ಬಿಜೆಪಿ ವರಿಷ್ಠರಿಗೆ ವರುಣ್ ಗಾಂಧಿ 'ಕಿರಿಕಿರಿ' ತಂದಿದ್ದು ಯಾಕೆ?

Posted By:
Subscribe to Oneindia Kannada

ಕೆಲವೇ ಕೆಲವು ವರ್ಷಗಳ ಹಿಂದೆ ಬಿಜೆಪಿಗೆ ತನ್ನ ಡೈನಾಮಿಕ್ ನಡೆ, ನುಡಿಯಿಂದ ಮುಜುಗರ ತಂದಿಡುತ್ತಿದ್ದ ಬಿಜೆಪಿಯ ಯುವ ಮುಖಂಡ, ಸುಲ್ತಾನಪುರ ಕ್ಷೇತ್ರದ ಸಂಸದ, ಗಾಂಧಿ ಪರಿವಾರದ ವರುಣ್ ಗಾಂಧಿ ತಮ್ಮ ಕಾರ್ಯಶೈಲಿಯನ್ನೇ ಇತ್ತೀಚಿನ ದಿನಗಳಲ್ಲಿ ಬದಲಸಿಕೊಂಡಿದ್ದರು.

ತಾನಾಯಿತು, ತನ್ನನ್ನು ಆರಿಸಿದ ಕ್ಷೇತ್ರವಾಯಿತು ಎಂದು ರಾಜಕೀಯ ಮಾಡಿಕೊಂಡು ಬರುತ್ತಿದ್ದ ವರುಣ್ ಗಾಂಧಿ, ಸುಲ್ತಾನಪುರ ಕ್ಷೇತ್ರದಲ್ಲಿ ಪಾದರಸದಂತೆ ಓಡಾಡುತ್ತಾ ಜನಸಾಮಾನ್ಯರಿಗೆ ಹತ್ತಿರವಾಗಿದ್ದವರು. ಜೊತೆಗೆ, ಸಾಮಾಜಿಕ ತಾಣದಲ್ಲಿ ಕೂಡಾ ಅಷ್ಟೇ ಜನಪ್ರಿಯ ವ್ಯಕ್ತಿ. (ವರುಣ್ ಗಾಂಧಿ ಟಾರ್ಗೆಟ್, #SoniaLalitDeal ಟ್ರೆಂಡಿಂಗ್)

ಆದರೆ, ರಾಜಕೀಯ ಎಂದ ಮೇಲೆ ಕುರ್ಚಿ ಮೇಲಿನ ಆಸೆ 'ಬ್ರಹ್ಮ ಲಿಖಿತ' ಇರಬಹುದೇನೋ ಎನ್ನುವಂತೆ ವರುಣ್ ಗಾಂಧಿ ಕೂಡಾ ಅದಕ್ಕೆ ಹೊರತಾಗಿಲ್ಲ ಎನ್ನುವುದು ಸದ್ಯದ ಉತ್ತರಪ್ರದೇಶ ರಾಜಕೀಯದಲ್ಲಿ ಹರಿದಾಡುತ್ತಿರುವ ಸುದ್ದಿ.

2017ರಲ್ಲಿ ನಡೆಯಲಿರುವ, ಬಹು ನಿರೀಕ್ಷಿತ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಗೆಲ್ಲಲು ಎರಡು ರಾಷ್ಟ್ರೀಯ ಮತ್ತು ಎರಡು ಪ್ರಾದೇಶಿಕ ಪಕ್ಷಗಳು ಈಗಾಗಲೇ ವರ್ಕೌಟ್ ಆರಂಭಿಸಿದೆ. ಈಗ ಚುನಾವಣೆ ನಡೆದರೆ ಮತದಾರರ ನಾಡಿಮಿಡಿತ ಯಾರ ಪರ ಎನ್ನುವ ಸಮೀಕ್ಷೆಗೆ ಜನ 'ಆನೆ' ಪರವಾಗಿ ನಿಂತಿದ್ದಾರೆ.

ಮೋದಿ ಜನಪ್ರಿಯತೆ, ಅಮಿತ್ ಶಾ ತಂತ್ರಗಾರಿಕೆಯ ಲಾಭವನ್ನು ಬಳಸಿಕೊಂಡು ಅಧಿಕಾರಕ್ಕೆ ಏರಲೇ ಬೇಕು ಎನ್ನುವ ಮಹತ್ವಾಕಾಂಕ್ಷೆಯ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿಗೆ ಉತ್ತರಪ್ರದೇಶದಲ್ಲಿ ನಾಯಕತ್ವದ ಸಮಸ್ಯೆ ಎದುರಾಗುತ್ತಿದೆ ಎನ್ನುವುದು ಸದ್ಯದ ಸುದ್ದಿ. (ಮರಣ ದಂಡನೆ ವಿರೋಧಿಗಳ ಸಾಲಿಗೆ ವರುಣ್)

ಹಾಗಂತ, ಬಿಜೆಪಿಗೆ ಇಲ್ಲಿ ನಾಯಕರ ಸಮಸ್ಯೆಯೇನೂ ಇಲ್ಲ, ಯಾರನ್ನು ನಾಯಕರನ್ನಾಗಿ ಮಾಡಬೇಕು ಎನ್ನುವುದೇ ಇಲ್ಲಿ ಪಕ್ಷಕ್ಕಿರುವ ದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರ ಕಂಡುಕೊಂಡು, ಚುನಾವಣೆಗೆ ಕಹಳೆ ಊದೋಣ ಎಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಅಲಹಾಬಾದ್ ನಗರದಲ್ಲಿ ಆಯೋಜಿಸಿದರೆ, ಇದು ಬಿಜೆಪಿಯ ಹಿರಿಯ ತಲೆಗಳನ್ನು ಇನ್ನಷ್ಟು ಗೊಂದಲಕ್ಕೀಡಾಗುವಂತೆ ಮಾಡಿದೆ. ಮುಂದೆ ಓದಿ..

