• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

282 ಸೀಟುಗಳ ಸಾಧನೆಯನ್ನೂ ದಾಟುತ್ತೇವೆ: ಅಮಿತ್ ಶಾ ವಿಶ್ವಾಸ

|

ನವದೆಹಲಿ, ಮೇ 7: ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಡೆದ ಸೀಟುಗಳಿಗಿಂತಲೂ ಹೆಚ್ಚು ಪ್ರಮಾಣದ ಸೀಟುಗಳನ್ನು ಪಡೆದುಕೊಳ್ಳಲಿದೆ ಎಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಜನರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನಂಬಿಕೆ ಮತ್ತು ವಿಶ್ವಾಸ ಹೊಂದಿದ್ದಾರೆ. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಮತದಾರರಲ್ಲಿ ಉತ್ಸಾಹ ಇರುವುದನ್ನು ಕಾಣಬಹುದು. ಜತೆಗೆ ಮೋದಿ ಸರ್ಕಾರ ಎಲ್ಲ ವಲಯಗಳಲ್ಲಿಯೂ ಅಭಿವೃದ್ಧಿ ಸಾಧನೆ ಮಾಡಿದೆ. ಜಿಡಿಪಿ ಬೆಳವಣಿಗೆಯಲ್ಲಿ ದೇಶವನ್ನು ಸಾಕಷ್ಟು ಮುನ್ನಡೆಗೆ ಕೊಂಡೊಯ್ದಿದ್ದು, ದೇಶಕ್ಕೆ ಹೆಮ್ಮೆ ತಂದಿದೆ. ಅಲ್ಲದೆ, ದೇಶದ 125 ಕೋಟಿ ಜನರಿಗೆ ರಾಷ್ಟ್ರೀಯ ಭದ್ರತೆಯ ಭರವಸೆ ಮೂಡಿಸಿದೆ ಎಂದರು.

ಜಗನ್ ರೆಡ್ಡಿ ಕಿಂಗ್ ಮೇಕರ್! NDA ಬೆಂಬಲಿಸುವಂತೆ ಅಮಿತ್ ಶಾ ಮನವಿ?

ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ವಿಶೇಷ ಸಂದರ್ಶನ ನೀಡಿದ ಅಮಿತ್ ಶಾ, ಎಲ್ಲ ವಿಚಾರಗಳಲ್ಲಿಯೂ ಮೋದಿ ಸರ್ಕಾರ ಬಂದ ಬಳಿಕ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಾಗಿರುವುದನ್ನು ಜನರು ಕಂಡಿದ್ದಾರೆ ಎಂದರು. ಮೋದಿ ಅವರನ್ನು ಸಂವೇದನಾಶೀಲ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ನಾಯಕರನ್ನಾಗಿ ಜನರು ಗುರುತಿಸಿದ್ದಾರೆ ಎಂಬುದು ತಮ್ಮ ಭಾವನೆ ಎಂದು ಹೇಳಿದರು.

282ಕ್ಕಿಂತ ಅಧಿಕ ಸೀಟುಗಳು

282ಕ್ಕಿಂತ ಅಧಿಕ ಸೀಟುಗಳು

ಬಿಜೆಪಿ ಪಡೆದಿರುವ 282 ಸೀಟುಗಳ ಗಡಿಯನ್ನು ದೊಡ್ಡ ಮಟ್ಟದಲ್ಲಿ ಕ್ರಮಿಸಲಿದೆ. ಜತೆಗೆ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಾಗ ಇನ್ನಷ್ಟು ಹಿಗ್ಗುತ್ತದೆ. ಚುನಾವಣೆ ಮುಗಿದ ಭಾಗಗಳಲ್ಲಿ ನಮ್ಮ ವಿಶ್ಲೇಷಣೆಗಳ ಪ್ರಕಾರ ಒಟ್ಟಾರೆ ಸೀಟುಗಳ ಸಂಖ್ಯೆ ಹೆಚ್ಚುವುದು ಮಾತ್ರವಲ್ಲ, ಗೆಲುವಿನ ಅಂತರವೂ ಹೆಚ್ಚಲಿದೆ. ಪ್ರದೇಶವಾರು ಮಟ್ಟದಲ್ಲಿ ಬಿಜೆಪಿ/ಎನ್‌ಡಿಎ ವಿಸ್ತರಣೆಯಾಗಲಿದೆ ಎಂದರು.

