Blue Corner Notice: ಪ್ರಜ್ವಲ್ ವಿರುದ್ಧ 'ಬ್ಲೂ ಕಾರ್ನರ್ ನೊಟೀಸ್': ಹೀಗಂದ್ರೇನು?, ಗ್ರೀನ್,ರೆಡ್, ಬ್ಲಾಕ್ ನೋಟಿಸ್ ಏನಿವು?
ನವದೆಹಲಿ, ಮೇ 05: ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಕೇಸ್ ಹೊರ ಬರುತ್ತಿದ್ದಂತೆ ಏಪ್ರಿಲ್ 28ರ ರಾತ್ರಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಗೆ ಓಡಿ ಹೋದರು. ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಪ್ರಜ್ವಲ್ ವಿರುದ್ಧ 'ಬ್ಲೂ ಕಾರ್ನರ್ ನೋಟಿಸ್' (Blue Corner Notice) ಜಾರಿ ಮಾಡಿದ್ದಾರೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡುವ ಮೂಲಕ ದೇಶ ಬಿಟ್ಟಿರುವ ಪ್ರಜ್ವಲ್ ರೇವಣ್ಣಗೆ ಬಲೆ ಬೀಸಿದೆ. ಹಾಗಾದ್ರೆ ಈ 'ಬ್ಲೂ ಕಾರ್ನರ್ ನೋಟಿಸ್' ಎಂದರೇನು, ಮತ್ತೆ ಯಾವೇಲ್ಲ ನೋಟಿಸ್‌ಗಳಿವೆ, ಯಾರಿಗೆಲ್ಲ ಅನ್ವಯವಾಗಲಿವೆ? ಎಂಬ ಮಾಹಿತಿ ಇಲ್ಲಿ ತಿಳಿಯೋಣ.

ಬ್ಲೂ ಕಾರ್ನರ್ ನೋಟಿಸ್
ನೀಲಿ ಅಥವಾ ನೀಲಿ (ಬ್ಲೂ) ಕಾರ್ನರ್ ನೋಟಿಸ್‌ನ ಸೂಚನೆಯು ಇಂಟರ್‌ಪೋಲ್‌ನ ಕೋಡೆಡ್ ನೋಟೀಸ್‌ಗಳ ಒಂದು ಭಾಗವಾಗಿದೆ. ಈ ನೋಟಿಸ್ ಜಾರಿಯಾದರೆ, ಜಗತ್ತಿನಾದ್ಯಂತ ಮಾಹಿತಿ, ಎಚ್ಚರಿಕೆಗಳು ಮತ್ತು ಮನವಿಗಳನ್ನು ಬೇರೆ ಬೇರೆ ದೇಶಗಳ ಅಧಿಕಾರಿಗಳಿಗೆ ರವಾನಿಸಿದಂತಾಗುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು, ಅತೀ ಮುಖ್ಯ ನಿರ್ಣಾಯಕ ಅಪರಾಧಗಳ ಕುರಿತು ಮಾಹಿತಿ ಹಂಚಿಕೆಗೆ ಈ ನೋಟಿಸ್ ಸಹಕಾರಿಯಾಗಲಿದೆ. ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚುವರಿ ಮಾಹಿತಿ ಸಂಗ್ರಹಿಸಲು 'ನೀಲಿ ನೋಟಿಸ್' ಸಹಾಯ ಮಾಡುತ್ತದೆ.
ಬ್ಲೂ ಕಾರ್ನರ್ ನೋಟಿಸ್ ಗಳಂತೆ ಒಟ್ಟು 07 ಏಳು ವಿಧದ ನೋಟಿಸ್‌ಗಳನ್ನು ಸಂದರ್ಭಕ್ಕೆ ತಕ್ಕಂತೆ ತನಿಖಾಧಿಕಾರಿಗಳು, ಇಲ್ಲವೇ ಸಂಬಂಧಿಸಿದಂತೆ ಸಂಸ್ಥೆ, ಪ್ರಾಧಿಕಾರಗಳು ಜಾರಿಗೊಳಿಸಬಹುದು.
