ನಕಲಿ ನೋಟು ದಂಧೆ: ಕೇರಳ ಬಿಜೆಪಿ ಯುವಮೋರ್ಚಾ ಮುಖಂಡನ ಬಂಧನ
ತಿರುವನಂತಪುರಂ, ಜೂನ್ 23 : ನಕಲಿ ನೋಟು ದಂಧೆ ನಡೆಸುತ್ತಿದ್ದ ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಮುಖಂಡನನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ನಕಲಿ ನೋಟು ಮುದ್ರಿಸುತ್ತಿದ್ದ ಕೇರಳದ ತ್ರಿಶ್ಶೂರಿನಲ್ಲಿ ಬಿಜೆಪಿ ಯುವಮೋರ್ಚಾ ಮುಖಂಡ ರಾಕೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿದ್ದ ಸುಮಾರು 1.5 ಲಕ್ಷ ರು. ನಕಲಿ ನೋಟು, ನೋಟು ಮುದ್ರಣದ ಯಂತ್ರ ಹಾಗೂ ಮುದ್ರಣಕ್ಕೆ ಬಳಸಲಾಗುತ್ತಿದ್ದ ಇಂಕ್ ನ್ನು ವಶಪಡಿಸಿಕೊಂಡಿದ್ದಾರೆ.

ರಾಕೇಶ್ ಹಾಗೂ ಆತನ ಸಹೋದರ ರಾಜೀವ್ ನಕಲಿ ನೋಟಿನ ದಂಧೆ ನಡೆಸುತ್ತಿದ್ದು, ರಾಜೀವ ನಾಪತ್ತೆಯಾಗಿದ್ದಾನೆ. ಈ ಇಬ್ಬರು ಬಿಜೆಪಿಯ ಯುವಮೊರ್ಚದ ಮುಖಂಡರಾಗಿದ್ದಾರೆ ಎಂದು ತ್ರಿಶ್ಶೂರ್ ಜಿಲ್ಲಾ ಪೊಲೀಸ್ ಅಧಿಕಾರಿ ಎನ್.ವಿಜಯ್ ಕುಮಾರ್ ತಿಳಿಸಿದ್ದಾರೆ.
ರಾಕೇಶ್ ಮತ್ತು ರಾಜೀವ್ ನಕಲಿ ನೋಟು ದಂಧೆಯಲ್ಲಿ ತೊಡಗಿದ್ದಾರೆಂದು ತಿಳಿಯುತ್ತಿದ್ದಂತೆಯೇ ಕೇರಳ ಬಿಜೆಪಿ ಇವರನ್ನು ಪಕ್ಷದಿಂದ ಅಮಾನತು ಮಾಡಿದೆ.












Click it and Unblock the Notifications