ಈಶಾನ್ಯ ಆಹಾರ ಮಾರಾಟ: ನಾಗಾಲ್ಯಾಂಡ್ ವ್ಯಕ್ತಿಗಳ ಮೇಲೆ ಹಲ್ಲೆ ಖಂಡಿಸಿದ ಬಿಜೆಪಿ ಅಧ್ಯಕ್ಷ
ಅಹಮದಾಬಾದ್, ಜೂನ್. 07: ಬಿಜೆಪಿ ನಾಗಾಲ್ಯಾಂಡ್ ಅಧ್ಯಕ್ಷ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಬ್ಬರು ನಾಗಾಲ್ಯಾಂಡ್ ವ್ಯಕ್ತಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ್ದಾರೆ. ಇದು ದ್ವೇಷದ ಅಪರಾಧ ಎಂದಿರುವ ಅವರು, ಆಹಾರ ಮತ್ತು ಸಂಸ್ಕೃತಿಯ ಕಾರಣಕ್ಕೆ ಹಲ್ಲೆಗೊಳಗಾವುದನ್ನು ವಿರೋಧಿಸಿ ಬುಧವಾರ ಟ್ವೀಟ್ ಮಾಡಿದ್ದಾರೆ.
ದಾಳಿ ಘಟನೆಯ ಸುದ್ದಿ ವರದಿಯನ್ನು ಲಗತ್ತಿಸಿ, ಟ್ವೀಟ್ ಮಾಡಿರುವ ಈಶಾನ್ಯದ ಜನಪ್ರಿಯ ನಾಯಕ "ಮಾಂಸಾಹಾರ ಮತ್ತು ಈಶಾನ್ಯ ಆಹಾರವನ್ನು ಮಾರಾಟ ಮಾಡಿದ್ದಕ್ಕಾಗಿ ನಾಗಾಲ್ಯಾಂಡ್‌ನ ಇಬ್ಬರು ಪುರುಷರ ಮೇಲೆ ಇತ್ತೀಚೆಗೆ ನಡೆದ ದ್ವೇಷದ ಅಪರಾಧದ ಬಗ್ಗೆ ಹೇಳಲು ನನಗೆ ತುಂಬಾ ನೋವಾಗಿದೆ. ಈಶಾನ್ಯ ಪ್ರದೇಶದ ನಮ್ಮ ಸಹೋದರರು ಅವರ ಸಾಂಸ್ಕೃತಿಕ ಗುರುತು ಮತ್ತು ಆಹಾರದ ಆಯ್ಕೆಗಳಿಗಾಗಿ ತಾರತಮ್ಯಕ್ಕೆ ಒಳಗಾಗಿ ಮಾಡುವುದನ್ನು ನೋಡುವುದು ನಿರಾಶಾದಾಯಕವಾಗಿದೆ. ನಾವು ಪ್ರೀತಿ ಮತ್ತು ಸಹಾನುಭೂತಿಯನ್ನು ಹರಡೋಣ, ದ್ವೇಷ ಮತ್ತು ಹಗೆತನವನ್ನು ಅಲ್ಲ" ಎಂದಿದ್ದಾರೆ.

I am deeply pained to hear about the recent hate crime against two men from Nagaland who were attacked for selling non-vegetarian and northeastern food. It is disheartening to see our brothers from the northeastern region being targeted and discriminated against for their… pic.twitter.com/z0DK5zKvXy
— Temjen Imna Along (@AlongImna) June 7, 2023
ಗುಜರಾತ್‌ನ ಅಹಮದಾಬಾದ್ ನಗರದ ಚಾಣಕ್ಯಪುರಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಮಾಂಸಾಹಾರ ಮತ್ತು ಈಶಾನ್ಯ ಆಹಾರವನ್ನು ಮಾರಾಟ ಮಾಡುವ ಮತ್ತು ಬಡಿಸುವ ವಿಷಯದ ಮೇಲೆ 10 ವ್ಯಕ್ತಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುದ್ದಿ ವರದಿ ಹೇಳಿದೆ.
ನಾಗಾಲ್ಯಾಂಡ್‌ನ ಇಬ್ಬರು ಬಲಿಪಶುಗಳನ್ನು ರೊವಿಮೆಜೊ ಕೆಹಿ ಮತ್ತು ಜಮೀರ್ ಎಂದು ಗುರುತಿಸಲಾಗಿದೆ. ರೊವಿಮೆಜೊ ಕೆಹಿ ತನ್ನ ಸ್ನೇಹಿತರೊಬ್ಬರ ಮನೆಯಲ್ಲಿದ್ದರು, ಜಮೀರ್ ಗುಂಪಿನಿಂದ ದಾಳಿಗೆ ಒಳಗಾಗಿದ್ದಾರೆ ಎಂದು ತಿಳಿಸಲು ಅವರ ಮಾಲೀಕರು ರೊವಿಮೆಜೊ ಕೆಹಿ ಅವರನ್ನು ಕರೆದಿದ್ದಾರೆ. ಬೇಸ್ ಬಾಲ್ ಬ್ಯಾಟ್‌ನಿಂದ ಇಬ್ಬರು ನಾಗಾಲ್ಯಾಂಡ್ ವ್ಯಕ್ತಿಗಳನ್ನು ಹೊಡೆಯಲಾಗಿದೆ.

ತನ್ನ ಮತ್ತು ಜಮೀರ್ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ಹಲ್ಲೆ ನಡೆಸಲಾಗಿದೆ ಎಂದು ರೊವಿಮೆಜೊ ಹೇಳಿದ್ದಾರೆ. ಗ್ರಾಹಕರೊಬ್ಬರು ಮಧ್ಯಪ್ರವೇಶಿಸಿ ಇಬ್ಬರನ್ನು ರಕ್ಷಿಸಲು ಪ್ರಯತ್ನಿಸಿದಾಗ, ಗ್ರಾಹಕರಿಗೂ ಗಾಯಗಳಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. 10 ಜನರು ರೋವಿಮೆಜೊ ಮತ್ತು ಜಮೀರ್‌ಗೆ ಬೆದರಿಕೆ ಹಾಕಿದ್ದಾರೆ. ಈ ಪ್ರದೇಶದಲ್ಲಿ ಮಾಂಸಾಹಾರ ಮತ್ತು ಈಶಾನ್ಯ ಆಹಾರವನ್ನು ಮಾರಾಟ ಮಾಡುವುದನ್ನು ಮುಂದುವರೆಸಿದರೆ ಇಬ್ಬರನ್ನೂ ಕೊಲ್ಲಲಾಗುವುದು ಎಂದು ಹೇಳಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.
ಹಲ್ಲೆಗೊಳಗಾದ ಇಬ್ಬರನ್ನು ಅವರ ಮಾಲೀಕರು ಆಸ್ಪತ್ರೆಗೆ ಕರೆದೊಯ್ದದು ಚಿಕಿತ್ಸೆ ಕೊಡಿಸಿದ್ದಾರೆ. ಬೇಸ್‌ಬಾಲ್ ಬ್ಯಾಟ್‌ನಿಂದ ಹೊಡೆದ ಕಾರಣ ರೋವಿಮೆಜೊ ತಲೆಗೆ ಭಾರಿ ಗಾಯವಾಗಿದೆ. ಆತನ ತಲೆಗೆ ನಾಲ್ಕು ಹೊಲಿಗೆ ಹಾಕಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.












Click it and Unblock the Notifications