ಉತ್ತರಪ್ರದೇಶ ಸಿಎಂ ಅಭ್ಯರ್ಥಿ

ಉತ್ತರಪ್ರದೇಶ ಸಿಎಂ ಅಭ್ಯರ್ಥಿ

ಬಿಜೆಪಿ ಇಲ್ಲಿ ಸಿಎಂ ಅಭ್ಯರ್ಥಿಯನ್ನಾಗಿ ಯಾರನ್ನು ಘೋಷಿಸಬೇಕು ಎನ್ನುವ ಗೊಂದಲಲ್ಲಿದೆ. ಈಗಾಗಲೇ ಸ್ಮೃತಿ ಇರಾನಿ, ರಾಜನಾಥ್ ಸಿಂಗ್ ಮತ್ತು ಹಿಂದಿನ ಉತ್ತರಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಹೆಸರೂ ಕೇಳಿ ಬರುತ್ತಿದೆ. ಇದಕ್ಕೆ ವರುಣ್ ಗಾಂಧಿ ಹೆಸರನ್ನು ಕಾರ್ಯಕರ್ತರು ತಾವಾಗಿಯೇ ಸೇರ್ಪಡೆಗೊಳಿಸಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿಣಿ

ರಾಷ್ಟ್ರೀಯ ಕಾರ್ಯಕಾರಿಣಿ

ಅಲಹಾಬಾದ್ ನಲ್ಲಿ ನಡೆದ ಎರಡು ದಿನಗಳ ಕಾರ್ಯಕಾರಿಣಿಯ ವೇಳೆ, ನಗರದ ತುಂಬಾ ಪೋಸ್ಟರ್ ಹಾಕಲಾಗಿತ್ತು. ಅದರಲ್ಲಿ ವರುಣ್ ಗಾಂಧಿ ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಪೋಸ್ಟರುಗಳು ರಾರಾಜಿಸುತ್ತಿದ್ದವು. ಇದಲ್ಲದೇ ಕಾರ್ಯಕಾರಿಣಿ ನಡೆಯುತ್ತಿದ್ದ ವೇಳೆಯೂ ವರುಣ್ ಗಾಂಧಿ ತಾನು ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದರು ಎನ್ನಲಾಗುತ್ತಿದೆ.

ಅಮಿತ್ ಶಾ

ಅಮಿತ್ ಶಾ

ವರುಣ್ ಗಾಂಧಿ ಮತ್ತು ಅವರ ಬೆಂಬಲಿಗರ ವರ್ತನೆಯ ಬಗ್ಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತೀವ್ರ ಬೇಸರಗೊಂಡಿದ್ದರು. ಜೊತೆಗೆ ವರುಣ್ ಗಾಂಧಿ ಪರಮಾಪ್ತರು ಎನ್ನಲಾಗುವ ಇಬ್ಬರು ಅವರ ಬೆಂಬಲಿಗರಿಗೂ ಶೋಕಾಸ್ ನೊಟೀಸ್ ನೀಡಿದ್ದಾರೆ.

ರಾಜ್ಯ ಘಟಕದಿಂದ ವಿವರಣೆ

ರಾಜ್ಯ ಘಟಕದಿಂದ ವಿವರಣೆ

ಇದಾದ ನಂತರ ಕಾರ್ಯಕಾರಿಣಿಯ ವೇಳೆಯೇ ವರುಣ್ ಗಾಂಧಿ ಬಗ್ಗೆ ವಿವರಣೆಯನ್ನು ನೀಡುವಂತೆ ಉತ್ತರಪ್ರದೇಶ ರಾಜ್ಯ ಘಟಕಕ್ಕೆ ಅಮಿತ್ ಶಾ ಸೂಚಿಸಿದ್ದಾರೆ. ಅಮಿತ್ ಶಾ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತರು ವರುಣ್ ಗಾಂಧಿ ಪರ ಜೈಕಾರ ಹಾಕಿದ್ದು ಅಮಿತ್ ಶಾ ಸಿಟ್ಟಿಗೆ ಇನ್ನೊಂದು ಕಾರಣ.

ಅಮಿತ್ ಶಾ ಕರೆದ ಸಭೆಗೆ ವರುಣ್ ಗೈರು

ಅಮಿತ್ ಶಾ ಕರೆದ ಸಭೆಗೆ ವರುಣ್ ಗೈರು

ಈ ಎಲ್ಲಾ ಘಟನೆಯಿಂದ ಸಿಟ್ಟಾದ ವರುಣ್ ಗಾಂಧಿ, ಸೋಮವಾರ (ಜೂ 13) ಅಮಿತ್ ಶಾ ಕರೆದಿದ್ದ ಉತ್ತರಪ್ರದೇಶ ಸಂಸದರ ಸಭೆಗೆ ಗೈರಾದರು. ಪತ್ನಿ ಅನಾರೋಗ್ಯದ ಕಾರಣ ನೀಡಿ ದೆಹಲಿಗೆ ತೆರಳಿದ್ದಾರೆ. ಬಹುತೇಕ ಸಂಸದರು ಹಾಜರಿದ್ದ ಈ ಸಭೆಯಲ್ಲಿ ವರುಣ್ ಗಾಂಧಿ ಗೈರಾಗಿದ್ದು ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP MP from Sultanpur Varun Gandhi skipped an important meeting of the BJP's lawmakers called by party president Amit Shah on Monday (June 13) evening.
Please Wait while comments are loading...