ರಾಹುಲ್ ಬೇಸಿಗೆಯಲ್ಲಿ ಎಲ್ಲಿಗೆ ಹೋಗ್ತಾರೆ ಎಂದು ಸೋನಿಯಾಗೂ ಗೊತ್ತಿಲ್ಲ: ಅಮಿತ್ ಶಾ

ಉಗ್ರರ ಮೇಲಿನ ದಾಳಿಗಳು

ಉಗ್ರರ ಮೇಲಿನ ದಾಳಿಗಳು

1990ರ ದಶಕದಿಂದಲೂ ಸಾರ್ವಜನಿಕರು ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಿದ್ದಾರೆ. ಅವರು ರಕ್ಷಣಾ ಕಾರ್ಯತಂತ್ರಕ್ಕೆ ಒತ್ತು ನೀಡುವ ಮೂಲಕ ರಾಜತಾಂತ್ರಿಕವಾಗಿ ಭಾರತ ಇತರೆ ದೇಶಗಳೊಂದಿಗೆ ದಿಟ್ಟತನದಿಂದ ತನ್ನ ದೃಷ್ಟಿಕೋನವನ್ನು ಮಂಡಿಸುವುದನ್ನು ಹಾಗೂ ಅದೇ ಸಂದರ್ಭದಲ್ಲಿ ಭಯೋತ್ಪಾದನೆಯ ಮೂಲದ ಮೇಲೆ ಹೊಡೆತ ನೀಡುವುದನ್ನು ಅಪೇಕ್ಷಿಸುತ್ತಿದ್ದಾರೆ. ಇತ್ತೀಚಿನವರೆಗೂ ಭಯೋತ್ಪಾದನೆ ವಿರುದ್ಧ ನಡೆದ ಯುದ್ಧಗಳೆಲ್ಲವೂ ಭಾರತದ ನೆಲದಲ್ಲಿಯೇ ನಡೆದಿದ್ದವು. ಇದರಿಂದಾಗಿ ನಾವು ಲೆಕ್ಕವಿಲ್ಲಷ್ಟು ನಷ್ಟ ಅನುಭವಿಸಿದ್ದೇವೆ. ಮೋದಿ ಅವರ ನಾಯಕತ್ವದಲ್ಲಿಯೇ 2016ರ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಬಾಲಕೋಟ್ ವೈಮಾನಿಕ ದಾಳಿಯ ಮೂಲಕ ಭಯೋತ್ಪಾದಕರ ಉಗಮ ಸ್ಥಾನದ ಮೇಲೆ ಎರಡು ಬಾರಿ ದಾಳಿ ನಡೆಸಲಾಯಿತು ಎಂದು ಹೇಳಿದರು.

