ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ ವಿಶ್ವಾಸ ಮತ ಸಾಬೀತು
ಮಣಿಪುರ ವಿಧಾನಸಭೆಯಲ್ಲಿ ಸೋಮವಾರ ಬಿಜೆಪಿ ವಿಶ್ವಾಸ ಮತ ಸಾಬೀತುಪಡಿಸಿದೆ. 33 ಶಾಸಕರ ಬೆಂಬಲದೊಂದಿದೆ. ಮೊದಲ ಬಾರಿಗೆ ಮಣಿಪುರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ ಕೇಸರಿ ಪಕ್ಷ. ಬೈರೇನ್ ಸಿಂಗ್ ಮುಖ್ಯಮಂತ್ರಿ ಅಲ್ಲಿನ ಮುಖ್ಯಮಂತ್ರಿ
ಇಂಫಾಲ್, ಮಾರ್ಚ್ 20: ಮಣಿಪುರ ವಿಧಾನಸಭೆಯಲ್ಲಿ ಸೋಮವಾರ 33 ಶಾಸಕರ ಬೆಂಬಲದೊಂದಿಗೆ ಬಿಜೆಪಿ ಬಹುಮತ ಸಾಬೀತುಪಡಿಸಿದೆ. ಎನ್. ಬೈರೇನ್ ಸಿಂಗ್ ಮುಖ್ಯಮಂತ್ರಿಯಾಗಿ ಮಾರ್ಚ್ 15ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಅವರೀಗ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಿದ್ದಾರೆ.
ಬಿಜೆಪಿಯ ಯುಮ್ನಮ್ ಖೇಮ್ ಚಂದ್ ಸಿಂಗ್ ಸ್ಪೀಕರ್ ಆಗಿ ಆಯ್ಕೆ ಆಗಿದ್ದಾರೆ. ಹದಿನೈದು ವರ್ಷಗಳ ಕಾಲ ಮಣಿಪುರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಒಕ್ರಾನ್ ಇಬೋಬಿ ಸಿಂಗ್ 2002ರಿಂದ ಮುಖ್ಯಮಂತ್ರಿಯಾಗಿದ್ದರು. 60 ಸಂಖ್ಯಾಬಲದ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ 33 ಶಾಸಕರ ಬೆಂಬಲ ಪಡೆದಿದೆ.[ಕಾಂಗ್ರೆಸ್ ಗೆ ಮಣಿಪುರದಲ್ಲಿ ಗುಣಿ ತೋಡಿದ ಹಿಮಂತ ಬಿಸ್ವಾ ಶರ್ಮಾ ಯಾರು?]

ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 21 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು. ಎನ್ ಪಿಪಿ, ಎನ್ ಪಿಎಫ್, ಎಲ್ ಜೆಪಿ, ಪಕ್ಷೇತರ ಅಭ್ಯರ್ಥಿ, ತೃಣಮೂಲ ಕಾಂಗ್ರೆಸ್ ಶಾಸಕ ಹಾಗೂ ಕಾಂಗ್ರೆಸ್ ನಿಂದ ಗೆದ್ದು, ಆ ನಂತರ ಬಿಜೆಪಿಯನ್ನು ಬೆಂಬಲಿಸಿದ ಶ್ಯಾಮ್ ಕುಮಾರ್- ಹೀಗೆ ವಿವಿಧ ಪಕ್ಷಗಳು, ಪಕ್ಷೇತರರ ಬೆಂಬಲ ಪಡೆದು ಬಿಜೆಪಿ ಅಧಿಕಾರ ಹಿಡಿದಿದೆ.
ಶ್ಯಾಮ್ ಕುಮಾರ್ ಗೆ ಬೈರೇನ್ ಸಿಂಗ್ ನೇತೃತ್ವದ ಸರಕಾರದಲ್ಲಿ ಮಂತ್ರಿ ಪದವಿ ಸಿಕ್ಕಿದೆ.












Click it and Unblock the Notifications