ಅಮಿತ್ ಶಾ ನೇತೃತ್ವದಲ್ಲಿ ರಾಷ್ಟ್ರಾದ್ಯಂತ ಇಂದು ಬೈಕ್ ರ‍್ಯಾಲಿ

ಬೆಂಗಳೂರು, ಮಾರ್ಚ್ 2: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಇಂದು ರಾಷ್ಟ್ರಾದ್ಯಂತ ಕಮಲ ಸಂದೇಶ ಬೈಕ್ ರ‍್ಯಾಲಿಯನ್ನು ಆಯೋಜನೆ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಭೋಪಾಲ್‌ನಲ್ಲಿ ಹಾಗೂ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ಪೂನಂ ಮಹಾ ಜನ್‌ ಅವರು ಮಥುರಾದಲ್ಲಿ ರ‍್ಯಾಲಿ ಗೆ ಚಾಲನೆ ನೀಡಲಿದ್ದಾರೆ. ಒಟ್ಟು 3800 ಬೈಕ್‌ಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿವೆ. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಬೆಳಗ್ಗೆ 11 ಗಂಟೆಗೆ ತುಮಕೂರಿನಲ್ಲಿಬೈಕ್‌ ರ‍್ಯಾಲಿ ಗೆ ಚಾಲನೆ ದೊರೆತಿದೆ.

BJP President Amit Shah to hold bike rally in Madhya Pradeshs Shahdol today

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1,000 ಬೈಕ್‌: ಪ್ರತಿ ಬೂತ್‌ನಲ್ಲಿ 3ರಿಂದ 5 ಮಂದಿಯನ್ನು ಬೈಕ್‌ ರ‍್ಯಾಲಿ ಗೆ ಕರೆ ತರುವ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಕನಿಷ್ಠ 1,000 ಬೈಕ್‌ಗಳಲ್ಲಿ ರ್ಯಾಲಿ ನಡೆಸಬೇಕು.

BJP President Amit Shah to hold bike rally in Madhya Pradeshs Shahdol today

ನಗರ ಪ್ರದೇಶದಲ್ಲಿ 30 ಕಿ.ಮೀ.ಹಾಗೂ ಗ್ರಾಮೀಣ ಪ್ರದೇಶದಲ್ಲಿ 100ರಿಂದ 130 ಕಿ.ಮೀ.ವರೆಗೆ ರ‍್ಯಾಲಿ ನಡೆಸಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಜನರನ್ನು ಸೆಳೆಯಬೇಕು.

ಎಂದು ಹಿರಿಯ ನಾಯಕರುಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಅವರು ಹುಬ್ಬಳ್ಳಿಯಲ್ಲಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ, ಶಾಸಕ ಸಿ.ಟಿ.ರವಿ ಅವರು ಚಿಕ್ಕಮಗಳೂರಿನಲ್ಲಿ,ಸಂಸದೆ ಶೋಭಾ ಕರಂದ್ಲಾಜೆ ಅವರು ತರೀಕೆರೆಯಲ್ಲಿ, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಅವರು ಮುಧೋಳ, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರುಕಲಬುರಗಿಯಲ್ಲಿ, ಸಂಸದ ಪ್ರತಾಪ್‌ ಸಿಂಹ ಅವರು ಪಿರಿಯಾಪಟ್ಟಣ ಹಾಗೂಮಾಜಿ ಸಚಿವ ಸಿ.ಎಂ.ಉದಾಸಿ ಅವರು ಹಾನಗಲ್‌ ಕ್ಷೇತ್ರದಲ್ಲಿ ಬೈಕ್‌ ರ‍್ಯಾಲಿ ಗೆ ಚಾಲನೆ ನೀಡಲಿದ್ದಾರೆ.

BJP President Amit Shah to hold bike rally in Madhya Pradeshs Shahdol today

ಬೆಂಗಳೂರಿನಲ್ಲೂ ಬೈಕ್‌ ರ್ಯಾಲಿ: ಕೇಂದ್ರಸಚಿವ ಡಿ.ವಿ.ಸದಾನಂದಗೌಡ ಅವರು ದಾಸರಹಳ್ಳಿಯಿಂದ ವಿದ್ಯಾರಣ್ಯಪುರದವರೆಗೆ ಬೈಕ್‌ ರ‍್ಯಾಲಿ ಗೆ ಚಾಲನೆಕೊಡಲಿದ್ದಾರೆ. ಮಾಜಿ ಉಪಮುಖ್ಯ ಮಂತ್ರಿ ಆರ್‌.ಅಶೋಕ್‌ ಅವರು ಜಯನಗರದ ಸೌತ್‌ಎಂಡ್‌ವೃತ್ತ, ಸಂಸದರಾದ ಪಿ.ಸಿ.ಮೋಹನ್‌, ರಾಜೀವ್‌ ‌ಚಂದ್ರಶೇಖರ್‌ ಅವರು ಚಿಕ್ಕಲಾಲ್‌ಬಾಗ್‌ ಬಳಿ ಹಾಗೂಶಾಸಕ ಅರವಿಂದ ಲಿಂಬಾವಳಿಯವರು ಬೆಳ್ಳಂದೂರು ಬಳಿ ಬೈಕ್‌ರ‍್ಯಾಲಿ ಗೆ ಚಾಲನೆ ನೀಡುವರು ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+