Get Updates
Get notified of breaking news, exclusive insights, and must-see stories!

ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಸೆಳೆದ ಬಿಜೆಪಿಗೆ ಬಿಹಾರದಲ್ಲಿ ಜೆಡಿಯು ವಿಚಾರದಲ್ಲಿ ಮುಖಭಂಗ!

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದಾದ ಒಂದು ದಿನದಲ್ಲೇ ಕೇಂದ್ರೀಯ ತನಿಖಾ ದಳ (ಸಿಬಿಐ) ರೈಲ್ವೆಯಲ್ಲಿ ಹಗರಣ 'ಉದ್ಯೋಗಕ್ಕಾಗಿ ಭೂಮಿ'ಗೆ ಪೂರಕ ಚಾರ್ಜ್ ಶೀಟ್‌ನಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಹೆಸರನ್ನು ಸೇರಿಸಿದೆ.

ನೀವೊಮ್ಮೆ ರಾಷ್ಟ್ರ ರಾಜಕೀಯದ ಬಗ್ಗೆ ಸ್ವಲ್ಪ ತಿಳುವಳಿಕೆ ಹೊಂದಿದ್ದರೂ ಈ ಘಟನೆಯ ಪರಿಣಾಮ ಏನು ಎನ್ನುವುದನ್ನು ಸುಲಭವಾಗಿ ಊಹಿಸಬಹುದು. ಜೂನ್ 27ರಂದು ಭೋಪಾಲ್‌ನಲ್ಲಿ ಭಾಷಣ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಎನ್‌ಸಿಪಿ ನಾಯಕರು 70,000 ಕೋಟಿ ರೂಪಾಯಿಗಳ ಹಗರಣಗಳಲ್ಲಿ ಭಾಗಿಯಾಗಿದ್ದಾರೆ, ಅವರನ್ನು ಸುಮ್ಮನೆ ಬಿಡಲ್ಲ ಎಂದಿದ್ದರು.

BJPs Attempts to Replicate Ajit Pawar Moment

ಮಹಾರಾಷ್ಟ್ರದ ನೀರಾವರಿ, ಸಹಕಾರಿ ಮತ್ತು ಇತರ ಕ್ಷೇತ್ರಗಳಲ್ಲಿನ 'ವಂಚನೆ'ಗಳಿಗೆ ಸಂಬಂಧಿಸಿದಂತೆ ಅಜಿತ್ ಪವಾರ್ ಮತ್ತು ಅವರ ಪಕ್ಷದ ಇತರ ನಾಯಕರಿಗೆ ಕೇಂದ್ರ ತನಿಖಾ ಸಂಸ್ಥೆಗಳು ಬಿಸಿ ಮುಟ್ಟಿಸಿದವು. ಈ ಘಟನೆ ಬೆನ್ನಲ್ಲೇ ಅಜಿತ್ ಪವಾರ್ ತಮ್ಮ ಚಿಕ್ಕಪ್ಪ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಕೈಕೊಟ್ಟು ತಮ್ಮ ಎನ್‌ಸಿಪಿಯ ಎಂಟು ಶಾಸಕರ ಜೊತೆ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿ, ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದರು. ನಂತರ ಅವರು ಮಹಾರಾಷ್ಟ್ರ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.

ಬಿಜೆಪಿ ತೊಳೆಯುವ ಯಂತ್ರ!

ಅಜಿತ್ ಮತ್ತು ಅವರ ಬೆಂಬಲಿಗರು ಬಿಜೆಪಿಯ ತೊಳೆಯುವ ಯಂತ್ರಕ್ಕೆ ಹೋಗಿದ್ದು, ತಮ್ಮ ಕಳಂಕಗಳನ್ನು ತೊಡೆದುಹಾಕಿ ಹೊರಗಡೆ ಬರುತ್ತಾರೆ ಎಂದು ರಾಷ್ಟ್ರೀಯ ಜನತಾ ದಳದ ವಕ್ತಾರ ಮತ್ತು ಸಂಸದ ಮನೋಜ್ ಝಾ ಕಿಡಿ ಕಾರಿದ್ದಾರೆ. ಎನ್‌ಸಿಪಿಯಲ್ಲಿದ್ದಾಗ ಕಳಂಕಿತರು, ಭ್ರಷ್ಟರು ಆಗಿದ್ದ ಅವರು ಬಿಜೆಪಿ ಸರ್ಕಾರಕ್ಕೆ ಬೆಂಬಲ ಕೊಡುತ್ತಿದ್ದಂತೆ ಎಲ್ಲಾ ಆರೋಪಗಳಿಂದ ಮುಕ್ತವಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿಯು ಮಧ್ಯಪ್ರದೇಶ, ಕರ್ನಾಟಕ ಮತ್ತು ಗೋವಾದಲ್ಲಿ ಆಪರೇಷನ್ ಕಮಲ ಮಾಡುವ ಮೂಲಕ ಸರ್ಕಾರ ರಚನೆ ಮಾಡಿತ್ತು, ನಂತರ ಮಹಾರಾಷ್ಟ್ರದಲ್ಲಿ ಕೂಡ ಇದು ಯಶಸ್ವಿಯಾಗಿದೆ.

