ್ಟೆಂಬರ್ 09: ಕಣ್ಣೂರಿನ ಕಾನ್ವೆಂಟ್ ಶಾಲೆಯೊಂದರ ಬಾವಿಯಲ್ಲಿ ಶಿಕ್ಷಕಿ ಸಿಸ್ಟರ್ ಸೂಸನ್ ಅವರ ಶವ ಪತ್ತೆಯಾಗಿದೆ.
ಮೃತರನ್ನು 54ವರ್ಷ ವಯಸ್ಸಿನ ಸೂಸನ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಸೈಂಟ್ ಸ್ಟೀಫನ್ ಶಾಲೆ, ಪಥನಪುರಂನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೌಂಟ್ ಟಬೋರ್ ಕಾನ್ವೆಂಟ್ ಸ್ವಾಮ್ಯದ ಈ ಶಾಲೆಯ ಬಾವಿಯಲ್ಲಿ ರಕ್ತವನ್ನು ಕಂಡ ಸ್ಥಳೀಯ್ ಕೆಲಸಗಾರರು ತಕ್ಷಣವೇ ಸಂಬಂಧಪಟ್ಟವರಿಗೆ ವಿಷಯ ತಿಳಿಸಿದ್ದಾರೆ.

ಕಳೆದ 12 ವರ್ಷಗಳಿಂದ ಈ ಕಾನ್ವೆಂಟ್ ನಲ್ಲಿ ಶಿಕ್ಷಕಿಯಾಗಿದ್ದ ಸೂಸನ್ ಅವರ ಸಾವಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಕೊಟ್ಟಾಯಂ ಮೂಲದ ಮಲಕಾರ ಸಾಂಪ್ರದಾಯಿಕ ಸಿರಿಯನ್ ಸಂಸ್ಥೆಯು ಇಲ್ಲಿನ ಶಾಲೆ ಹಾಗೂ ಕಾನ್ವೆಂಟ್ ನಡೆಸುತ್ತಿದ್ದಾರೆ.
ಇತ್ತೀಚೆಗೆ ಕ್ರೈಸ್ತ ಸನ್ಯಾಸಿನಿಯರು ತಮ್ಮ ಮೇಲಿನ ದೈಹಿಕ, ಮಾನಸಿಕ ದೌರ್ಜನ್ಯ ಕುರಿತಂತೆ ಇದೇ ಮೊದಲ ಬಾರಿಗೆ ಬೀದಿಗಿಳಿದು ಬಹಿರಂಗವಾಗಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಜಲಂಧರ್ ನ ಬಿಷಪ್ ಫ್ರಾಂಕೋ ಮುಲಕ್ಕಲ್ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಆರೋಪವನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಕ್ರೈಸ್ತ ಸನ್ಯಾಸಿನಿಯರು ಆಪಾದಿಸಿದ್ದಾರೆ.












Click it and Unblock the Notifications