'ಕೆಂಪು ನೋಟೀಸ್', 'ಹಳದಿ ನೋಟೀಸ್', 'ಬ್ಲೂ ನೋಟಿಸ್', 'ಬ್ಲ್ಯಾಕ್ ನೋಟಿಸ್', 'ಗ್ರೀನ್ ನೋಟಿಸ್', 'ಆರೆಂಜ್ ನೋಟಿಸ್' ಮತ್ತು 'ಪರ್ಪಲ್ ನೋಟಿಸ್' ಎಂದು ಏಳು ನೋಟಿಸ್‌ಗಳು ಇವೆ ಇವು ಒಂದಕ್ಕೊಂದು ಭಿನ್ನ ಅರ್ಥ ನೀಡುತ್ತವೆ. ಈ ನೋಟಿಸ್‌ಗಳ ಅರ್ಥದ ಕುರಿತು ಮಾಹಿತಿ ಮುಂದೆ ಓದಿ.
ರೆಡ್ ನೋಟಿಸ್ (Red Notice) ಅರ್ಥ
ಅಪರಾಧ ಚಟುವಟಿಕೆಯಲ್ಲಿ ತೊಡಗಿದ ವ್ಯಕ್ತಿಯ ಸ್ಥಳ ಹುಡುಕಲು, ಇಲ್ಲವೇ ಆತನನ್ನು ಬಂಧಿಸಲು ಅಥವಾ ಪ್ರಾಸಿಕ್ಯೂಷನ್ ಒಳಪಡಿಸಲು ಅರ್ಥವನ್ನು ಇದು ಸೂಚಿಸುತ್ತದೆ.
ಹಳದಿ ನೋಟಿಸ್ (Yellow Notice)
ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ನೋಟಿಸ್ ಇದಾಗಿದೆ. ಸಾಮಾನ್ಯವಾಗಿ ಅಪ್ರಾಪ್ತ ವಯಸ್ಕರು, ಅಥವಾ ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳನ್ನು ಗುರುತಿಸಲು ಪ್ರಕರಣಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ.
ಕಪ್ಪು ನೋಟೀಸ್ (Black Notice)
ಅಪರಿಚಿತ ವ್ಯಕ್ತಿಯ ದೇಹಗಳ ಬಗ್ಗೆ ಮಾಹಿತಿ ಪಡೆಯಲು ಈ ಕಪ್ಪು ನೋಟಿಸ್ ಅಧಿಕಾರಿಗಳ ಸಹಾಯಕ್ಕೆ ಬರಲಿದೆ.
ಹಸಿರು ಸೂಚನೆ (Green Notice)
ವ್ಯಕ್ತಿಯ ಅಪರಾಧ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಲು, ಅಲ್ಲಿ ವ್ಯಕ್ತಿಯನ್ನು ಸಾರ್ವಜನಿಕ ಸುರಕ್ಷತೆಗೆ ಸಂಭವನೀಯ ಬೆದರಿಕೆ ಎಂದು ಪರಿಗಣಿಸಲಾಗುತ್ತದೆ.

ಕಿತ್ತಳೆ ಬಣ್ಣದ ಸೂಚನೆ (Orange Notice)
ಸಾರ್ವಜನಿಕ ಸುರಕ್ಷತೆಗೆ ಗಂಭೀರ ಮತ್ತು ಸನ್ನಿಹಿತ ಬೆದರಿಕೆಯನ್ನು ಪ್ರತಿನಿಧಿಸುವ ನೋಟಿಸ್ ಇದಾಗಿದೆ. ಇದರಿಂದ ಘಟನೆ, ವ್ಯಕ್ತಿ, ವಸ್ತು ಅಥವಾ ಪ್ರಕ್ರಿಯೆಯ ಬಗ್ಗೆ ಎಚ್ಚರಿಕೆ ನೀಡಲು ಇದನ್ನು ಜಾರಿಗೆ ಮಾಡಲಾಗುತ್ತದೆ.
ನೇರಳೆ ಸೂಚನೆ (Purple Notice)
ಅಪರಾಧಿ ಕೃತ್ಯಗಳಲ್ಲಿ ತೊಡಗುವವರು ಬಳಸುವ ವಿಧಾನ, ವಸ್ತುಗಳು, ಶಸ್ತ್ರಗಳು ಮರೆಮಾಚುವ ವಿಧಾನಗಳ ಕುರಿತು ಮಾಹಿತಿಯನ್ನು ಹುಡುಕುವಾಗ ಈ ನೇರಳೆ ನೋಟಿಸ್ ಅನ್ನು ಅಧಿಕಾರಿಗಳು ಚಾಲ್ತಿಗೆ ತರುತ್ತಾರೆ.