ಬಿಹಾರದಲ್ಲಿ ನಡೆಯದ ಬಿಜೆಪಿ ತಂತ್ರ

ಆದರೆ ಬಿಹಾರದಲ್ಲಿ ಬಿಜೆಪಿಯ ಈ ತಂತ್ರ ವಿಫಲವಾಗಿದ್ದು ಬಿಜೆಪಿಗೆ ಮುಖಭಂಗವಾಗಿದೆ. ಕಳೆದ ವರ್ಷವೇ ಬಿಜೆಪಿ ಇಲ್ಲಿ ಎರಡು ಬಾರಿ ಜೆಡಿ ಯು ಪಕ್ಷವನ್ನು ವಿಭಜಿಸಲು ವಿಫಲ ಪ್ರಯತ್ನಗಳನ್ನು ಮಾಡಿದೆ.

2022ರ ಜೂನ್-ಜುಲೈ ತಿಂಗಳಿನಲ್ಲಿ ಶಿವಸೇನೆ ಪಕ್ಷದಲ್ಲಿ ಏಕನಾಥ್ ಶಿಂಧೆ ಅವರನ್ನು ಬಂಡಾಯವೆಬ್ಬಿಸುವ ಮೂಲಕ ಶಿವಸೇನೆಯನ್ನು ವಿಭಜಿಸುವಲ್ಲಿ ಯಶಸ್ವಿಯಾಗಿದೆ. ನಂತರ ಜನತಾ ದಳ (ಯುನೈಟೆಡ್) [ಜೆಡಿ (ಯು)] ಅನ್ನು ಕೂಡ ಇದೇ ಮಾದರಿಯಲ್ಲಿ ವಿಭಜಿಸಲು ರಾಮಚಂದ್ರ ಪ್ರಸಾದ್ ಸಿಂಗ್ ಅವರನ್ನು ಬಳಸಿಕೊಳ್ಳಲು ಮುಂದಾಗಿತ್ತು. ಜೆಡಿಯು ಮುಖ್ಯಸ್ಥ ನಿತೀಶ್ ಆಗ ಮೋದಿ ಸಂಪುಟದಲ್ಲೇ ಸಚಿವರೂ ಆಗಿದ್ದರು.

ಈ ಬೆಳವಣಿಗೆ ನಂತರ ಬಿಜೆಪಿಗೆ ವಿದಾಯ ಹೇಳಿದ ನಿತೀಶ್ ಕುಮಾರ್ ಆರ್‌ಜೆಡಿ-ಕಾಂಗ್ರೆಸ್-ಎಡ ಮಹಾಮೈತ್ರಿಕೂಟವನ್ನು ಸೇರಿಕೊಂಡರು. ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಮಚಂದ್ರ ಪ್ರಸಾದ್ ಸಿಂಗ್ ಅವರನ್ನು ನೇಮಿಸಲು ನಿತೀಶ್ ಕುಮಾರ್ ನಿರಾಕರಿಸಿ ಅವರನ್ನು ಪಕ್ಷದಿಂದಲೇ ಹೊರಹಾಕಿದರು. ಈ ಮೂಲಕ ಬಿಜೆಪಿಯ ತಂತ್ರಗಳನ್ನು ವಿಫಲಗೊಳಿಸಿದರು.

