Get Updates
Get notified of breaking news, exclusive insights, and must-see stories!

ಬನ್ಸಾಲಿಯ ಪದ್ಮಾವತಿ ವಿರುದ್ಧ ಗುಜರಾತಿ ಬಿಜೆಪಿ ಆಕ್ರೋಶವೇಕೆ?

ಅಹಮದಾಬಾದ್, ನವೆಂಬರ್ 03: ಗುಜರಾತಿನಲ್ಲಿ ವಿಧಾನಸಭೆ ಚುನಾವಣೆ ಮುಗಿಯುವ ತನಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬಿಜೆಪಿ ಮನವಿ ಮಾಡಿದೆ.

ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಕ್ಕೂ ಮುನ್ನ ರಜಪೂತ ಸಮುದಾಯದ ಪ್ರತಿನಿಧಿಗಳ ಮುಂದೆ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡುವಂತೆ ಕೋರಲಾಗಿದೆ.

BJP seeks stay on Bhansali’s Padmavathi ahead of Gujarat elections

ರಜಪೂತರು, ಕ್ಷತ್ರೀಯ ಸಮುದಾಯದವರು ಈ ಚಿತ್ರಕ್ಕೆ ಆಕ್ಷೇಪ ವ್ಯಕ್ತ ಪಡಿದ್ದಾರೆ. ಇತಿಹಾಸವನ್ನು ತಿರುಚಲಾಗಿದ್ದು, ರಾಣಿ ಪದ್ಮಾವತಿಯ ಬಗ್ಗೆ ಆಕ್ಷೇಪಾರ್ಹ ಸನ್ನಿವೇಶಗಳಿವೆ, ಅಲ್ಲಾದ್ದೀನ್ ಖಿಲ್ಜಿಯನ್ನು ಪದ್ಮಾವತಿ ಒಮ್ಮೆ ಕೂಡಾ ಭೇಟಿ ಮಾಡಿರಲಿಲ್ಲ.

ಆದರೆ, ಚಿತ್ರದಲ್ಲಿ ಈ ಬಗ್ಗೆ ದೃಶ್ಯಗಳಿವೆ. ಸಮುದಾಯದ ಭಾವನೆಗೆ ಧಕ್ಕೆ ಉಂಟಾಗುವ ದೃಶ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಹೀಗಾಗಿ, ಚಿತ್ರಮಂದಿರಗಳಲ್ಲಿ ಬಿಡುಗಡೆಗೂ ಮುನ್ನ ಸಮುದಾಯದವರ ಮುಂದೆ ಪ್ರದರ್ಶನಗೊಳ್ಲಲಿ ಎಂದು ಗುಜರಾತ್ ಬಿಜೆಪಿ ವಕ್ತಾರ ಜಡೇಜ ಅವರು ಹೇಳಿದ್ದಾರೆ.

ಈ ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್ 01 ಎಂದು ಹೇಳಲಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯ ಮತದಾನ ದಿನಾಂಕಗಳು ಡಿಸೆಂಬರ್ 9 ಹಾಗೂ 14ರಂದು ಎಂದು ನಿಗದಿಯಾಗಿವೆ. ಹೀಗಾಗಿ, ಚುನಾವಣೆ ಮುಗಿಯುವ ತನಕ ಚಿತ್ರದ ಬಿಡುಗಡೆ ಸ್ಥಗಿತಗೊಳಿಸುವುದು ಉತ್ತಮ ಎಂದು ಜಡೇಜ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+