ಜಿನ್ಹಾಗೆ ಜಿಂದಾಬಾದ್ ಎಂದ ಶತ್ರುಘ್ನ ಸಿನ್ಹಾಗೆ ಶಾ ಟಾಂಗ್

ರಾಷ್ಟ್ರೀಯ ಭದ್ರತೆಗೆ ಆದ್ಯತೆ

ರಾಷ್ಟ್ರೀಯ ಭದ್ರತೆಗೆ ಆದ್ಯತೆ

ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ದೇಶದ ರಾಜತಾಂತ್ರಿಕ ನೀತಿಯನ್ನು ರಕ್ಷಣಾ ನೀತಿಯಿಂದ ಪ್ರತ್ಯೇಕಗೊಳಿಸಲಾಯಿತು. ಈ ಕಾರಣದಿಂದಲೇ ರಾಷ್ಟ್ರೀಯ ಭದ್ರತೆ ಮಹತ್ವದ ವಿಚಾರವಾಗಿರುವುದು. ಹಾಗೆಂದು ಇತರೆ ಸಂಗತಿಗಳನ್ನು ಬದಿಗೊತ್ತಿದ್ದೇವೆ ಎಂದಲ್ಲ. ಬಿಜೆಪಿ ಸರ್ಕಾರದ 22 ಕೋಟಿ ಫಲಾನುಭವಿಗಳಿಗೆ ತಮಗೆ ಕೊಡಬೇಕಾದುದ್ದನ್ನು ಮೋದಿ ನೀಡಿದ್ದಾರೆ ಎಂಬುದು ಗೊತ್ತಾಗಿದೆ. ವಂಚಿತರಿಗೆ ಮೋದಿ ಮಾತ್ರವೇ ತಮಗೆ ಕೊಡಬಲ್ಲರು ಎಂಬುದು ಅರ್ಥವಾಗಿದೆ. ಇವುಗಳ ಹೊರತಾಗಿ ಕೃಷಿ ಸುಧಾರಣೆ ಪ್ರಮಾಣ ಹೆಚ್ಚಳವಾಗಿದೆ. ನೀರಾವರಿ, ಮೂಲಸೌರ್ಕರ್ಯ ಅಭಿವೃದ್ಧಿ ವೃದ್ಧಿಸಿದೆ ಎಂದು ವಿವರಿಸಿದರು.

ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ಸ್

ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ಸ್

ತಾವೂ ಆರು ಸರ್ಜಿಕಲ್ ದಾಳಿಗಳನ್ನು ನಡೆಸಿರುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆಯಲ್ಲ ಎಂಬ ಪ್ರಶ್ನೆಗೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊರತಾಗಿ ಯಾರೂ ಹೇಳಿಲ್ಲ ಎಂದು ಶಾ ಉತ್ತರಿಸಿದರು. ಮನಮೋಹನ್ ಸಿಂಗ್ ಕೂಡ ಇದನ್ನು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ರಾಹುಲ್ ಗಾಂಧಿ ಅವರ ಹೆಜ್ಜೆಯನ್ನೇ ಕಾಂಗ್ರೆಸ್ ಅನುಸರಿಸಬೇಕು ಎಂದು ವ್ಯಂಗ್ಯವಾಗಿ ಹೇಳಿದರು.

ಮುದ್ರಾ ಯೋಜನೆಯಲ್ಲಿ ಸಾಲ

ಮುದ್ರಾ ಯೋಜನೆಯಲ್ಲಿ ಸಾಲ

ಸಣ್ಣ ದೇಶಗಳು ಬಳಸುವ ಮಾನದಂಡಗಳೊಂದಿಗೆ ನಮ್ಮ ಉದ್ಯೋಗ ಮಾಹಿತಿಯ ಡೇಟಾವನ್ನು ಹೋಲಿಸಿದಾಗ ಗೊಂದಲಗಳಿವೆ. ದೇಶದ ಎಲ್ಲ 125 ಕೋಟಿ ಮಂದಿಗೂ ಶಾಶ್ವತ ಉದ್ಯೋಗ ನೀಡುವುದು ಅಸಾಧ್ಯ. ಮುದ್ರಾ ಬ್ಯಾಂಕ್ ಮೂಲಕ ಈ ವರ್ಷ 18 ಕೋಟಿ ಸಾಲವನ್ನು ನೀಡಲಾಗಿದೆ. ಇದರಲ್ಲಿ 12 ಕೋಟಿ 50000 ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಸಣ್ಣ ಸಾಲ ಎಂದು ವಿರೋಧಪಕ್ಷಗಳು ವ್ಯಂಗ್ಯವಾಡಲು ಪ್ರಯತ್ನಿಸುತ್ತಿವೆ. ಒಬ್ಬ ವ್ಯಕ್ತಿ 50,000 ರೂಪಾಯಿಯನ್ನು ಸರಿಯಾಗಿ ಬಳಸಿಕೊಂಡು ದುಡಿಮೆದಾರ ಉದ್ಯೋಗಿಯಾಗಲು ಸಾಧ್ಯ. ಭಾರತದ 125 ಕೋಟಿ ಜನಸಂಖ್ಯೆಯ ಉದ್ಯೋಗ ಮಾಹಿತಿ ವಿಶ್ಲೇಷಣೆಯನ್ನು ನೆದರ್‌ಲೆಂಡ್ ಅಥವಾ ಇಂಗ್ಲೆಂಡ್ ಮಾನದಂಡ ಇಟ್ಟುಕೊಂಡು ಮಾಡಲು ಸಾಧ್ಯವಿಲ್ಲ. ಜತೆಗೆ ಸಾಮಾನ್ಯ ಜ್ಞಾನವೂ ಮುಖ್ಯ.