ಬಿಹಾರದಲ್ಲಿ 45 ಶಾಸಕ ಬಲವನ್ನು ಹೊಂದಿರುವ ಜೆಡಿಯು ವಿಭಜನೆಗೆ ಪ್ರಯತ್ನ ನಡೆದವು. ಅಜಿತ್ ಪವಾರ್ ಬಂಡಾಯವೆದ್ದಂತೆ ಜೆಡಿಯು ಕೂಡ ವಿಭಜನೆಯಾಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದವು. ರಾಜ್ಯಸಭೆಯ ಉಪಸಭಾಪತಿ ಮತ್ತು ಜೆಡಿಯು ಸಂಸದ ಹರಿವಂಶ್ ನಾರಾಯಣ್ ಸಿಂಗ್ ಬಿಜೆಪಿ ಸೇರಲಿದ್ದು, ಅವರ ಜೊತೆ ಅನೇಕ ಶಾಸಕರು ಜೆಡಿಯು ತೊರೆದು ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿಗಳು ಈ ಊಹಾಪೋಹಗಳಿಗೆ ಬಲ ತುಂಬಿದವು.

ಜುಲೈ 3ರಂದು ಪಾಟ್ನಾದಲ್ಲಿ ಹರಿವಂಶ್ ನಿತೀಶ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇಬ್ಬರು ಒಂದೂವರೆ ಗಂಟೆ ಚರ್ಚೆ ನಡೆಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು, ಆದರೆ ಇಬ್ಬರು ಕೇವಲ 15 ನಿಮಿಷ ಚರ್ಚೆ ಮಾಡಿದ್ದರು ಎಂದು ಹೇಳಲಾಗಿದೆ. ಹರಿವಂಶ್ ನಾರಾಯಣ್ ಸಿಂಗ್ ಕಳೆದ ತಿಂಗಳು ನೂತನ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಪ್ರಧಾನಿಯನ್ನು ಹೊಗಳಿದಾಗಿನಿಂದಲೂ ಜೆಡಿಯು ಅವರ ಬಗ್ಗೆ ಒಲವು ತೋರಿಲ್ಲ.

ಸಿಂಗ್‌ ಅವರು ಬಿಜೆಪಿ ಬೆಂಬಲದೊಂದಿಗೆ ರಾಜ್ಯಸಭೆಯಲ್ಲಿ ಉಪಸಭಾಪತಿಯಾಗಿದ್ದಾರೆ ಮತ್ತು ಜೆಡಿ (ಯು) ನಲ್ಲಿ ಒಮ್ಮತದ ಪ್ರಕಾರ ಅವರನ್ನು ಏಕಾಏಕಿ ಸಾಂವಿಧಾನಿಕ ಹುದ್ದೆಯಿಂದ ಹೊರಹಾಕಲಾಗುವುದಿಲ್ಲ ಎಂದು ಹೇಳಲಾಗಿದೆ.

ವೈಯಕ್ತಿಕವಾಗಿ ಶಾಸಕರು, ಸಂಸದರ ಭೇಟಿ

ಈ ಘಟನೆ ನಂತರ ಎಚ್ಚೆತ್ತ ನಿತೀಶ್ ಕುಮಾರ್ ತಮ್ಮ ಎಲ್ಲಾ ಶಾಸಕರು, ಎಂಎಲ್ಸಿಗಳು ಮತ್ತು ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರನ್ನು ವೈಯಕ್ತಿಕವಾಗಿ ಭೇಟಿಯಾಗಲು ಪ್ರಾರಂಭಿಸಿದ್ದಾರೆ. ಜೆಡಿಯು ತೊರೆಯದಂತೆ ಎಲ್ಲರನ್ನೂ ಮನವೊಲಿಸುತ್ತಿರುವ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಲು ಉತ್ತೇಜಿಸಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಹೇಗೆ ಅಪಾಯಕಾರಿ ಎಂದು ವಿವರಿಸುತ್ತಿದ್ದಾರೆ.

ಶರದ್ ಪವಾರ್ ವಿಫಲವಾದ ಕಡೆ ನಿತೀಶ್ ಯಶಸ್ವಿಯಾಗಿದ್ದಾರೆ. ಜೆಡಿಯು ವಿಭಜಿಸಲು ಬಿಜೆಪಿಗೆ 30 ಶಾಸಕರ ಅಗತ್ಯವಿದೆ. ನಿತೀಶ್ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದು, ಬಿಜೆಪಿಗೆ ಜೆಡಿಯು ವಿಭಜನೆ ಮಾಡುವುದು ಅಸಾಧ್ಯ ಎನಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+