• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲ : ಕಾಂಗ್ರೆಸ್

By Mahesh
|

ನವದೆಹಲಿ, ಮಾರ್ಚ್ 15: ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದಿಂದ ಭಾರತೀಯ ಜನತಾ ಪಕ್ಷಕ್ಕೆ ಭಾರಿ ಮುಖಭಂಗ ಅನುಭವಿಸಿದೆ. ಈ ಮೂಲಕದ 2014ರಲ್ಲಿ ಲೋಕಸಭೆಯಲ್ಲಿದ್ದ ಬಿಜೆಪಿಯ ಬಲ ಈಗ ತಗ್ಗಿದೆ. ಈ ಕುರಿತಂತೆ ಕಾಂಗ್ರೆಸ್ ನಾಯಕರೊಬ್ಬರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಈ ಫಲಿತಾಂಶ ಹಿನ್ನಡೆ ಹಿಂದಿರುವುದಂತೂ ನಿಜ.

BJPs tally in Lok Sabha down to 272 from 282 in 2014

ಗೋರಕ್ಪುರ, ಫುಲ್ ಪೂರ್ ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡ ಬಳಿಕ ಬಿಜೆಪಿ, ಲೋಕಸಭೆಯಲ್ಲಿ ತಾನು ಹೊಂದಿದ್ದ 282 ಸ್ಥಾನಗಳಿಂದ 274 ಸ್ಥಾನಕ್ಕೆ ಕುಸಿದಿದೆ. ಸಾಮಾನ್ಯ ಬಹುಮತಕ್ಕೆ ಬಿಜೆಪಿ 272 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿ ಸರಳ ಬಹುಮತ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ವಾದಿಸಿದೆ.

ರೆಬೆಲ್ ಸಂಸದರು ಕೀರ್ತಿ ಆಜಾದ್, ಬಿಜೆಪಿ ಶತ್ರುಘ್ನ ಸಿನ್ಹಾ ಸೇರಿದಂತೆ ಕೆಲ ಸಂಸದರ ಉದಾಹರಣೆಯನ್ನು ನೀಡಿರುವ ಕಾಂಗ್ರೆಸ್, ಬಿಜೆಪಿಗೆ ಆಘಾತಕಾರಿ ಸಂದೇಶ ಕಳಿಸಿದೆ.

ಬಿಜೆಪಿ 2017-18ರಲ್ಲಿ ಬಿಜೆಪಿ ಹತ್ತು ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ರಣಜಿತ್ ಸಿಂಗ್ ಸುರ್ಜೀಲಾ ಹೇಳಿದ್ದಾರೆ. ಉಪಚುನಾವಣೆಯ ಫಲಿತಾಂಶಗಳು ಬಿಜೆಪಿಯ ಕೆಟ್ಟ ಆಳ್ವಿಕೆಯ ಮೇಲೆ ಜನರು ಕೋಪಗೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

2017-18ರಲ್ಲಿ ಅಮೃತಸರ್, ಶ್ರೀನಗರ, ಮಲಪ್ಪುರಂ, ಗುರ್ ದಾಸ್ ಪುರ್, ಅಜ್ಮೆರ್, ಅಳ್ವಾರ್, ಉಲ್ಬೇರಿಯಾ, ಗೋರಖ್ ಪುರ್, ಫುಲ್ಪುರ್ ಹಾಗೂ ಅರಾರಿಯಾ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿದೆ.

ಲೋಕಸಭೆಯಲ್ಲಿ ಬಲಾಬಲ:
ಬಿಜೆಪಿ -272 ಇದ್ದರೂ ಎನ್ಡಿಎ ಮೈತ್ರಿ ಪಕ್ಷಗಳ ಬಲದಿಂದ 331 ಸ್ಥಾನ ಹೊಂದಿದೆ. ಇದರಲ್ಲಿ ಬಿಜೆಪಿ ಕಡೆಯಿಂದ ಒಬ್ಬರು ನಾಮಾಂಕಿತ ಸದಸಸ್ಯರು, ಒಬ್ಬರು ಸ್ಪೀಕರ್ ಇದ್ದಾರೆ.

ಕಾಂಗ್ರೆಸ್ 48 ಸ್ಥಾನ ಹೊಂದಿದ್ದು, ಯುಪಿಎ ಬಲ 52ರಷ್ಟಿದೆ. ಈ ಎರಡೂ ಮೈತ್ರಿಕೂಟಕ್ಕೆ ಸೇರದ ಇತರೆ ಪಕ್ಷಗಳ ಸದಸ್ಯರು ಸೇರಿದಂತೆ 147 ಪ್ಲಸ್ 8 ಮಂದಿ ಕೂಡಾ ಇದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಏಪ್ರಿಲ್-ಮೇ 2019ರಲ್ಲಿ ನಡೆಯಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು lok sabha ಸುದ್ದಿಗಳುView All

English summary
The stunning blow to the BJP in the Uttar Pradesh by polls has reduced the party to 274 members in the Parliament, as per the Lok Sabha. The BJP needs 272 MPs for a simple majority on its own.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more