ಕೆಲಸ ಮಾಡುತ್ತಿರುವವರು ಯಾರು?

ಕೆಲಸ ಮಾಡುತ್ತಿರುವವರು ಯಾರು?

ರಸ್ತೆಗಳ ನಿರ್ಮಾಣ ವೇಗ 2.5 ಪಟ್ಟು ಹೆಚ್ಚಾಗಿದ್ದರೆ ಅದನ್ನು ರೋಬೋಟ್‌ಗಳು ಮಾಡುತ್ತಿವೆಯೇ? ರೈಲ್ವೆ ಮಾರ್ಗಗಳ ಕೆಲಸ 2.25 ಪಟ್ಟು ಹೆಚ್ಚಿದೆ. ನಮ್ಮ ರೈಲ್ವೆ ಜಾಲವನ್ನು ಅತಿಮಾನುಷ ಶಕ್ತಿಯುಳ್ಳವರು ಮಾಡುತ್ತಿದ್ದಾರೆಯೇ? ಒಂದು ಲಕ್ಷ ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ. ಇವುಗಳನ್ನು ಯಾರು ಮಾಡುತ್ತಿದ್ದಾರೆ? ಕಳೆದ ಐದು ವರ್ಷಗಳಲ್ಲಿ ಭಾರತ ಅತಿ ವೇಗದ ಆರ್ಥಿಕ ಬೆಳವಣಿಗೆಯನ್ನು ಹೊಂದಿರುವಾಗ ನಿರುದ್ಯೋಗದ ಹೆಚ್ಚಳ ಸಾಧ್ಯವಿರುತ್ತದೆಯೇ? ದೇಶದ ಅತಿ ದೊಡ್ಡ ಆರ್ಥಿಕ ದೇಶಗಳ ನಡುವೆ 11ನೆಯ ಸ್ಥಾನದಲ್ಲಿ ಭಾರತವನ್ನು ಮನಮೋಹನ್ ಸಿಂಗ್ ನಿಲ್ಲಿಸಿದ್ದರು. ನಾವು ಅದನ್ನು 6ನೇ ಸ್ಥಾನಕ್ಕೆ ಕೊಂಡೊಯ್ದಿದ್ದೇವೆ. ಮಾರ್ಚ್ ಅಂಕಿ ಅಂಶ ಹೊರಬಂದರೆ ನಾವು ಯುಕೆಯನ್ನು ಹಿಂದಿಕ್ಕುತ್ತೇವೆ. ಇದು ಉದ್ಯೋಗ ಸೃಷ್ಟಿ ಮಾಡುವುದಿಲ್ಲವೇ? ನಾನು ಪಿ ಚಿದಂಬರಂ ಅವರಂತೆ ಅರ್ಥಶಾಸ್ತ್ರಜ್ಞನಲ್ಲ. ಆದರೆ, ತಿಳಿವಳಿಕೆಯುಳ್ಳ ಸಾಮಾನ್ಯ ಮನುಷ್ಯ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha elections 2019: BJP President Amit Shah expressed confidence on the party will break 282 number seats in this election with a big margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more