ನೋಟಿಸ್ ಜಾರಿಯಾದರೆ ಸದಸ್ಯ ದೇಶಗಳಿಗೆ ಮಾಹಿತಿ
ಸದಸ್ಯ ರಾಷ್ಟ್ರದ ಇಂಟರ್‌ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋದ ಮನವಿ ಮೇರೆಗೆ ಇಂಟರ್‌ಪೋಲ್‌ನ ಜನರಲ್ ಸೆಕ್ರೆಟರಿಯೇಟ್‌ನಿಂದ ಈ ನೋಟಿಸ್‌ಗಳನ್ನು ಜಾರಿಗೆ ಮಾಡಲಾಗುತ್ತದೆ. ಈ ನೋಟಿಸ್‌ಗಳು ಜಾರಿಯಾದರೆ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಮಾಹಿತಿ ಮತ್ತು ಎಚ್ಚರಿಕೆ ಸಂದೇಶ ತಲುಪುತ್ತದೆ.
ಸಾಮಾನ್ಯವಾಗಿ ಇಂಟರ್‌ನ್ಯಾಶನಲ್ ಕ್ರಿಮಿನಲ್ ಪೋಲೀಸ್ ಸಂಸ್ಥೆಯು ವಿಶ್ವಾದ್ಯಂತ ಪೊಲೀಸ್ ಸಹಕಾರ ಮತ್ತು ಅಪರಾಧ ನಿಯಂತ್ರಣವನ್ನು ಸುಗಮಗೊಳಿಸುತ್ತದೆ.
ಪ್ರಜ್ವಲ್ ರೇವಣ್ಣಗೆ 'ಬ್ಲೂ ಕಾರ್ನರ್ ನೋಟಿಸ್' ಜಾರಿ
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ, ಅಲ್ಲಿಂದ ಬೇರೆ ದೇಶಗಳಿಗೆ ತೆರಳಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ, ವಿಚಾರಣ ನಡೆಸಲು ತನಿಖಾ ಏಜೆನ್ಸಿಗಳು ಈ 'ನೀಲಿ ನೋಟೀಸ್' ಜಾರಿ ಮಾಡಿದ್ದಾರೆ. ಇದರಿಂದ ಪ್ರಜ್ವಲ್ ಯಾವುದೇ ದೇಶದಲ್ಲಿದ್ದರೂ ಮಾಹಿತಿ ಲಭ್ಯವಾಗುತ್ತದೆ.
ಪಾಸ್‌ಪೋರ್ಟ್ ಎಂಟ್ರಿ ಮೂಲಕ ಯಾವ ದೇಶದಲ್ಲಿದ್ದಾರೆ ಎಂದು ಪತ್ತೆ ಮಾಡಲಾಗುತ್ತದೆ. ಆಯಾ ದೇಶದ ಅಧಿಕಾರಿಗಳು ತನಿಖಾ ಏಜೆನ್ಸಿಯವರಿಗೆ ಸಹಾಯ ಮಾಡುತ್ತಾರೆ.
2019 ರಲ್ಲಿ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪಗಳ ನಡುವೆ ದೇಶದಿಂದ ಓಡಿಹೋಗಿದ್ದ ಪರಾರಿಯಾದ ದೇವಮಾನವ ಬೆಂಗಳೂರಿನ ಬಿಡದಿಯ ನಿತ್ಯಾನಂದನನ್ನು ಪತ್ತೆಹಚ್ಚಲು 'ಬ್ಲೂ ನೋಟಿಸ್' ಜಾರಿ ಮಾಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಪ್ರಜ್ವಲ್ ರೇವಣ್ಣ ಅವರಿಗೆ ನೀಲಿ ನೋಟಿಸ್ ಜಾರಿಯಾಗಿದ್ದು, ಯಾವ ಕ್ಷಣದಲ್ಲಾದರೂ ಅವರು ಬೆಂಗಳೂರಿಗೆ ಬರಬಹುದು. ನಾಳೆ ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಇದೆ. ಇದು ಮುಗಿದ ಬಳಿಕವೇ ಅವರು ಸ್ವದೇಶಕ್ಕೆ ಮರಳುವ ನಿರೀಕ್ಷೆಗಳು ಇವೆ. (ಮಾಹಿತಿ ಕೃಪೆ- ದಿ ಇಂಡಿಯನ್ ಎಕ್ಸ್‌ಪ್ರೆಸ್).
-
ಬೆಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications